ವೈಕುಂಠದಲ್ಲಿ ಅಪ್ಪಾಜಿಗೆ ಪುನೀತ್ ರಾಜ್‌ಕುಮಾರ್ ಸರ್‌ಪ್ರೈಸ್‌!

By Suvarna News  |  First Published Nov 5, 2021, 1:28 PM IST

ವಿಷ್ಣುವಿನ ಪಾದ ಸೇರಿದ ಪುನೀತ್‌ ರಾಜ್‌ಕುಮಾರ್‌ ಅವರು ಹಿಮಚ್ಛಾದಿತ ಬೆಟ್ಟ, ಪಾರಿವಾಳ ಹಿನ್ನೆಲೆಯ ವೈಕುಂಠದಲ್ಲಿ ತಂದೆ ಡಾ.ರಾಜ್‌ಕುಮಾರ್‌ಗೆ ಹಿಂದಿನಿಂದ ಬಂದು ಅವರ ಕಣ್ಣುಮುಚ್ಚಿ ಸರ್‌ಪ್ರೈಸ್‌ ನೀಡುವ ಕಲ್ಪನೆಯಲ್ಲಿ ಚಿತ್ರ ರಚಿಸಲಾಗಿದೆ.


ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾಗಿ ಇಂದಿಗೆ ಒಂದು ವಾರ ಕಳೆದಿದೆ. ಸದ್ಯ ಇಹಲೋಕ ತ್ಯಜಿಸಿರುವ ಅಪ್ಪು ತಂದೆಯೊಂದಿಗೆ ವೈಕುಂಠದಲ್ಲಿ ಸುಂದರವಾಗಿ ಸಮಯ ಕಳೆಯುತ್ತಿರುವಂತಹ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral) ಆಗುತ್ತಿದೆ. 

ವಿಶೇಷವಾಗಿ ಹನುಮನನ್ನು ಭಜರಂಗಿಯಾಗಿ ಚಿತ್ರಿಸಿ ಎಲ್ಲೆಡೆ ಪ್ರಸಿದ್ಧಿ ಪಡೆದ ಚಿತ್ರಕಲಾವಿದ ಕರಣ್‌ ಆಚಾರ್ಯ (Karan Acharya) ಈ ಚಿತ್ರವನ್ನು ರಚಿಸಿದ್ದಾರೆ. ಈ ಕಾಲ್ಪನಿಕ ಚಿತ್ರಕ್ಕೆ 'ವೈಂಕುಠ' ಎಂದು ಹೆಸರಿಟ್ಟಿದ್ದು, ಇದನ್ನು ಕರಣ್‌ ಆಚಾರ್ಯ ಗುರುವಾರ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ವಿಷ್ಣುವಿನ ಪಾದ ಸೇರಿದ ಪುನೀತ್‌ ರಾಜ್‌ಕುಮಾರ್‌ ಅವರು ಹಿಮಚ್ಛಾದಿತ ಬೆಟ್ಟ, ಪಾರಿವಾಳ ಹಿನ್ನೆಲೆಯ ವೈಕುಂಠದಲ್ಲಿ ತಂದೆ (ದಿ. ಡಾ.ರಾಜ್‌ಕುಮಾರ್‌)ಗೆ ಹಿಂದಿನಿಂದ ಬಂದು ಅವರ ಕಣ್ಣುಮುಚ್ಚಿ ಸರ್‌ಪ್ರೈಸ್‌ ನೀಡುವ ಕಲ್ಪನೆಯಲ್ಲಿ ಚಿತ್ರ ರಚಿಸಲಾಗಿದೆ. ಇದೀಗ ಈ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದ್ದು, ನೆಟ್ಟಿಗರು ತರಹೆವಾರಿ ಕಮೆಂಟ್ ಮಾಡುತ್ತಿದ್ದಾರೆ. 
 

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by Kiran Kumar K (@karanacharya.kk)


'ಪುನೀತ್ ಅವರು ರಾಜ್ ಅವರ ಜೊತೆ ಪಾರ್ವತಮ್ಮ ಅವರ ಜೊತೆ ಮೇಲೆ ಸ್ವರ್ಗದಲ್ಲಿ ಇರುವಂತೆ ತೋರಿಸುತ್ತಿರು ಹಲವು ಫೋಟೋಗಳನ್ನು ನೋಡಿ ಅದೇನು ರಿಯಾಕ್ಟ್ ಮಾಡಬೇಕು ಅಂತಲೇ ನನಗೆ ಗೊತ್ತಾಗ್ತಾ ಇಲ್ಲ ಒಂದಂತೂ ನಿಜ ಈತರದ ಫೋಟೋಗಳನ್ನು ನೋಡೋಕೆ ನಾನು ಇಷ್ಟ ಪಡೋಲ್ಲ ಯಾಕೆ ಅಂದ್ರೆ ಪುನೀತ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಅಂತ ಇನ್ನೂ ಮನಸ್ಸು ಒಪ್ಪಿಕೊಳ್ತಿಲ್ಲ ತುಂಬಾ ನೋವು ಕೊಡ್ತಾ ಇರೋ ಸಾವು ಪುನೀತ್ ಅವರದು ಇಂತಹ ಫೋಟೋಗಳನ್ನು ಬಿಟ್ಟು ಪುನೀತ್ ಅವರ ಬಗ್ಗೆ ಬೇರೆ ಯಾವದಾದ್ರೂ ವಿಡಿಯೋಗಳನ್ನು ಫೋಟೋಗಳನ್ನು ನೋಡೋಕೆ ದುಃಖ ಆದ್ರು ಒಂದು ಖುಷಿ ಇರುತ್ತೆ ಅದಕ್ಕಾಗಿ ಅವುಗಳನ್ನು ನೋಡೋಕೆ ಏನು ಅನಿಸೋಲ್ಲ ಈಗ 7 ದಿನಗಳಿಂದ ಟಿವಿಲೀ ಪುನೀತ್ ಅವರ ಸುದ್ದಿಗಳನ್ನು ಬಿಟ್ಟು ಬೇರೆ ಏನನ್ನು ನೋಡ್ತಾ ಇಲ್ಲ ಪುನೀತ್ ಅವರು ನಮ್ಮೊಂದಿಗೆ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳೋಕೆ ಆಗ್ತಾನೇ ಇಲ್ಲ ಒಂದೊಂದು ಸಲ ಅವರು ನಮ್ಮೊಂದಿಗೆ ಇಲ್ಲ ಅನ್ನೋದೇ ನಿಜ ಅಂತ ಮನಸ್ಸಿಗೆ ಅನಿಸಿದಾಗ ಮನಸ್ಸು ತುಂಬಾ ಭಾರವಾಗುತ್ತಿದೆ.'

"

ಕರಣ್ ಆಚಾರ್ಯ ದೇವರ ಉಗ್ರ ರೂಪದ ಚಿತ್ರ ಬಿಡಿಸುವ ಹಿಂದಿನ ಕಾರಣವೇನು..?

'ಪ್ರೀತಿಯ ಮಡದಿ ಪಾರ್ವತಮ್ಮ ಹಿಂದಿನಿಂದ ಬಂದು ಕಣ್ಣು ಮುಚ್ಚಿ ಕೀಟಲೆ ಮಾಡ್ತಿದಾರೆ ಅಂತ ಖುಷಿಯಲ್ಲಿ ನಗ್ತಿದ್ದಾರೆ ಅಣ್ಣಾವ್ರು. 'ಅಪ್ಪಾಜೀ.. ಇಲ್ನೋಡೀ. ಇದು ನಾನು.. ನಿಮ್ಮ ಅಪ್ಪು.' ಅನ್ನೋದನ್ನ ಕೇಳಿ ಕಣ್ಣು ಬಿಟ್ಟು ನೋಡಿ ಅಲ್ಲಿ ಈ ಎಳೆಯ ಹುಡುಗನನ್ನು ಕಂಡಾಗ ರಾಜ್ ಮುಖ ಭಾವನೆ ಹೇಗಿರಬಹುದು ಅನ್ನುವುದನ್ನು ಈ ಚಿತ್ರವನ್ನು ನೋಡುವ ನಮ್ಮ ಕಲ್ಪನೆಗೆ ಬಿಟ್ಟಿದ್ದೀರಿ ಅಲ್ವಾ ಕರಣ್ ಸರ್.?! ಮಾತುಗಳಿಗೆ ನಿಲುಕದ ಅತ್ಯಂತ ಮಾರ್ಮಿಕ ಅದ್ಭುತ ಚಿತ್ರ ಇದು. ನಿಮ್ಮ ಕಲ್ಪನೆಗೆ, ಚಿತ್ರ ರಚನಾ ಕೌಶಲ್ಯಕ್ಕೆ ನೂರು ನೂರು ನಮನಗಳು.'

'ಜಸ್ಟ್ ಎದ್ದು ಕುಟುಂಬದ ಪೋಟೋ ನೋಡಿ ದೇವರ ಚಿತ್ರ ನೋಡಿ ಮಲಗಿದ್ದಲ್ಲೆ ಸುದ್ದಿ ನೋಡುವ ಅಂತ ಫೇಸ್‌ಬುಕ್‌ಗೆ ಬಂದರೆ ಕಾಣಿಸಿದ್ದು, ಈ ಅದ್ಬುತ ಚಿತ್ರ. ನೋಡಿ ಬೇಸರವಾಯಿತು. ಈ ದೃಶ್ಯ ನಿಜವಾಗಿ ನೆಡೆದು ರಾಜ್ ಕುಮಾರ್ ಅವರು ಪುನೀತ್ ಅವರ ನೋಡಿದರೆ ಅವರ ನಡುವಿನ ಸಂಭಾಷಣೆ ಹೇಗಿರುತಿತ್ತು ಅನ್ನೋ ಕಲ್ಪನೆ ಶುರುವಾಯಿತು. ಅದ್ಬುತ ಕಲ್ಪನೆ.' ಮತ್ತು 'ರವಿ ಕಾಣದನ್ನು ಕವಿ ಕಂಡ, ಕವಿಯೂ ಕಣಲಾರದನ್ನು ಕರಣ್ ಕಾಣುತ್ತಿದ್ದಾರೆ.' ಹಾಗೂ 'ನಿಮ್ಮ ಈ ಅದ್ಬುತವಾದ ಕಲೆಗೆ ಕೋಟಿ ಕೋಟಿ ನಮನ', 'ಜೊತೆಗಿರದ ಜೀವ ಎಂದಿಗೂ ಜೀವಂತ' ಎಂದು ಸೇರಿದಂತೆ ಪುನೀತ್ ನೆನೆದು ಅವರಿಗೆ ನಮನಗಳನ್ನು ನೆಟ್ಟಿಗರು ಕಮೆಂಟಿಸುತ್ತಿದ್ದಾರೆ.

ಬಾಲ್ಯದಲ್ಲೇ ಡಾಕ್ಟರ್ ಆಗೋ ಕನಸು ಕಂಡಿದ್ದ ಪುನೀತ್ ರಾಜ್‌ಕುಮಾರ್

ಇನ್ನು, ಮೂಲತಃ ಕಾಸರಗೋಡು ಕುಂಬಳೆ ನಿವಾಸಿಯಾದ ಕರಣ್‌ ಆಚಾರ್ಯ, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಈ ಹಿಂದೆ ಇವರು ರಚಿಸಿದ ಭಜರಂಗಿ ಚಿತ್ರ ಅಪಾರ ಜನಮನ್ನಣೆಯನ್ನು ಗಳಿಸಿತ್ತಲ್ಲದೆ, ವಾಹನಗಳಲ್ಲೂ ಅದೇ ಚಿತ್ರ ಕಂಗೊಳಿಸುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೆ ಭಾಷಣಕ್ಕೆ ಮಂಗಳೂರಿಗೆ ಆಗಮಿಸಿದ ವೇಳೆ ಕರಣ್‌ ಆಚಾರ್ಯರ ಭಜರಂಗಿ ಚಿತ್ರಕಲೆಯ ಆಕರ್ಷಣೆಯನ್ನು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೂ ಕನ್ನಡ ಸಿನಿ ಪ್ರೇಮಿಗಳ ನೆಚ್ಚಿನ ನಟರು, ಒಂದು ಕಾಲದಲ್ಲಿ ಕುಚುಕು ಗೆಳೆಯರು ಅಗಿದ್ದಂತೆ ಕರುನಾಡ ದಾಸ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಫೋಟೋವನ್ನು ಕಲಾವಿದ ಕರಣ್ ಆಚಾರ್ಯ ವಿಭಿನ್ನ ರೀತಿಯಲ್ಲಿ ಡಿಸೈನ್ ಮಾಡಿದ್ದರು. ಇದಲ್ಲದೇ ಹಲವಾರು ಚಿತ್ರಗಳನ್ನು ಕರಣ್‌ ಆಚಾರ್ಯ ರಚಿಸಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ.

click me!