ಆಕ್ಟ್ 1978 ಹಾಡು ಬಿಡುಗಡೆ ಮಾಡಿದ ಶಿವಣ್ಣ; ನವೆಂಬರ್‌1ರಂದು ಸಿನಿಮಾ ಬಿಡುಗಡೆ!

Published : Oct 28, 2020, 08:54 AM IST
ಆಕ್ಟ್ 1978 ಹಾಡು ಬಿಡುಗಡೆ ಮಾಡಿದ ಶಿವಣ್ಣ; ನವೆಂಬರ್‌1ರಂದು ಸಿನಿಮಾ ಬಿಡುಗಡೆ!

ಸಾರಾಂಶ

ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರದ ಹಾಡನ್ನು ಶಿವರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಬರೆದಿದ್ದು, ಭಾರಿ ಮೆಚ್ಚುಗೆ ಪಡೆದುಕೊಂಡಿದೆ. 

ಪುನೀತ್‌ ರಾಜ್‌ಕುಮಾರ್‌ ಈ ಹಾಡಿನ ಕುರಿತು ‘ಸಿಂಪಲ್‌ ಆ್ಯಂಡ್‌ ಸೂಪರ್‌ ಹಾಡು’ ಎಂದು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡು ಲಭ್ಯ.

ಮಸೋರೆಯ 'ಆಕ್ಟ್‌-1978'ನಲ್ಲಿ ಬಾಂಬ್ ಆದ ಯಜ್ಞಾ ಶೆಟ್ಟಿ! 

‘ಆಕ್ಟ್ 1978’ ಚಿತ್ರಕ್ಕೆ ಕತೆಗಾರ ದಯಾನಂದ ಟಿಕೆ ಕತೆ ಬರೆದಿದ್ದಾರೆ. ಯು ಪ್ರಮಾಣ ಪತ್ರ ಸ್ವೀಕರಿಸಿರುವ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕನ್ನಡ ರಾಜ್ಯೋತ್ಸವ, ನವೆಂಬರ್‌ 1ಕ್ಕೆ ಸಿನಿಮಾ ಥಿಯೇಟರ್‌ಗಳಿಗೆ ಬರುತ್ತಿದೆ. ಜನ ಸಾಮಾನ್ಯರಿಗೆ ಸಂಬಂಧಿಸಿದಂತೆ ಒಂದು ಕಾಯಿದೆಯ ಹುಡುಕಾಟ ಹಾಗೂ ಅದರ ವಿಶ್ಲೇಷಣೆ ನಮ್ಮನ್ನು ಬೆರಗು ಮೂಡಿಸಿದೆ. ಇದರ ಪರಿಣಾಮವೇ ಈ ಸಿನಿಮಾ’ ಎನ್ನುತ್ತಾರೆ ನಿರ್ದೇಶಕ ಮಂಸೋರೆ. 
ದೇವರಾಜ್‌ ಆರ್‌ ಈ ಚಿತ್ರದ ನಿರ್ಮಾಪಕರು. ಬಿ ಸುರೇಶ್‌, ಪ್ರಮೋದ್‌ ಶೆಟ್ಟಿ, ಅಚ್ಯುತ್‌ ಕುಮಾರ್‌, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ,ಶರಣ್ಯ, ಶೋಭರಾಜ್‌, ಅವಿನಾಶ್‌, ರಾಘು ಶಿವಮೊಗ್ಗ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ರಿಲೀಸ್ ಮಾಡಲಾಗಿದ್ದ ಪೋಸ್ಟರ್ ಲುಕ್‌ನಲ್ಲಿ ಯಜ್ಞಾ ಶೆಟ್ಟಿ ದೇಹಕ್ಕೆ ಬಾಂಬ್ ಸುತ್ತಿಕೊಂಡು, ಕೈಯಲ್ಲಿ ವೈರ್‌ಲೆಸ್‌ ಜತೆ ಪಿಸ್ತೂಲು ಹಿಡಿದಯ ಕೂತಿದ್ದರು. ಚಿತ್ರಕ್ಕೆ ಹೆಸರು ಕೂಡ ಭಿನ್ನವಾಗಿರುವ ಕಾರಣ ಸಾಕಷ್ಟು ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟ ವಿ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ 'ಕ್ರೇಜಿ ಸ್ಟಾರ್' ಎಂಟ್ರಿ ಪಕ್ಕಾನಾ?
Yash Movie: ಟಾಕ್ಸಿಕ್ ಗಲ್ಲಾಪೆಟ್ಟಿಗೆಗೆ ಮೂರು ದಿನದಲ್ಲಿ ಸೇರಿದ್ದೆಷ್ಟು ಕೋಟಿ ?