ಐದು ಭಾಷೆಗಳಲ್ಲಿ ಹೊಸಬರ ಚಿತ್ರ; ಗಮನ ಸೆಳೆಯುತ್ತಿರುವ 'ಕಾಲವೇ ಮೋಸಗಾರ' ಟೀಸರ್‌!

By Kannadaprabha News  |  First Published Jun 1, 2020, 9:05 AM IST

ಹೊಸಬರ ಚಿತ್ರವೊಂದರ ಟೀಸರ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಹೆಸರು ‘ಕಾಲವೇ ಮೋಸಗಾರ’. 


ಇತ್ತೀಚೆಗಷ್ಟೆಈ ಚಿತ್ರದ ಟೀಸರ್‌ ಬಿಡುಗಡೆ ಆಗಿದ್ದು, ಸಾಕಷ್ಟುಕುತೂಹಲಭರಿತವಾಗಿದೆ. ವಿಶೇಷ ಅಂದರೆ ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕನ್ನಡದಲ್ಲಿ ‘ಕಾಲವೇ ಮೋಸಗಾರ’ ಹೆಸರಿನಲ್ಲಿ ತೆರೆಕಂಡರೆ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ‘ಲಾಸ್ಟ್‌ ಪೆಗ್‌’ ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ.

ಯಾವ ನಟಿಗೂ ಕಮ್ಮಿಇಲ್ಲ 'ಕಮಲಿ' ಧಾರಾವಾಹಿಯ 'ರಚನಾ'! 

Tap to resize

Latest Videos

undefined

ಅಂದಹಾಗೆ ಚಿತ್ರದಲ್ಲಿ ನಾಯಕನಾಗಿ ನಟಿಸಿರುವುದು ಭರತ್‌ ಸಾಗರ್‌, ಯಶಸ್ವಿನಿ ಹಾಗೂ ಕಿರಕ್‌ ಪಾರ್ಟಿ ಚಿತ್ರದ ಶಂಕರ್‌ಮೂರ್ತಿ. ಸಂಜಯ್‌ ವದತ್‌ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ.

 

ಬಹುತೇಕ ಎಲ್ಲರಿಗೂ ಮೊದಲ ಚಿತ್ರವಾಗಿರುವ ‘ಕಾಲವೇ ಮೋಸಗಾರ’ ಚಿತ್ರಕ್ಕೆ ಟಗರು ಚಿತ್ರದ ಖ್ಯಾತಿಯ ಅಂಟೋನಿ ದಾಸ್‌ ಹಾಡಿರುವ ‘ಬಾಟ್ಲು ಬೇಕಾ, ಹುಡ್ಗಿ ಬೇಕಾ’ ಎನ್ನುವ ಹಾಡು ಕೂಡ ತುಂಬಾ ವೈರಲ್‌ ಆಗಿದೆ. ಟಿಕ್‌ಟಾಕ್‌ನಂತಹ ಸಾಮಾಜಿಕ ತಾಣದಲ್ಲಿ ಈ ಹಾಡಿನದ್ದೇ ಸದ್ದು. ಆಂಟೋನಿ ದಾಸ್‌ ಅವರ ದ್ವನಿ ಕೂಡ ಈ ಹಾಡಿನ ಪ್ರಸಿದ್ದಿಗೆ ಕಾರಣ. ಇದೊಂದು ಕುತೂಹಲಕಾರಿ ಪ್ರೇಮ ಕತೆಯ ಸಿನಿಮಾ. ಒಬ್ಬ ಹುಡುಗಿಗಾಗಿ ಇಬ್ಬರು ಹುಡುಗರು ನಡೆಸುವ ಹೋರಾಟ. ಇಲ್ಲಿ ಹುಡುಗಿ ಮನೆಯವರು ತೋರಿಸಿದ ಹುಡುಗನನ್ನು ಮದುವೆ ಆಗುತ್ತಾಳೆಯೇ ಅಥವಾ ತಾನು ಪ್ರೀತಿಸಿದ ಹುಡುಗನ ಹಿಂದೆ ಹೋಗುತ್ತಾಳೆಯೇ ಎಂಬುದು ಚಿತ್ರದ ಕತೆಯಾದರೆ ಈ ಇಬ್ಬರ ಹುಡುಗರ ಹಿನ್ನೆಲೆ ಸಾಕಷ್ಟುವಿಶೇಷ ಮತ್ತು ವಿಚಿತ್ರವಾಗಿ ಕೂಡಿರುತ್ತದೆ. ಈ ಕಾರಣಕ್ಕೆ ‘ಕಾಲವೇ ಮೋಸಗಾರ’ ಚಿತ್ರ ಒಂದು ವಿಭಿನ್ನ ಸಿನಿಮಾ ಆಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

click me!