Kabzaa Trailer ಬಿಡುಗಡೆ ಮಾಡಿದ ಬಾಲಿವುಡ್‌ ಬಿಗ್‌ ಬಿ: ಎರಡೂವರೆ ಗಂಟೆ ತಡವಾಗಿ ರಿಲೀಸ್‌..!

Published : Mar 04, 2023, 06:48 PM ISTUpdated : Mar 04, 2023, 08:05 PM IST
Kabzaa Trailer ಬಿಡುಗಡೆ ಮಾಡಿದ ಬಾಲಿವುಡ್‌ ಬಿಗ್‌ ಬಿ: ಎರಡೂವರೆ ಗಂಟೆ ತಡವಾಗಿ ರಿಲೀಸ್‌..!

ಸಾರಾಂಶ

ಕಬ್ಜ ಟ್ರೇಲರ್‌ ಬಿಡುಗಡೆ ಬಗ್ಗೆ 2 ದಿನಗಳಿಂದ ಸುದ್ದಿಯಾಗುತ್ತಿದೆ. ಕಬ್ಜ ಟೀಸರ್‌ ಬಿಡುಗಡೆಯಾದಾಗಲೂ ಸಾಕಷ್ಟು ಸದ್ದು ಮಾಡಿತ್ತು. ಇತ್ತೀಚೆಗೆ, ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವಣ್ಣ ಸಹ ಅಭಿನಯಿಸುತ್ತಿದ್ದಾರೆ ಎಂಬ ಬಿಗ್‌ ಸರ್‌ಪ್ರೈಸ್‌ ಘೋಷಣೆಯಾಗಿದೆ.

ಬೆಂಗಳೂರು (ಮಾರ್ಚ್‌ 4, 2023) : ಸ್ಯಾಂಡಲ್‌ವುಡ್‌  ಸೂಪರ್‌ ಸ್ಟಾರ್‌ಗಳಾದ ಉಪೇಂದ್ರ, ಸುದೀಪ್‌ ಹಾಗೂ ಶಿವಣ್ಣ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜದ ಬಹು ನಿರೀಕ್ಷಿತ ಟ್ರೇಲರ್‌ ಅನ್ನು ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ರಿಲೀಸ್‌ ಮಾಡಿದ್ದಾರೆ. ಸಂಜೆ 5. 02ಕ್ಕೆ ಬಿಡುಗಡೆಯಾಗಬೇಕಿದ್ದ ಈ ಟ್ರೇಲರ್‌ ಅನ್ನು ಸಂಜೆ 7: 46ರ ವೇಳೆಗೆ ಬಿಗ್‌ ಬಿ ಟ್ವೀಟ್‌ ಮೂಲಕ ಟ್ರೇಲರ್‌ ರಿಲೀಸ್‌ ಮಾಡಿದ್ದಾರೆ. ಮಾರ್ಚ್‌ 4 ಸಂಜೆ 5. 02ಕ್ಕೆ ಬಿಡುಗಡೆ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಣೆಯಾಗಿತ್ತು. ಸ್ಯಾಂಡಲ್‌ವುಡ್‌ನ ಮೂವರು ದಿಗ್ಗಜರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದೇ ದೊಡ್ಡ ವಿಚಾರವಾದರೆ, ಬಾಲಿವುಡ್‌ ದಿಗ್ಗಜ ಅಮಿತಾಭ್‌ ಬಚ್ಚನ್‌ ಈ ಟ್ರೇಲರ್‌ ಅನ್ನು ರಿಲೀಸ್‌ ಮಾಡ್ತಿರೋದು ಮತ್ತೊಂದು ದೊಡ್ಡ ವಿಚಾರ. ಆದರೆ, ಘೋಷಿತ ಸಮಯ ಮೀರಿ 2 ಗಂಟೆಗೂ ಹೆಚ್ಚು ಕಾಲ ಆದರೂ ಟ್ರೇಲರ್‌ ಬಿಡುಗಡೆ ಆಗಿರಲಿಲ್ಲ. ಇದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ, ಟ್ರೋಲ್‌ ವ್ಯಕ್ತವಾಗಿತ್ತು. . 

ಪ್ಯಾನ್‌ ಇಂಡಿಯಾ (Pan India) ಚಿತ್ರವಾದ ಕಬ್ಜ ಟ್ರೇಲರ್‌ (Kabzaa Trailer) ಬಿಡುಗಡೆ ಯಾವಾಗ, ಎಷ್ಟು ಹೊತ್ತಿಗೆ ಎಂದು ನೆಟ್ಟಿಗರು (Netizens) ಸಾಮಾಜಿಕ ಜಾಲತಾಣ (Social Media) ಟ್ವಿಟ್ಟರ್‌ (Twitter) ಸೇರಿ ಹಲವೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇನ್ನು, ಹಲವರು ಟ್ರೇಲರ್‌ಗೆ ಕಾದು ಕಾದು ಸಾಕಾಗಿ ಹೋಗಿದೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ. ನಾನಾ ರೀತಿಯಲ್ಲಿ ಟ್ವೀಟ್‌ಗಳನ್ನು (Tweet) ಮಾಡಿ, ವಿಭಿನ್ನ ಪೋಸ್ಟ್‌ಗಳನ್ನು ಮಾಡಿಯೂ ಅನೇಕರು ಟ್ರೋಲ್‌ (Troll) ಮಾಡುತ್ತಿದ್ದಾರೆ ಹಾಗೂ ಕಿಡಿ ಕಾರುತ್ತಿದ್ದಾರೆ. ಅಂದ ಹಾಗೆ, ಕಬ್ಜ ಟ್ರೇಲರ್‌ ಲಿಂಕ್ ಇಲ್ಲಿದೆ ನೋಡಿ..

ಇದನ್ನು ಓದಿ: Kabzaa ಬಿಗ್ ಅಪ್‌ಡೇಟ್; ಉಪೇಂದ್ರ-ಸುದೀಪ್ ಚಿತ್ರದಲ್ಲಿ ಶಿವರಾಜ್ ಕುಮಾರ್,ಲುಕ್ ರಿವೀಲ್

ಕಬ್ಜ ಟ್ರೇಲರ್‌ ಬಿಡುಗಡೆ ಬಗ್ಗೆ 2 ದಿನಗಳಿಂದ ಸುದ್ದಿಯಾಗುತ್ತಿದೆ. ಕಬ್ಜ ಟೀಸರ್‌ ಬಿಡುಗಡೆಯಾದಾಗಲೂ ಸಾಕಷ್ಟು ಸದ್ದು ಮಾಡಿತ್ತು. ಇತ್ತೀಚೆಗೆ, ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವಣ್ಣ ಸಹ ಅಭಿನಯಿಸುತ್ತಿದ್ದಾರೆ ಎಂಬ ಬಿಗ್‌ ಸರ್‌ಪ್ರೈಸ್‌ ಘೋಷಣೆಯಾಗಿದೆ. ಹಾಗೂ, ದಕ್ಷಿಣ ಭಾರತದ ಖ್ಯಾತ ನಟಿ ಶ್ರಿಯಾ ಶರಣ್‌ ಸಹ ಅಭಿನಯಿಸಿದ್ದಾರೆ. 

ಅಲ್ಲದೆ, ಕಬ್ಜ ಟ್ರೇಲರ್‌ ಬಗ್ಗೆ ಮಾರ್ಚ್‌ 3 ರಂದು ಟ್ವೀಟ್‌ ಮಾಡಿದ್ದ ಆರ್‌. ಚಂದ್ರು, ‘’ಸಂಭ್ರಮ ನಿರ್ಮಾಣವಾಗುತ್ತಿದೆ! ಬಹು ನಿರೀಕ್ಷಿತ #kabzaatrailer ಬಿಡುಗಡೆಗೆ ಕೌಂಟ್‌ಡೌನ್ ಆರಂಭ.  ಮೊದಲಿಗರಾಗಿ ಟ್ರೇಲರ್ ಅನ್ನು ವೀಕ್ಷಿಸಲು ಮಾರ್ಚ್ 4 ರಂದು 05:02 PM ಕ್ಕೆ ಆನಂದ್ ಆಡಿಯೊಗೆ ಟ್ಯೂನ್ ಮಾಡಲು ಮರೆಯದಿರಿ…#kabzaa ಭಾರತೀಯ ಚಿತ್ರರಂಗದ ಮುಂದಿನ ದೊಡ್ಡ ವಿಷಯ’’ ಎಂದೂ ಕಬ್ಜ ಚಿತ್ರದ ನಿರ್ದೇಶಕ ಪೊಸ್ಟ್‌ ಮಾಡಿದ್ದರು. ಹಾಗೂ, ಅಮಿತಾಭ್‌ ಬಚ್ಚನ್‌ ಅವರು ಟ್ರೇಲರ್‌ ರಿಲೀಸ್‌ ಮಾಡುತ್ತಿರುವುದರಿಂದಲೂ ಸ್ವಲ್ಪ ತಡವಾಗುತ್ತಿದೆ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಉಪ್ಪಿಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರದ ಧ್ವನಿ ಸುರುಳಿ ಅದ್ಧೂರಿ ಬಿಡುಗಡೆ

ಮೇಲೆ ಹೇಳಿದಂತೆ, ಆನಂದ್‌ ಆಡಿಯೋದಲ್ಲಿ ಮಾರ್ಚ್‌ 4 ರ ಸಂಜೆ 5.02 ನಿಮಿಷಕ್ಕೆ ಈ ಟ್ರೇಲರ್‌ ಬಿಡುಗಡೆಯಾಗಬೇಕಿತ್ತು. ಆದರೆ, 6 ಗಂಟೆಯಾದರೂ ಬಿಡುಗಡೆಯಾಗದ ಕಾರಣ ಸ್ಯಾಂಡಲ್‌ವುಡ್‌ ಪ್ರೇಮಿಗಳು, ಉಪೆಂದ್ರ, ಸುದೀಪ್‌ ಹಾಗೂ ಶಿವನ್ಣ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಈ ಹಿನ್ನೆಲೆ ಆನಂದ್‌ ಆಡಿಯೋ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಟ್ರೇಲರ್‌ ಬಿಡುಗಡೆಗೆ ತಡವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ‘’ ಹೌದು, ಹೌದು, ಹೌದು, ನಾವು ಇದನ್ನು ಅರ್ಥಮಾಡಿಕೊಳ್ಳಬಹುದು !! ಚಿತ್ರತಂಡ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ!! #KabzaaTrailer ಹೊಸ ಸಮಯದ ಪ್ರಕಟಣೆಯನ್ನು ನವೀಕರಿಸಲು ದಯವಿಟ್ಟು ನಮಗೆ ಸ್ವಲ್ಪ ಸಮಯವನ್ನು ನೀಡಿ’’ ಎಂದು ಆನಂದ್‌ ಆಡಿಯೋ ಟ್ರೇಲರ್‌ ಬಿಡುಗಡೆ ತಡವಾಗಿರುವ ಮಾಹಿತಿ ನೀಡಿದ್ದು, ವಿಷಾಧವನ್ನೂ ವ್ಯಕ್ತಪಡಿಸಿದ್ದಾರೆ. 

ಒಟ್ಟಾರೆ, ಶಿವಣ್ಣ ಕಬ್ಜದಲ್ಲಿ ನಟಿಸಲಿದ್ದಾರೆ ಎಂಬ ಸರ್‌ಪ್ರೈಸ್‌ ಅಥವಾ ಬಿಗ್‌ ಅಪ್‌ಡೇಟ್‌ ಬಂದ ಬಳಿಕ ಪ್ಯಾನ್‌ ಇಂಡಿಯಾ ಕಬ್ಜ ಚಿತ್ರದ ಬಗ್ಗೆ ಇಡೀ ದೇಶದ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿದೆ. ಕೆಜಿಎಫ್‌ ರೀತಿ ಟೀಸರ್‌ ಎಂದು ಹಲವರು ಟೀಸರ್‌ ಬಿಡುಗಡೆಯಾದಾಗ ಟ್ರೋಲ್‌ ಮಾಡಿದ್ದ ಕಾರಣಕ್ಕೂ ಟ್ರೇಲರ್‌ ಹೇಗಿರುತ್ತೆ ಅನ್ನೋ ಬಗ್ಗೆಯೂ ಸಾಕಷ್ಟು ಕುತೂಹಲ ಇದೆ. ಈ ಹಿನ್ನೆಲೆ ಟ್ರೇಲರ್ ಬಿಡುಗಡೆ ತಡವಾಗಿರುವುದಕ್ಕೆ ಹಲವರು ಟ್ರೋಲ್‌ ಮಾಡುತ್ತಿದ್ದಾರೆ. 

ಇದನ್ನೂ ಓದಿ: ರಿಯಲ್ ಸ್ಟಾರ್ ಸಿಗ್ನೇಚರ್ ಸ್ಟೆಪ್ಸ್: ಉಪ್ಪಿಯ ರೆಟ್ರೋ ಸ್ಟೈಲ್'ಗೆ ಫ್ಯಾನ್ಸ್ ಫಿದಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ