
ಇದೀಗ ತೂಗುದೀಪ ಶ್ರೀನಿವಾಸ್ ಅವರ ಕುಟುಂಬದ ಕತೆ ಪುಸ್ತಕವಾಗಿ ಮೂಡಿ ಬರುತ್ತಿದೆ. ಎರಡು ಭಾಗಗಳಲ್ಲಿ ಪ್ರಕಟವಾಗುತ್ತಿರುವ ಈ ಪುಸ್ತಕದ ಹೆಸರು ತೂಗುದೀಪ ದರ್ಶನ. ಮೀನಿಂಗ್ ಫುಲ್ ಲೈಫ್ ಸ್ಟೋರಿ ಎನ್ನುವುದು ಇದರ ಸಬ್ ಟೈಟಲ್.
ಪತ್ರಕರ್ತ ವಿನಾಯಕರಾಮ್ ಕಲಗಾರು ಈ ಪುಸ್ತಕ ಬರೆಯುತ್ತಿದ್ದಾರೆ. ಮೀನ ತೂಗುದೀಪ ಹೇಳಿದ ಕತೆಗಳು ಇಲ್ಲಿ ಪ್ರಮುಖವಾದುದು. ತೂಗುದೀಪ ಶ್ರೀನಿವಾಸ್ ಜೀವನ, ಅವರ ಮಕ್ಕಳಾದ ದರ್ಶನ್, ದಿನಕರ್, ದಿವ್ಯ ಅವರು ಬೆಳೆದು ಬಂದ ಬಗೆ ಈ ಪುಸ್ತಕದ ವಸ್ತು. ಸದ್ಯ ಪುಸ್ತಕದ ಮೊದಲ ಭಾಗದ ಮುಖಪುಟವನ್ನು ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮೊದಲ ಭಾಗ ಬಿಡುಗಡೆಯಾಗಲಿದೆ ಎನ್ನುತ್ತಾರೆ ವಿನಾಯಕರಾಮ್. ಜೋಹರ್ ಪಬ್ಲಿಕೇಷನ್ ಇದನ್ನು ಪ್ರಕಟಿಸಿದೆ.
'ಒಂದು ಮುಂಜಾನೆ.... ಎಂದು ಹಾಡುತ್ತಾ ಪತ್ನಿ ಜೊತೆ ಪಾರ್ಕ್‌ನಲ್ಲಿ ಸುತ್ತಾಡಿದ ದರ್ಶನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.