ವಿಷ್ಣು ಸೇನೆ ಬಗ್ಗೆ ಅಂದು ಹರಡಿತ್ತು ಕುಹಕದ ಮಾತು, ನಟ ವಿಷ್ಣುವರ್ಧನ್ ಏನಂದಿದ್ರು?

By Shriram Bhat  |  First Published Apr 21, 2024, 9:40 PM IST

ನಟ ವಿಷ್ಣುವರ್ಧನ್ ಮೇಲಿನ ಅಭಿಮಾನದಿಂದ ಹುಟ್ಟಿಕೊಂಡ ವಿಷ್ಣುಸೇನೆಯ ಬಗ್ಗೆ ಸಾಕಷ್ಟು ಕುಹಕದ ಮಾತುಗಳು ಅಂದೊಮ್ಮೆ ಕೇಳಿ ಬಂದಿದ್ದವು ಎನ್ನಲಾಗಿದೆ. ಆ ಬಗ್ಗೆ ನಟ ವಿಷ್ಣುವರ್ಧನ್ ಅವರು ಅನೇಕ ಬಾರಿ ಸ್ಪಷ್ಟನೆ ಕೊಟ್ಟ ಬಳಿಕ ಟೀಕೆಗಳು..


ವಿಷ್ಣುಸೇನೆ (Vishnu Sene) ಕಟ್ಟಿದ್ದು ನಟ ವಿಷ್ಣುವರ್ಧನ್ (Vishnuvardhan) ಅವರಿಗೆ ರಕ್ಷಣೆ ಕೊಡಲಿಕ್ಕಾ ಎಂಬ ಮಾತು ಕುಹಕದ ಮಾತು ಅಂದು ಕೇಳಿ ಬಂದಿತ್ತು. ಆ ಬಗ್ಗೆ ಬಹಳಷ್ಟು ಚರ್ಚೆಗಳು ಅಂದು ಕೇಳಿ ಬಂದಿದ್ದು, ಅದಕ್ಕೆಲ್ಲ ನಟ ವಿಷ್ಣುವರ್ಧನ್ ಹಲವಾರಿ ಬಾರಿ ಸ್ಪಷ್ಟನೆ ಕೊಟ್ಟಿದ್ದಿದೆ. ಆದರೆ, ಅದೆಷ್ಟೇ ಸ್ಪಷ್ಟನೆ ಕೊಟ್ಟರೂ ಮತ್ತೆ ಮತ್ತೆ ಅಂಥ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಅದಕ್ಕೆ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಾದ ಸಂದರ್ಭ ಆಗಾಗ ಬರುತ್ತದೆ ಎಂದು ಸ್ವತಃ ನಟ ವಿಷ್ಣುವರ್ಧನ್ ಒಮ್ಮೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 

ಅದಿರಲಿ, ಹಾಗಿದ್ದರೆ ನಟ ವಿಷ್ಣುವರ್ಧನ್ ಹೆಸರಲ್ಲಿ ವಿಷ್ಣುಸೇನೆ ಹುಟ್ಟಿಕೊಂಡಿದ್ದು ಯಾಕೆ? ಈ ಬಗ್ಗೆ ಸ್ಪಷ್ಟ ಉತ್ತರ ಹೇಳುಬೇಕು ಎಂದರೆ ಅದು ಹೀಗಿದೆ. ವಿಷ್ಣುಸೇನೆಯ ಕಾರ್ಯಕರ್ತರೇ ಒಮ್ಮೆ ಹೇಳಿರುವಂತೆ, 'ನಮ್ಮ ಆರಾಧ್ಯ ದೈವ ನಟರಾದ ವಿಷ್ಣುವರ್ಧನ್ ಅಭಿಮಾನದಿಂದ ಈ ವಿಷ್ಣು ಸೇನೆ ಹುಟ್ಟಿಕೊಂಡಿದೆ. ಆದರೆ ಅದರ ಕಾರ್ಯವ್ಯಾಪ್ತಿ ದೊಡ್ಡದಿದೆ. 

Tap to resize

Latest Videos

ನಟ ಶ್ರೀಮುರಳಿಗೆ ಅಪಘಾತ, ಮೈಸೂರಿನಲ್ಲಿ 'ಬಘೀರ' ಶೂಟಿಂಗ್ ವೇಳೆ ಭಾರೀ ಅವಘಡ !

ನಟ ವಿಷ್ಣುವರ್ಧನ್ ಒಮ್ಮೆ 'ನನಗೆ ರಕ್ಷಣೆ ಕೊಡುವುದು ವಿಷ್ಣುಸೇನೆಯ ಉದ್ದೇಶವಲ್ಲ. ನನಗೆ ರಕ್ಷಣೆ ಕೊಡಲು ಸಾಧ್ಯವಿರುವುದು ಮೇಲಿರುವ ವಿಷ್ಣುವಿನಿಂದ ಮಾತ್ರ. ವಿಷ್ಣು ಸೇನೆಯ ಹುಡುಗರು ಈಗಲೂ ಇರ್ತಾರೆ, ಮುಂದೆಯೂ ಇರ್ತಾರೆ. ಅದರರ್ಥ ಅವ್ರು ಇರೋದು ನನ್ನ ರಕ್ಷಣೆಗಾಗಿ ಅಂತ ಅಲ್ಲ. ನನ್ನ ಮೇಲಿನ ಪ್ರೀತಿ, ಅಭಿಮಾನದಿಂದ ಅವರೆಲ್ಲರೂ ನನ್ನ ಜತೆಗೆ ಇರ್ತಾರೆ.

ದ್ವಾರಕೀಶ್‌ರನ್ನು ಚಿತ್ರರಂಗಕ್ಕೆ ತಂದವರು ಯಾರು, ಕುಳ್ಳನನ್ನು ಮದ್ರಾಸ್‌ಗೆ ಯಾಕೆ ಕಳಿಸಿದ್ರು?

ಒಂದಿಷ್ಟು ಕನಸುಗಳು ಹಾಗೂ ಸಣ್ಣಪುಟ್ಟ ಸಮಾಜಮುಖಿ ಸೇವೆಗಳನ್ನು ಮಾಡಲು ಈ ಸೇನೆ ಹುಟ್ಟಿಕೊಂಡಿದೆಯೇ ವಿನಃ ನನ್ನ ರಕ್ಷಣೆ ಉದ್ದೇಶದಿಂದ ಈ ಸೇನೆ ಹುಟ್ಟಿಕೊಂಡಿದ್ದಲ್ಲ. ಈ ಸುದ್ದಿ ಸಂಪೂರ್ಣ ಸುಳ್ಳು' ಎಂದಿದ್ದರು ಬದುಕಿದ್ದಾಗಲೇ ದಿವಂಗತ ನಟ ವಿಷ್ಣುವರ್ಧನ್. 

ಮುಂಬೈ ಬೆಡಗಿ ದೀಪಿಕಾ ಕನ್ನಡ ಚಿತ್ರಕ್ಕೆ ಆಯ್ಕೆಯಾದ ಸೀಕ್ರೆಟ್ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಒಟ್ಟಿನಲ್ಲಿ, ನಟ ವಿಷ್ಣುವರ್ಧನ್ ಮೇಲಿನ ಅಭಿಮಾನದಿಂದ ಹುಟ್ಟಿಕೊಂಡ ವಿಷ್ಣುಸೇನೆಯ ಬಗ್ಗೆ ಸಾಕಷ್ಟು ಕುಹಕದ ಮಾತುಗಳು ಅಂದೊಮ್ಮೆ ಕೇಳಿ ಬಂದಿದ್ದವು ಎನ್ನಲಾಗಿದೆ. ಆ ಬಗ್ಗೆ ನಟ ವಿಷ್ಣುವರ್ಧನ್ ಅವರು ಅನೇಕ ಬಾರಿ ಸ್ಪಷ್ಟನೆ ಕೊಟ್ಟ ಬಳಿಕ ಟೀಕೆಗಳು ಸ್ವಲ್ಪ ಹಿಂದೆ ಸರಿದಿದ್ದವು. ಆ ಸಂಘದಿಂದ ರಕ್ತದಾನ, ಅನ್ನದಾನ, ಬಡವರಿಗೆ ಆಹಾರ, ಔ‍ಷಧೋಪಚಾರ ಮುಂತಾದವು ಅಗಾಗ ನಡೆಯುತ್ತಿದ್ದು, ಸಮಾಜ ಸೇವಾ ಕಾರ್ಯಗಳು ಅಗತ್ಯವಿದ್ದವರಿಗೆ ತಲುಪುತ್ತಲೇ ಇರುತ್ತವೆ. 

ವಿಷ್ಣುವರ್ಧನ್‌ಗೆ ಮತ್ತೊಂದು ಸಿನಿಮಾಗೆಂದು ಸೀಕ್ರೆಟ್ಟಾಗಿ ಲಂಡನ್‌ನಿಂದ ಏನೋ ತಂದಿದ್ರು ಪುಟ್ಟಣ್ಣ ಕಣಗಾಲ್?

ಹೀಗಾಗಿ, ಕಾಲಕಳೆದಂತೆ ಈ ವಿಷ್ಣುಸೇನೆಯ ಬಗ್ಗೆ ಇದ್ದ ಅಪಪ್ರಚಾರ ದೂರವಾಗಿದೆ ಎನ್ನಲಾಗಿದೆ. ಇಂದು ನಟ ವಿಷ್ಣುವರ್ಧನ್ ನಮ್ಮೊಂದಿಗಿಲ್ಲ. ಆದರೆ, ವಿಷ್ಣುಸೇನೆಯಿಂದ ರಕ್ತದಾನ ಶಿಬಿರಗಳು, ಅನ್ನದಾನ, ಹಬ್ಬಹರಿದಿನಗಳಲ್ಲಿ ಆಹಾರ ವಿತರಣೆ ಮುಂತಾದವುಗಳು ನಿರಂತರವಾಗಿನಡೆಯುತ್ತಲೇ ಇರುತ್ತವೆ. ಇಂದು ಅವುಗಳನ್ನು ವಿಷ್ಣುವರ್ಧನ್ ಪತ್ನಿ ಭಾರತಿ ಹಾಗು ಅಳಿಯ ಅನಿರುದ್ಧ ಜತ್ಕರ್ ಅವರುಗಳು ಸಾಂಘವಾಗಿ ನಡೆಸಿಕೊಂಡು ಹೋಗುತ್ತಲೇ ಇರುತ್ತವೆ. 

click me!