ಜೊತೆಗಿದ್ದ ಯುವತಿಗೆ ಲೈಂಗಿಕ ಕಿರುಕುಳ ಕೊಟ್ರಾ ಜಾನಿ ಮಾಸ್ಟರ್; ಏನಿದು ಲವ್ ಸೆಕ್ಸ್ ಧೋಖಾ?

By Vaishnavi Chandrashekar  |  First Published Sep 18, 2024, 6:07 PM IST

ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಕೇಸ್. ಪುನೀತ್​, ಸುದೀಪ್​​ ಸೇರಿ ಟಾಪ್​ ಹೀರೋಗಳ ಕೊರಿಯೋಗ್ರಾಫರ್​ ಜಾನಿ.


ಸ್ಯಾಂಡಲ್​ವುಡ್​​ನಲ್ಲಿ ಮೀಟು ಗಾಟು ನಿಧಾನಕ್ಕೆ ಹಬ್ಬುತ್ತಿದೆ. ಯಾವ ನಟಿ ಯಾರ ಮೇಲೆ ಯಾವಾಗ ಮೀಟು ಬಾಂಬ್ ಹಾಕ್ತಾರೋ ಗೊತ್ತಾಗ್ತಿಲ್ಲ. ಅಷ್ಟರಲ್ಲಾಗಲೇ ಟಾಲಿವುಡ್​​ ಜಗತ್ತಿನಲ್ಲಿ ಮೀಟು ಆರೋಪ  ಆಗಿದ್ದು, ಎಫ್​ಐಆರ್ ಕೂಡ ಮಾಡಿದ್ದಾರೆ. ಈ ಮೀಟು ಆರೋಪದಲ್ಲಿ ಸಿಕ್ಕಿ ಬಿದ್ದವರು ಹೀರೋ ಅಲ್ಲ..... ಹೀರೋಗಳನ್ನ ತೆರೆ ಮೇಲೆ ಕುಣಿಸೋ ಕರಿಯೋಗ್ರಫರ್​ ಜಾನಿ ಮಾಸ್ಟರ್. ಕನ್ನಡದಲ್ಲಿ ಸುದೀಪ್, ಪುನೀತ್​ ಸೇರಿದಂತೆ ಬೇರೆ ಭಾಷೆಯ ಟಾಪ್​ ಹೀರೋಗಳ ಸಿನಿಮಾದ ಹಾಡಿಗೆ ಕೊರಿಯೋಗ್ರಫಿ ಮಾಡಿ ಹೆಸರು ಮಾಡಿದ್ದ ಜಾನಿ ಮಾಸ್ಟರ್ ಮೇಲೆ ಈಗ ರೇಪ್ ಕೇಸ್ ಬಿದ್ದಿದೆ. 

ಸಿನಿಲೋಕದಲ್ಲಿ ಮತ್ತೆ ಮೀಟು ಗಲಾಟೆ ತಾರಕ್ಕೇರಿರೋ ಸಮಯದಲ್ಲೇ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.  ಜಾನಿ ಮಾಸ್ಟರ್ ಜೊತೆ ಸಹ ನೃತ್ಯ ಸಂಯೋಜಕಿ ಆಗಿ ಕೆಲಸ ಮಾಡ್ತಾ ಇದ್ದ  21 ವರ್ಷ ಯುವತಿ, ತೆಲಂಗಾಣದ ನರಸಿಂಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಶೂಟಿಂಗ್ ಸಮಯದಲ್ಲಿ ಕ್ಯಾರಾವ್ಯಾನ್‌ಗೆ ಕರೆಸಿ ಲೈಂಗಿಕ ಆಸೆ ಪೂರೈಸುವಂತೆ ಒತ್ತಾಯಿಸ್ತಾ ಇದ್ದರು. ಹೈದರಬಾದ್, ಮುಂಬೈಗೆ ಶೂಟಿಂಗ್‌ಗೆ ಹೋದಾಗ ಹೋಟೆಲ್ ರೂಮ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದರು ಅಂತ ಈ ಯುವತಿ ದೂರು ನೀಡಿದ್ದಾರೆ. ಜಾನಿ ಮೇಲೆ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಕೇಸ್‌ಗಳು ದಾಖಲಾಗಿವೆ.

Tap to resize

Latest Videos

undefined

5 ವರ್ಷದ ಬಳಿಕವೂ ನಿಂತಿಲ್ಲ 'ಕುರುಕ್ಷೇತ್ರ'ದ ಶಾಪ; ಅಂಬಿ, ದರ್ಶನ್, ನಿಖಿಲ್, ಮೇಘನಾ....ಇನ್ನು ಯಾರಿದ್ದಾರೆ?

ಜಾನಿ ಮಾಸ್ಟರ್ ಇವತ್ತು ಇಂಡಿಯಾದ ಟಾಪ್ ಕೋರಿಗ್ರಾಫರ್‌ಗಳಲ್ಲಿ ಒಬರು. ಕನ್ನಡದ ಹಲವು ಸ್ಟಾರ್ ನಟರ ಜೊತೆಗೂ ಜಾನಿ ಕೆಲಸ ಮಾಡಿದ್ದಾರೆ. ಅಪ್ಪುವಿನ ಸೂಪರ್ ಹಿಟ್ ಸಾಂಗ್ ಓಪನ್ ದಿ ಬಾಟಲ್, ಕಿಚ್ಚನ ರಾರಾ ರಕ್ಕಮ್ಮ ಸಾಂಗ್‌ಗಳ ಹಿಂದಿನ ಜಾನಿ ಮಾಸ್ಟರ್ ಮೈಂಡ್ ಇದೆ. ತೆಲುಗು, ತಮಿಳಿನಲ್ಲೂ ಹಲವು ಸೂಪರ್ ಡೂಪರ್ ಹಿಟ್ ಹಾಡುಗಳನ್ನ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಇತ್ತೀಚಿಗೆ ಬಾಲಿವುಡ್ ನಲ್ಲೂ  ಬ್ಯುಸಿಯಾಗಿದ್ದ ಜಾನಿ ಮಾಸ್ಟರ್ ಇತ್ತೀಚಿಗೆ ಸ್ತ್ರೀ-2 ಸಿನಿಮಾಗೆ ಕೋರಿಯೋಗ್ರಫಿ ಮಾಡಿದ್ದರು.ಇಂಥಾ ಸ್ಟಾರ್ ಕೋರಿಯೋಗ್ರಾಫರ್ ಮೇಲೆ ಈಗ ಅತ್ಯಾಚಾರದ ಆರೋಪ ಬಂದಿದೆ. ಅಚ್ಚರಿ ಅಂದರೆ ಇದರ ಜೊತೆಗೆ ಜಾನಿ ಮೇಲೆ ಲವ್ ಜಿಹಾದ್ ಆರೋಪ ಕೂಡ ಕೇಳಿ ಬಂದಿದೆ. ಅಸಲಿಗೆ ಈ ಜಾನಿ ಮಾಸ್ಟರ್ ಮೂಲ ಹೆಸರು ಶೇಖ್ ಜಾನಿ ಬಾಷಾ ಅಂತ. ಸದ್ಯ ಈ ದೂರು ನೀಡಿಯೋ ಯುವತಿಗೆ ಶೇಖ್ ಜಾನಿ ಬಾಷಾ ಮದುವೆಯಾಗುವಂತೆ ಮತ್ತು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯ ಮಾಡ್ತಾ ಇದ್ದನಂತೆ. ಇನ್ನೂ ಜಾನಿ ಮಾಸ್ಟರ್ ಜನಸೇನಾ ಪಕ್ಷದ ಸದಸ್ಯ ಆಗಿದ್ದಾರೆ. ಸದ್ಯ ಜಾನಿ ಮೇಲೆ ಬಂದಿರೋ ಆರೋಪಗಳು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಗೂ ಮುಜುಗರ ತಂದಿದೆ. 

ದರ್ಶನ್ ಕಷ್ಟ ನೋಡಿ ಖುಷಿ ಪಡೋ ವ್ಯಕ್ತಿ ನಾನಲ್ಲ;ಕಿಚ್ಚ -ದಚ್ಚು ಫ್ರೆಂಡ್‌ಶಿಪ್‌ಗೆ ಸಿಕ್ತು ಉತ್ತರ!

click me!