
ಕಳೆದ ಏಪ್ರಿಲ್ 4ರಂದು ಸ್ಯಾಂಡಲ್ವುಡ್ ಬ್ಯೂಟಿ ಅದಿತಿ ಪ್ರಭುದೇವ ಹೆಣ್ಣುಮಗುವಿನ ತಾಯಿಯಾಗಿದ್ದು, ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. ಮಗುವಿಗೆ ಎರಡು ತಿಂಗಳು ಇರುವಾಗಿನಿಂದಲೇ ಮತ್ತೆ ಕೆಲಸಕ್ಕೆ ಆಗಮಿಸಿ ಜೀ ಕನ್ನಡದ ರಾಜಾ ರಾಣಿ ಷೋನಲ್ಲಿ ಕಾಣಿಸಿಕೊಂಡಿರೋ ಅದಿತಿ, ಈಗಲೂ ಫುಲ್ ಆ್ಯಕ್ಟೀವ್ ಆಗಿಯೇ ಇದ್ದಾರೆ. ಅವರ ಮಗುವಿಗೆ ಈಗ ಐದು ತಿಂಗಳು ತುಂಬಿದೆ. ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್ ಆಗಿರುವ ನಟಿ ವಿಭಿನ್ನ ರೀತಿಯ ಟಿಪ್ಸ್, ಅಡುಗೆ ಕುರಿತು ವಿಡಿಯೋ ಶೇರ್ ಮಾಡುತ್ತಿದ್ದರು. ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಯೇ ಇದ್ದರು. ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು. ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಅದಾದ ಬಳಿಕ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳಲ್ಲೇ ಮತ್ತೆ ಕೆಲಸ ಶುರು ಮಾಡಿಕೊಂಡಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರೋ ನಟಿ, 1983ರಲ್ಲಿ ಬಿಡುಗಡೆಯಾದ, ಬಾಲಿವುಡ್ ನಟ ಅನಿಲ್ ಕಪೂರ್ ಮತ್ತು ಜ್ಯೂಲಿ ಲಕ್ಷ್ಮಿ ಅಭಿನಯದ ಪಲ್ಲವಿ-ಅನುಪಲ್ಲವಿ ಚಿತ್ರದ ಎವರ್ಗ್ರೀನ್ ಸಾಂಗ್ ನಗುವ ನಯನ ಮಧುರ ಗಾನ... ಹಾಡಿಗೆ ರೀಲ್ಸ್ ಮಾಡಿದ್ದಾರೆ. ಎಂದಿನಂತೆ ನಟಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಪಾರ್ಕ್ ಒಂದರಲ್ಲಿ ಮರ ಸುತ್ತುತ್ತಾ ಈಹಾಡು ಮಾಡಿದ್ದು, ಇದಕ್ಕೆ ಹಾರ್ಟ್ ಇಮೋಜಿಗಳ ಸುರಿಮಳೆಯಾಗಿದೆ. ಹಲವರು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದರೆ ಕೆಲವರಿಗೆ ಮಾತ್ರ ನಟಿ ಚಿಕ್ಕಪಾಪು ಬಿಟ್ಟು ಈ ರೀತಿಯೆಲ್ಲಾ ಮಾಡುವುದು ಯಾಕೋ ಇನ್ನೂ ಸರಿ ಕಾಣಿಸುತ್ತಲೇ ಇಲ್ಲ ಎನ್ನಿಸುತ್ತದೆ. ರಾಜಾ ರಾಣಿ ರಿಯಾಲಿಟಿ ಷೋನಲ್ಲಿ ಬಿಜಿಯಾಗಿರುವ ನಟಿ ಕೊನೆಯ ಪಕ್ಷ ಟೈಮ್ ಸಿಕ್ಕಾಗ ಮಗುವಿನ ಜೊತೆ ಇರೋದನ್ನು ಬಿಟ್ಟು ಈ ರೀತಿ ಎಲ್ಲೆಲ್ಲೋ ರೀಲ್ಸ್ ಮಾಡುವುದು ಸರಿಯಲ್ಲ ಎಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...
ಇದಾಗಲೇ ರಿಯಾಲಿಟಿ ಷೋನಲ್ಲಿ ಅವರು ಪಾಲ್ಗೊಂಡಿದ್ದಾಗ, ಚಿಕ್ಕಮಗುವನ್ನು ಬಿಟ್ಟು ಬಂದು ಕೆಲಸ ಮಾಡುವ ಅವಶ್ಯಕತೆ ಏನಿತ್ತು ಎನ್ನುವುದು ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಉತ್ತರಿಸಿದ್ದ ನಟಿ, ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದರು. ಇದರ ಹೊರತಾಗಿಯೂ ಅಭಿಮಾನಿಗಳಿಗೆ ಯಾಕೋ ಸಮಾಧಾನ ಆಗುತ್ತಿಲ್ಲ. ಅಮ್ಮನ ಕೆಲಸ ಎಂದರೆ ಎರಡು ಗಂಟೆಗೊಮ್ಮೆ ಎದೆಹಾಲು ಕುಡಿಸುವುದು ಮಾತ್ರವಲ್ಲ. ಅಮ್ಮನಾಗಿ ಜವಾಬ್ದಾರಿ ಹೆಚ್ಚಿದೆ. ಮಗುವಿನ ಜೊತೆ ಅಮ್ಮ ಆದವಳು ಇರಬೇಕೇ ವಿನಾ, ಅಜ್ಜಿಯಾದವಳು ಅಲ್ಲ ಎಂದೆಲ್ಲಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಈಗಲೂ ಅದೇ ಮಾತನ್ನು ಹೇಳುತ್ತಿದ್ದಾರೆ. ನೋಡಿಕೊಳ್ಳಲು ಅಜ್ಜಿ ಇದ್ದರೂ ಅಮ್ಮನಿಗೆ ಅವಳದ್ದೇ ಆದ ಕೆಲವು ಜವಾಬ್ದಾರಿಗಳು ಇರುತ್ತವೆ. ಅದನ್ನು ಮರೆತು ನೀವು ಇದರಲ್ಲಿ ಇಷ್ಟು ಬೇಗ ಪಾಲ್ಗೊಳ್ಳುವುದು ಯಾಕೋ ಸರಿ ಕಾಣುತ್ತಿಲ್ಲ ಎಂದು ಕಮೆಂಟಿಗರು ಹೇಳಿದ್ದರು. ಈಗಲೂ ಅದೇ ಮಾತನ್ನು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಮ್ಮನಾಗಿರೋ ಅದಿತಿಗಿಂತಲೂ ಅವರ ಮಗುವಿನ ಮೇಲೆ ಅಭಿಮಾನಿಗಳೇ ಕೇರ್ ಜಾಸ್ತಿ ಇದ್ದಂತೆ ಕಾಣುತ್ತಿದೆ.
ನಟಿ ಅದಿತಿ ಪ್ರಭುದೇವ ಕೈಯಲ್ಲಿ ಅರಳಿದ ಗಣಪ: ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.