ಸ್ಯಾಂಡಲ್‌ವುಡ್‌ನಲ್ಲಿ ಶೋಷಣೆ ಇಲ್ಲವೆನ್ನುವುದು ಪ್ರಪಂಚದಲ್ಲಿ ಕಳ್ಳತನವಿಲ್ಲ ಎಂದಂತೆ: ನಟಿ ಚೈತ್ರಾ ಆಚಾರ್

By Gowthami KFirst Published Sep 18, 2024, 5:58 PM IST
Highlights

ಕೇರಳ ಮಾದರಿ ಮೀಟೂ ಕಮಿಟಿ ರಚನೆ ಬಗ್ಗೆ ಪ್ರತಿಕ್ರಿಯಿಸಿದ ನಟಿ ಚೈತ್ರಾ ಜೆ ಅಚಾರ್, ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲ ಎಂದು ಹೇಳಲಾಗದು ಎಂದು ಹೇಳಿದ್ದಾರೆ. ತಮಗಾದ ಅನುಭವವನ್ನು ಹಂಚಿಕೊಂಡ ಅವರು, ಜೂನಿಯರ್ ಆರ್ಟಿಸ್ಟ್ ಒಬ್ಬರು ಚಿತ್ರರಂಗದಲ್ಲಿನ ಕರಾಳ ಮುಖವನ್ನು ಬಯಲಿಗೆಳೆದಿದ್ದಾರೆ ಎಂದು ಹೇಳಿದ್ದಾರೆ.

ಕೇರಳದ ಚಿತ್ರರಂಗದಲ್ಲಿನ ಮಂಚಕ್ಕೆ ಕರೆಯುವ ಸಂಸ್ಕೃತಿಯ ಬಗ್ಗೆ ಬಯಲಿಗೆಳೆದ ನ್ಯಾ। ಹೇಮಾ ಸಮಿತಿ ವರದಿಯನ್ನು ಭಾರತೀಯ ಚಿತ್ರರಂಗದ ಹಲವರು ಸ್ವಾಗತಿಸಿದ್ದಾರೆ. ಹಗರಣದ ಕುರಿತು ನಟಿಯರು ಒಬ್ಬೊಬ್ಬರಾಗಿ ತಮಗಾದ ಅಹಿತಕರ ಅನುಭವ ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಸ್ಯಾಂಡಲ್‌ವುಡ್‌ ನಲ್ಲಿ ಕೂಡ ಇದೇ ರೀತಿಯ ಪರಿಸ್ಥಿತಿ ಇದೆ. ಇದಕ್ಕಾಗಿ ಕಮಿಟಿ ಮಾಡಬೇಕು ಎಂದು ಚಿತ್ರರಂಗದಿಂದ ಒತ್ತಾಯವು ಕೇಳಿಬರುತ್ತಿದೆ.

ಇದೀಗ ಕೇರಳ ಮಾದರಿ ಮೀಟೂ ಕಮಿಟಿ ವಿಚಾರಕ್ಕೆ ಸಬಂಧಿಸಿದಂತೆ ನಟಿ ಚೈತ್ರಾ ಜೆ ಅಚಾರ್ ಹೇಳಿಕೆ ನೀಡಿ, ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲ ಅಂತ ಹೇಳಲು ಆಗುವುದಿಲ್ಲ. ಶೋಷಣೆ ಇಲ್ಲ ಅಂತ ಹೇಳುವುದು ಪ್ರಪಂಚದಲ್ಲಿ ಕಳ್ಳತನ ಇಲ್ಲ ಎಂದು ಹೇಳಿದಂತೆ. ನನಗೆ ಯಾವತ್ತೂ ಈ ರೀತಿಯ ಅನುಭವ ಆಗಿಲ್ಲ. ಅದ್ರೆ ಶೋಷಣೆಗೆ ಒಳಗಾಗಿರುವವರು ನನ್ನ ಬಳಿ ಹೇಳಿಕೊಂಡಿದ್ದಾರೆ.

Latest Videos

ನಟ ಜಯಂ ರವಿ-ಆರತಿ ವಿಚ್ಚೇದನಕ್ಕೆ ಆಕೆ ಕಾರಣ! ಸಮಯ ಕಳೆದಂತೆ ಸತ್ಯ ಹೊರ ಬರಲಿದೆ ಎಂದು ಪತ್ನಿ ಹೇಳಿದ್ದು ಇದನ್ನಾ?

ನನ್ನ ಎರಡನೇ ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ತಮಗಾದ ಅನುಭವ ಹೇಳಿಕೊಂಡಿದ್ರು, ಯಾವುದೋ ಸಿನಿಮಾಗೆ ಆಕೆ ಆಡಿಷನ್ ಕೊಟ್ಟಿದ್ರಂತೆ. ಮೊದಲ ರೌಂಡ್ ನಲ್ಲಿ ಸೆಲೆಕ್ಟ್ ಆಗಿದ್ದೀರ ಅಂತ ಅವ್ರು ಅಕೆಗೆ ಹೇಳಿದ್ದು, ನಂತ್ರ ಕಾಲ್ ಮಾಡಿ ನಮ್ಮ ಜೊತೆ ಟ್ರಿಪ್ ಗೆ ಬನ್ನಿ ನಿಮ್ಮನ್ನೆ ನಾಯಕಿ ಮಾಡ್ತೀನಿ ಅಂದ್ರಂತೆ. ಟಚ್ ವುಡ್ ನನಗೆ ಯಾವತ್ತೂ ಈ ರೀತಿ ಅನುಭವ ಆಗಿಲ್ಲ. ಕಮಿಟಿ ಅಂತ ಅದ್ರೆ ಮುಂದೆ ಬರೋ ನಟಿಯರಿಗೆ ಅನುಕೂಲ ಅಗುತ್ತೆ. ಯಾರಿಗೇ ಏನೇ ಸಮಸ್ಯೆ ಆದ್ರು ಕಮಿಟಿ ಗಮನಕ್ಕೆ  ತರಬಹುದು ಎಂದಿದ್ದಾರೆ.

ಗಿಚ್ಚಿಗಿಲಿಗಿಲಿ ಸೀಸನ್ 3 ವಿನ್ನರ್ ಆದ ಹುಲಿ ಕಾರ್ತಿಕ್, ರನ್ನರ್ ತುಕಾಲಿ ಮಾನಸ, ಗೆದ್ದ ಹಣವೆಷ್ಟು?

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ಕುರಿತು ಕೇರಳ ಮಾದರಿ ವಿಚಾರಣಾ ಸಮಿತಿ ರಚನೆ ಮಾಡಬೇಕು ಎಂದು ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರದ 100 ಕ್ಕೂ ಹೆಚ್ಚು ಮಂದಿ ‘ಫೈರ್‌’ (ಫಿಲ್ಮ್‌ ಇಂಡಸ್ಟ್ರಿ ಫಾರ್‌ ರೈಟ್ಸ್‌ ಅಂಡ್‌ ಈಕ್ವಾಲಿಟಿ) ಸಂಸ್ಥೆಯ ಮೂಲಕ ಪತ್ರಕ್ಕೆ ಸಹಿ ಮಾಡಿದ್ದಾರೆ. ಇದರಲ್ಲಿ ನಟ ಸುದೀಪ್‌ ಹಾಗೂ ಮಾಜಿ ಸಂಸದೆ ರಮ್ಯಾ, ಚೈತ್ರಾ, ನೀತು ಶೆಟ್ಟಿ, ನಟ ಚೇತನ್ ಅಹಿಂಸಾ ಅವರ ಸಹಿ ಕೂಡ ಇದೆ. 

click me!