ನಟ ಜಗ್ಗೇಶ್ ಹಾಗೂ ರಾಯರ ನಡುವೆ ನಡೆದ ಪವಾಡದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನವರಸ ನಾಯಕ ಜಗ್ಗೇಶ್ ದೈವಭಕ್ತ,ಅದರಲ್ಲೂ ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಪರಮ ಭಕ್ತ. ದಿನ ಬೆಳಗ್ಗೆ ರಾಯರ ದರ್ಶನ ಪಡೆದು ದಿನ ಪ್ರಾರಂಭಿಸುತ್ತಾರೆ. 'ನೆನೆದವರ ಮನದಲ್ಲಿ ಗುರುರಾಯ, ಸ್ನೇಹಿತರೆ ಇಂದು ನನ್ನ ರಾಯರ ನಡುವೆ ನಡೆದ ಮರೆಯಲಾಗದ ಘಟನೆ' ಎಂದು ಪಾವಡದ ಬಗ್ಗೆ ಬರೆದುಕೊಂಡಿದ್ದಾರೆ.
ಅಮ್ಮನಿಗಾಗಿ ಜಗ್ಗೇಶ್ ಆಣೆ ಇಟ್ಟ ಲಿಂಗವಿದು; 'ನಾನು ಯಾವ ತಪ್ಪು ಮಾಡುವುದಿಲ್ಲ'!
ಜಗಣ್ಣ ವಿವರಿಸಿದ ಘಟನೆ:
'ಪರಿಮಳ 9 ಗಂಟೆಗೆ ನನ್ನ ಏಕಾಂತ ಜಾಗದಲ್ಲಿ ಊಟ ಬಡಿಸಿ Online ಕೆಲಸಕ್ಕೆ ತನ್ನ ಹಾಲಿಗೆ ಹೋದಳು. ನಾನು ಊಟ ಮುಗಿಸಿ ಒಂದು ಬಾರಿ ಸ್ಮರಣೆ ಸಾಲದೆ ಹಾಡು ಕೇಳುತ್ತ ರಾಯರ ಚಿತ್ರಪಟ ನೋಡುತ್ತ ಮಂತ್ರಮುಗ್ಧನಾಗಿ ಧ್ಯಾನದಲ್ಲಿ ಕೂತುಬಿಟ್ಟೆ. ಆಗ ನನ್ನ ಮನಸ್ಸಿನಲ್ಲಿ ರಾಯರ ಜೊತೆ ಸಂಭಾಷಣೆ ಶುರುವಾಯಿತು. ರಾಯರೆ ನಾನು ಬದುಕಲ್ಲಿ ಕೇಳಿದ್ದೆಲ್ಲಾ ಕೊಟ್ಟಿದ್ದೀರಿ ಕೊಡುತ್ತಿದ್ದೀರಿ ನಿಮ್ಮ ಭಿಕ್ಷೆಯಿಂದ ನಾನು ಕೋಟ್ಯಾಂತರು ಪ್ರೀತಿಸುವ ಯೋಗ ಪಡೆದಿರುವೆ ಆದರೆ ಪಾಪಿಯಾದ ನಾನು ನಿಮ್ಮ ಶಾಸ್ತ್ರೋಕ್ತವಾಗಿ ಭಜಿಸುವ ವಿಧ್ಯೆ ಪಡೆಯಲಿಲ್ಲಾ. ಕಲಿಯುವ ವಯಸ್ಸಲ್ಲಿ ಅಪ್ಪ ಬಿಡಲಿಲ್ಲಾ. ಅಲ್ಪಸ್ವಲ್ಪ ಚಿತ್ರ ಗೀತೆ ಹಾಡುವೆ. ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಅಶೀರ್ವಾದಿಸಿ. ಮನತುಂಬಿ ಹಾಡುವಾಸೆ ದಯಮಾಡಿ ಕರುಣಿಸಿ ಎಂದು ಪ್ರಾರ್ಥಿಸುತ್ತಿದ್ದೆ. ಸ್ನೇಹಿತರೆ ಮಿಂಚಿನಂತೆ ಮಂತ್ರಾಲಯ ಆತ್ಮೀಯ ಸಹೋದರ ಮಠದ ಪಿಆರ್‌ಓ ನರಸಿಂಹಾಚಾರ್ ಅವರು ವಾಟ್ಸಪ್ ವಿಡಿಯೋ ಕಾಲ್ ಬಂತು' ಎಂದು ಬರೆದಿದ್ದಾರೆ.
ಇಂದು ರಾಯರಿಗೆ ನನ್ನ ಮಾತು ಕೇಳಿಸಿದ ಸತ್ಯಘಟನೆ:) ಗುರುಭ್ಯೋನಮಃ.. ಧನ್ಯವಾದ ನರಸಿಂಹಾಚಾರ್ ರವರಿಗೆ.... pic.twitter.com/37oUAXfeB4
— ನವರಸನಾಯಕ ಜಗ್ಗೇಶ್ (@Jaggesh2)ಘಟನೆಯನ್ನು ಎಳೆಎಳೆಯಾಗಿ ವಿವರಿಸುತ್ತಾ ಹೋದ ಜಗ್ಗಣ್ಣ ಭಾವುಕರಾಗುತ್ತಾರೆ. 'ಕರೆ ಸ್ವೀಕರಿಸಿದಾಗ ಬೃಂದಾವನ ದರ್ಶನ ಆಯಿತು. ಅಳು ತಡೆಯಲಾಗಲಿಲ್ಲ ಮನಬಿಚ್ಚಿ ರಾಯರಿಗೆ ಹೇಳಿದೆ ನನ್ನ ಮಾತು ಬೃಂದಾವನಕ್ಕೆ ಕೇಳುವ ಸೌಭಾಗ್ಯ ನನಗೆ ನೀಡಿದ ನಿಮ್ಮ ಕರುಣೆ ಸಾಕು ಈ ಜನ್ಮಕ್ಕೆ ಇನ್ನೆಂದಿಗೂ ನನಗೆ ಮನುಜನ್ಮ ಬೇಡ ನಿಮ್ಮ ಪಾದದಡಿಯ ದೂಳಾಗಿ ಜನ್ಮಕೊಡಿ ಸಾಕು ಎಂದು ಪ್ರಾರ್ಥಿಸಿ' ಎಂದು ಜಗ್ಗೇಶ್ ಹೇಳಿದ್ದಾರೆ.
ನಟ ಜಗ್ಗೇಶ್ ಹೆಸರು ದುರ್ಬಳಕೆ; ಸೈಬರ್ ಕ್ರೈಂನಲ್ಲಿ ದೂರು ದಾಖಲು
ಬರವಣೆಗೆಯಲ್ಲೂ ಕಣ್ಣೀರು ನಿಂತಿಲ್ಲ:
ಈ ಪವಾಡ ಘಟನೆ ಬಗ್ಗೆ ನೆಟ್ಟಿಗರ ಜೊತೆ ಹಂಚಿಕೊಳ್ಳಲು ಬರೆಯುವಾಗಲೂ ಜಗ್ಗೇಶ್ ಕಣ್ಣೀರು ನಿಂತಿಲ್ಲ. ' ನರಸಿಂಹಾಜಾರ್ ರವರಿಗೆ ಕೇಳಿದ ಈ ಸರಿಹೊತ್ತಲ್ಲಿ ರಾಯರು ಬೃಂದಾವನ ದರ್ಶನ ನನಗೆ ಮಾಡಿಸಲು ಏನು ಪ್ರೇರಣೆ ಆಯಿತು ಎಂದೆ. ಅದಕ್ಕೆ ಅವರು ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೆ ನಿಂತಿದ್ದೆ ಇದ್ದಕ್ಕಿದ್ದಂತೆ ಜಗ್ಗೇಶನಿಗೆ ಬೃಂದಾವನ ತೋರಿಸುವಂತೆ ರಾಯರು ಪ್ರೇರಣೆ ಆಯಿತು ಎಂದರು. ಈ ಬರವಣೆಗೆಯಲ್ಲೂ ಕಣ್ಣೀರು ನಿಂತಿಲ್ಲ. ಜನ್ಮಪಾವನ ಹಾಗೂ ರಾಯರ ಪರಿಚಯಿಸಿ ಕಣ್ಣಿಗೆ ಕಾಣದ ಊರಿಗೆ ಹೋದ ನನ್ನ ದೇವತೆ ಅಮ್ಮನಿಗೆ ಉಸಿರು ನಿಲ್ಲುವವರೆ ಧನ್ಯವಾದ. ಮಾತೃದೇವೋಭವ ಗುರುದೇವೊಭವ ಕೋಟಿಬಾರಿ ಪ್ರಮಾಣಿಸಿ ಹೇಳುವೆ ರಾಯರು ತಾಯಂತೆ ಮಕ್ಕಳ ಬಯಸಿದಾಗ ಬಂದುಬಿಡುವರು. ಈ ಸಮಯ ಬದುಕಿನ ಆನಂದಮಯ' ಎಂದು ಟ್ಟೀಟ್ ಮಾಡಿದ್ದಾರೆ.