
ತಾವಾಯಿತು, ನಮ್ಮ ಕೃಷಿ ಜೀವನವಾಯಿತು ಎಂದು ಬದುಕಿರುವ ಪ್ರತಿಭಾನ್ವಿತ ನಟ ವಿನೋದ್ ರಾಜ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಪಾರ್ಥೀವ ಶರೀರ ದರ್ಶನ ಮುಗಿಸಿಕೊಂಡು ಹಿಂದಿರುಗುವಾಗ, ನಟನಿಗೆ ತಮ್ಮ ಹೆಸರಿನಲ್ಲಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಪೋಸ್ಟ್ ಹಾಕಿರುವ ವಿಚಾರ ತಿಳಿದಿದೆ.
ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿವೆ. ಅನೇಕ ನಟ-ನಟಿಯರ ಖಾತೆಗಳು ಹ್ಯಾಕ್ ಆಗುತ್ತಿದ್ದರೆ, ಇನ್ನು ಕೆಲವರ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗುತ್ತಿದೆ. ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್ ಹೆಸರಿನಲ್ಲಿಯೂ ಖಾತೆ ತೆರೆದ ಕಿಡಿಗೇಡಿಗಳು ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ್ದಾರೆ. ಗಮನಕ್ಕೆ ಬಂದ ಕೂಡಲೇ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ದೂರು ದಾಖಲಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ಪಡೆದ ವಿನೋದ್ ರಾಜ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ದೂರು ದಾಖಲಿಸಿದ್ದಾರೆ. 'ನನಗೆ ಫೇಸ್‌ಬುಕ್ ಅವೆಲ್ಲಾ ಗೊತ್ತೇ ಇಲ್ಲ.ನಾನು ನನ್ನ ತಾಯಿ ಪರಿಸರ, ತೋಟ, ಆಸ್ಪತ್ರೆ ಹಾಗೂ ಪ್ರಾಣಿಗಳೊಂದಿಗೆ ಜೀವಿಸುತ್ತಿದ್ದೇವೆ. ನನಗೆ ಸಾಯಿಪ್ರಶಾಕ್ ಕರೆ ಮಾಡಿದಾಗ ವಿಚಾರ ಎಷ್ಟು ಗಂಭೀರವಾದದ್ದು ಎಂದು ತಿಳಿಯಿತು. ದಯವಿಟ್ಟು ಸಮಾಜದಲ್ಲಿ ಕಲಾವಿದರಿಗೆ ಮಾನಸಿಕ ನೋವು ಕೊಡಬೇಡಿ. ಈಗಾಗಲೆ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬದುಕುತ್ತಿದ್ದೇವೆ. ಈ ನಕಲಿ ಖಾತೆ ವಿಚಾರ ಮತ್ತಷ್ಟು ನೋವು ಕೊಡುತ್ತಿದೆ,' ಎಂದು ವಿನೋದ್ ರಾಜ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.