Kalaya Namaha: ಕೋಮಲ್‌ ಬೇರೆ ಭಾಷೆಯಲ್ಲಿ ಇರಬೇಕಿತ್ತು... ಅಣ್ಣ ಜಗ್ಗೇಶ್ ನೋವಿನ ನುಡಿ​

Published : Aug 30, 2023, 05:10 PM ISTUpdated : Sep 02, 2023, 09:32 AM IST
Kalaya Namaha: ಕೋಮಲ್‌ ಬೇರೆ ಭಾಷೆಯಲ್ಲಿ ಇರಬೇಕಿತ್ತು... ಅಣ್ಣ ಜಗ್ಗೇಶ್ ನೋವಿನ ನುಡಿ​

ಸಾರಾಂಶ

ದೀರ್ಘ ಅವಧಿಯ ನಂತರ ಜಗ್ಗೇಶ್​ ಮತ್ತು ಕೋಮಲ್​ ಕಾಲಾಯ ನಮಃ ಮೂಲಕ ತೆರೆಯ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ್ದೇನು?   

ನವರಸ ನಾಯಕ ಜಗ್ಗೇಶ್​ ಹಾಗೂ ಅವರ ತಮ್ಮ ಕೋಮಲ್​ ಇಬ್ಬರೂ ಹಾಸ್ಯದಲ್ಲಿ ಎತ್ತಿದ ಕೈ. ಒಬ್ಬರಿಗಿಂತ ಒಬ್ಬರು ಪ್ರತಿಭಾನ್ವಿತರು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸದ್ಯ ಜಗ್ಗೇಶ್​ ಅವರು ರಾಜಕೀಯದಲ್ಲಿ ಬಿಜಿಯಾಗಿದ್ದಾರೆ, ಕೋಮಲ್​ ಅವರಿಗೆ ಚಿತ್ರರಂಗದಲ್ಲಿ ಅಷ್ಟೊಂದು ಒಳ್ಳೆಯ ಆಫರ್​ಗಳು ಇಲ್ಲ. ಇದೀಗ ಅಣ್ಣ-ತಮ್ಮ ಇಬ್ಬರೂ ಕಾಲಾಯ ನಮಃ (Kalaya Namaha) ಚಿತ್ರದ ಮೂಲಕ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಇದ್ದ ನಟ ಕೋಮಲ್ ಕುಮಾರ್ ಅವರು ಈಗ ನಟನೆಗೆ ಕಂಬ್ಯಾಕ್ ಮಾಡಿದ್ದಾರೆ. ಅವರ ನಟನೆಯ ‘ನಮೋ ಭೂತಾತ್ಮ 2’ ಸಿನಿಮಾ  ಇತ್ತೀಚೆಗೆ ರಿಲೀಸ್ ಆಗಿದೆ.  ಕಾಲಾಯ ನಮಃದಲ್ಲಿ ಕೋಮಲ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ,  ಜಗ್ಗೇಶ್‌  ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.   ‘ಮೇಕಪ್’, ‘ಬೇಡ ಕೃಷ್ಣ ರಂಗಿನಾಟ’, ‘ಕಾಸು ಇದ್ದೋನೆ ಬಾಸು’, ‘ಹನಿಮೂನ್ ಎಕ್ಸ್​ಪ್ರೆಸ್​, ‘ಮನ್ಮಥ’ ಮೊದಲಾದ ಸಿನಿಮಾಗಳಲ್ಲಿ ಜಗ್ಗೇಶ್ ಹಾಗೂ ಕೋಮಲ್ ಒಟ್ಟಾಗಿ ನಟಿಸಿದ್ದರು. ಅದಾದ ಬಳಿಕ ಸ್ವಲ್ಪ ಗ್ಯಾಪ್​ ಆಗಿದ್ದು, ಈಗ ಪುನಃ ಸಹೋದರರು ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. 

ಅನಸೂಯ ಕೋಮಲ್ ಕುಮಾರ್ ನಿರ್ಮಾಣದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ  ಮತಿವಣನ್ ನಿರ್ದೇಶನವಿದೆ. ‘ಕಾಲಾಯ ನಮಃ’ ಚಿತ್ರದ ಹಾಡೊಂದರ ಶೂಟಿಂಗ್ ಬೆಂಗಳೂರಿನ ಹೊರ ವಲಯದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಕುರಿತು ಇತ್ತೀಚೆಗೆ ಸುದ್ದಿಗೋಷ್ಠಿ ನಡೆದಿದ್ದು ಅದರಲ್ಲಿ ಈ ನಟರು ಮಾತನಾಡಿದ್ದಾರೆ. ಇದೀಗ ಈ ಚಿತ್ರದ ಕುರಿತು ಮಾತನಾಡಿರುವ ನಟ ಜಗ್ಗೇಶ್​, ನಟ ಕೋಮಲ್‌ ಪ್ರತಿಭಾವಂತ. ಆತ ನನಗಿಂತ ಅತ್ಯುತ್ತಮ ನಟ. ಆದರೆ, ಇದೇ ಕೋಮಲ್‌ (Komal) ಬೇರೆ ಭಾಷೆಯಲ್ಲಿ ಇದ್ದಿದ್ದರೆ, ಬಾಳಿಕೆ ಬರ್ತಿದ್ದ ಎಂದು ನೋವಿನಿಂದ ನುಡಿದಿದ್ದಾರೆ.  ಇದೇ ವೇಳೆ ಕಾಲಾಯ ನಮಃ ಚಿತ್ರದ ಮಾಹಿತಿ ನೀಡಿದ ಜಗ್ಗೇಶ್​, ತಮ್ಮ ಕೋಮಲ್ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೋಮಲ್ ಅದ್ಭುತ ಕಲಾವಿದ ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ. ಈ ಚಿತ್ರದಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಒಟ್ಟಿಗೆ ನಟಿಸಿದ್ದೇವೆ. ಇತ್ತೀಚೆಗೆ ರಿಲೀಸ್ ಆದ ಹಲವು ಸಿನಿಮಾಗಳು ಯಶಸ್ಸು ಕಾಣುತ್ತಿವೆ. ‘ಕಾಲಾಯ ನಮಃ’ ಕೂಡ ಯಶಸ್ಸು ಕಾಣಲಿ’ ಎಂದರು. ನಂತರ ಕೋಮಲ್‌ ಕುರಿತು ಮಾತನಾಡಿದ ಅವರು, ಕೋಮಲ್​ ನನಗಿಂತ ಉತ್ತಮವಾದ ನಟ. ಚಿತ್ರರಂಗದಲ್ಲಿ ತನ್ನನ್ನು ತಾನು ವಿಶೇಷವಾಗಿ ತೊಡಗಿಸಿಕೊಳ್ಳುತ್ತಾನೆ. ಅಧ್ಯಯನ ಮಾಡ್ತಾನೆ. ಪ್ರತಿಯೊಂದನ್ನೂ ಅಪ್‌ಡೇಟ್‌ ಆಗುತ್ತಿರುತ್ತಾನೆ. ನನ್ನೊಂದಿಗೆ ಆತ ಹೇಳಿಕೊಳ್ಳುವ ಮಾತುಗಳನ್ನು ಕೇಳಿದರೆ ನನಗೂ ಖುಷಿ ಆಗುತ್ತದೆ. ಅದನ್ನೆಲ್ಲ ಕೇಳಿದ್ರೆ, ಎಷ್ಟೋ ಸಲ ನನಗೂ ಅನಿಸಿದ್ದುಂಟು. ಇವನು ಬೇರೆ ಭಾಷೆಯಲ್ಲಿ ಇದ್ದಿದ್ರೆ, ತುಂಬ ಬಾಳಿಕೆ ಬರ್ತಿದ್ದ ಎಂದು ಅನಿಸಿದ್ದುಂಟು ಎಂದಿದ್ದಾರೆ. 

ಶಿವರಾಜ್​ ಕುಮಾರ್​ ಬಾಲಿವುಡ್​ಗೆ ಎಂಟ್ರಿ? ಖ್ಯಾತ ನಿರ್ದೇಶಕ ಸುದೀಪ್ತೋ ಸೇನ್ ಬುಲಾವು!

‘ಕಾಲಾಯ ನಮಃ’ ಚಿತ್ರದ ಕುರಿತು ಮಾತನಾಡಿದ ಕೋಮಲ್​, ತಮ್ಮ ಇದು ನಮ್ಮ ಸಂಸ್ಥೆಯ ಚಿತ್ರ. ನನ್ನ ಹೆಂಡತಿ ಅನಸೂಯ ಈ ಚಿತ್ರದ ನಿರ್ಮಾಪಕರು.  ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ನಮ್ಮ ಅಣ್ಣ ಜಗ್ಗೇಶ್ (Jaggesh), ನಾನು ಹಾಗೂ ಮುಂಬೈ ನಟಿಯೊಬ್ಬರು ಪಾಲ್ಗೊಂಡಿದ್ದೇವೆ. ಯೋಗರಾಜ್ ಭಟ್ ಈ ಹಾಡನ್ನು ಬರೆದಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ ಎಂದ ಅವರು, ಇದೊಂದು ಇದೊಂದು ಸಮಯದ ಸುತ್ತ ನಡೆಯುವ ಕಥೆ ಎಂದು ಹಿಂಟ್​ ಕೊಟ್ಟರು. 

ಚಿತ್ರದಲ್ಲಿ ನಾಯಕಿಯಾಗಿ ಆಸಿಯಾ ಫಿರ್ದೋಸ್ (Asia Firdose) ನಟಿಸಿದ್ದಾರೆ. ಜಗ್ಗೇಶ್, ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ, ಯತಿರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ. ನೃತ್ಯ ಸಂಯೋಜನೆಯನ್ನು ಭೂಷಣ್ ಮಾಸ್ಟರ್ ಮಾಡುತ್ತಿದ್ದಾರೆ. ಆಸಿಯಾ ಫಿರ್ದೋಸ್ ನಾಯಕಿಯಾಗಿ ನಟಿಸಿದ್ದಾರೆ.

ಸಂಬಂಧದಲ್ಲಿ ಹೆಚ್ಚು ನಿರೀಕ್ಷೆ ಬೇಡ ಎಂದ ರಮ್ಯಾ: ಏನಾಯ್ತು ಮೇಡಂ? ನೆಟ್ಟಿಗರ ಪ್ರಶ್ನೆ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?