
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಈ ವರ್ಷ ರಕ್ಷಾಬಂಧನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಇಬ್ಬರೂ ಕೂಡ ಪಿಂಕ್, ಹಳದಿ ಕೆಂಪು ಬಣ್ಣ ಮಿಶ್ರಿತ ಧಿರಿಸಿನಲ್ಲಿ ಮಿಂಚಿದ್ದಾರೆ. ಅಕ್ಕ ಆಯ್ರಾ ತಮ್ಮ ಯಥರ್ವ್‌ಗೆ ಆರತಿ ಮಾಡಿ, ತಿಲಕವಿಟ್ಟು ರಾಖಿ ಕಟ್ಟಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಈ ಬಗ್ಗೆ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ಕೆಲವೊಮ್ಮೆ ಸಹಯೋಗಿಗಳು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು, ಆದರೆ ಯಾವಾಗಲೂ ಒಬ್ಬರಿಗೊಬ್ಬರು ಇರುತ್ತಾರೆ. ಎಲ್ಲಾ ಒಡಹುಟ್ಟಿದವರಿಗೆ ರಕ್ಷಾಬಂಧನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಭಾರತದ ಶ್ರೀಮಂತ ನಟಿ, ಯಶಸ್ವಿ ಉದ್ಯಮಿ ಬಳಿ ಇದೆ 3 ಮನೆ, 25 ಕೋಟಿ ರೂ ಬೆಲೆ ಬಾಳುವ
ಯಶ್-ರಾಧಿಕಾ ಅಭಿಮಾನಿಗಳು ಈ ಫೋಟೋಗಳಲ್ಲಿ ಸಖತ್ ಮೆಚ್ಚುಗೆ ಸೂಚಿಸಿದ್ದಾರೆ. ನಟನೆಯಿಂದ ಬ್ರೇಕ್ ಪಡೆದುಕೊಂಡಿರುವ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಿರುತ್ತಾರೆ. ಎಲ್ಲ ವಿಶೇಷ ಸಂದರ್ಭದಲ್ಲೂ ಅವರು ಫೋಟೋ ಮತ್ತು ವಿಡಿಯೋ ಶೇರ್ ಮಾಡಿಕೊಳ್ಳುತ್ತಾರೆ. ಕಳೆದ ವಾರ ವರಮಹಾಲಕ್ಷ್ಮೀ ಹಬ್ಬದಂದು ಕೂಡ ರಾಧಿಕಾ ಮತ್ತು ಯಶ್ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದರು.
ಚೊಚ್ಚಲ ಹಿಟ್ ಚಿತ್ರ ನೀಡಿದ ನಟನ ಬದುಕು 34ನೇ ವಯಸ್ಸಿಗೆ ರೇಪ್ ಅರೋಪಕ್ಕೆ ಕೊನೆಯಾಯ್ತು
ರಾಧಿಕಾ ಅವರ ಪೋಸ್ಟ್ ಗೆ ಅನೇಕ ಮಂದಿ ಅಭಿಮಾನಿಗಳು ಕಮೆಂಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಕ್ಕಳು ಹುಟ್ಟಿದಂತಿದೆ ಇಷ್ಟು ಬೇಗ ದೊಡ್ಡವರಾದ್ರು. ಮಕ್ಕಳಿಗೆ ಒಳ್ಳೆಯದಾಗ್ಲಿ ಎಂದು ಹಾರೈಸಿದ್ದಾರೆ. ಇನ್ನು ಕೆಲವರು ಎಷ್ಟು ಕ್ಯೂಟ್ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಫೋಟೋವನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.
ಇನ್ನು ಪ್ರತೀವರ್ಷದಂತೆ ಕೂಡ ಈ ವರ್ಷ ರಾಕಿ ಹಬ್ಬವನ್ನು ಆಚರಿಸಲಾಗಿದೆ. ರಾಖಿ ಹಬ್ಬವೆಂದರೆ ಸಹೋದರರಿಗಾಗಿ ಸಹೋದರಿಯರು ಮೀಸಲಿಟ್ಟ ದಿನವಾಗಿದೆ. ರಾಧಿಕಾ ಪಂಡಿತ್ ಸಹೋದರ ಗೌರಂಗ್ ವಿದೇಶದಲ್ಲಿ ಕೆಲಸದಲ್ಲಿದ್ದಾರೆ. ಯಶ್ ಅವರ ಸಹೋದರಿ ನಂದಿನಿ ಕೂಡ ಪ್ರತೀ ವರ್ಷ ರಾಖಿ ಹಬ್ಬವನ್ನು ಅಣ್ಣ ಯಶ್ ಗೆ ರಾಖಿ ಕಟ್ಟಿ ಆಚರಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.