'ಕಾಟನ್ ಕ್ಯಾಂಡಿ' ನನಗೆ ತುಂಬಾ ಇಂಪಾರ್ಟೆಂಟ್, ಹೀಗಂದಿದ್ಯಾಕೆ ಚಂದನ್ ಶೆಟ್ಟಿ?

Published : Dec 26, 2024, 12:46 PM ISTUpdated : Dec 26, 2024, 12:52 PM IST
'ಕಾಟನ್ ಕ್ಯಾಂಡಿ' ನನಗೆ ತುಂಬಾ ಇಂಪಾರ್ಟೆಂಟ್, ಹೀಗಂದಿದ್ಯಾಕೆ ಚಂದನ್ ಶೆಟ್ಟಿ?

ಸಾರಾಂಶ

ಚಂದನ್ ಶೆಟ್ಟಿ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ವಿಡಿಯೋ ಡಿಸೆಂಬರ್ ೨೭ಕ್ಕೆ ಬಿಡುಗಡೆಯಾಗಲಿದೆ. ಅಭಿಮಾನಿಗಳ ಬೇಡಿಕೆ ಹಿನ್ನೆಲೆಯಲ್ಲಿ ಹೊಸ ವರ್ಷದ 'ಗಿಫ್ಟ್' ಆಗಿ ಬಿಡುಗಡೆ ಮಾಡುತ್ತಿದ್ದಾರೆ. ಟೀಸರ್‌ನಲ್ಲಿ ಸುಷ್ಮಿತಾ ಗೋಪಿನಾಥ್ ಕಾಣಿಸಿಕೊಂಡಿದ್ದು, ಹಾಡು 'ಪಾರ್ಟಿ ಆಂಥಮ್' ಶೈಲಿಯಲ್ಲಿದೆ. ಮೂರು ವರ್ಷಗಳ ಬಳಿಕ ಚಂದನ್ ಶೆಟ್ಟಿ ಹೊಸ ಹಾಡಿನೊಂದಿಗೆ ಮರಳುತ್ತಿದ್ದಾರೆ.

ನಟ-ಗಾಯಕ ಹಾಗು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ  (Chandan Shetty) ಸದ್ಯ ಹೊಸದೊಂದು ಮ್ಯೂಸಿಕ್ ವಿಡಿಯೋ ಬಿಡುಗಡೆಗೆ ಸಜ್ಜಾಗಿದ್ದು ಗೊತ್ತೇ ಇದೆ. 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋ ನಾಳೆ, ಅಂದರೆ 27 ಡಿಸೆಂಬರ್ 2024ರಂದು ರಿಲೀಸ್ ಆಗಲಿದೆ. ಈ ಮೊದಲಿನ ಎಲ್ಲದಕ್ಕಿಂತ ವಿಶೇಷವಾದ ಸಂಗೀತದ ರಸದೌತಣ ಇದರಲ್ಲಿದೆ ಎಂದು ಸ್ವತಃ ಚಂದನ್ ಶೆಟ್ಟಿಯವರು ಹೇಳಿದ್ದಾರೆ. ಅಷ್ಟೇ ಅಲ್ಲ, ಇದು ತಮಗೆ ಅತ್ಯಂತ ಇಂಪಾರ್ಟೆಂಟ್ ಅಂತ ಕೂಡ ಹೇಳಿದ್ದಾರೆ. ಹಾಗಿದ್ದರೆ ಯಾಕೆ?

ಚಂದನ್ ಶೆಟ್ಟಿ ಅವರು ಮುಂಬರುವ ತಮ್ಮ ಮ್ಯೂಸಿಕ್ ವಿಡಿಯೋ ಬಗ್ಗೆ ಮಾತನಾಡುತ್ತ 'ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಪ್ಲಾನ್ ಆಗಿದ್ದು, ನಾಳೆ ವಿಡಿಯೋ ಮ್ಯೂಸಿಕ್ ಕಾಟನ್ ಕ್ಯಾಂಡಿ ಲಾಂಚ್ ಆಗಲಿದೆ. ಇದು ನ್ಯೂ ಈಯರ್‌ಗೆ ಗಿಫ್ಟ್' ಎಂದಿದ್ದಾರೆ. 

ಯಶ್ ಕುದಿಯುತ್ತಿದ್ದಾರೆ, ಬೇಯುತ್ತಿದ್ದಾರೆ, ನರಳುತ್ತಿದ್ದಾರೆ: ಯಾಕೆ ಈ ಸುದ್ದಿ ಹಬ್ಬಿದೆ?

ಕನ್ನಡ ಸಿನಿಮಾಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ, ಟ್ರೆಂಡಿಂಗ್‌ನಲ್ಲಿರುವ ಗಾಯಕ, ಮ್ಯೂಸಿಕ್ ಕಂಪೋಸರ್, ಲಿರಿಸಿಸ್ಟ್ ಮತ್ತು ರ್‍ಯಾಪರ್ ಅಂದ್ರೆ ಅದು ಚಂದನ್ ಶೆಟ್ಟಿ ಮತ್ತೆ ಹೊಸ ಹುರುಪಿನೊಂದಿಗೆ ಪುಟಿದೇಳುತ್ತಿದ್ದಾರೆ. ಮುಂಬರುವ ತಮ್ಮ ಹೊಚ್ಚ ಹೊಸ ಶೈಲಿಯ ಹಾಡುಗಳ ಮೂಲಕ ಯುವ ಜನತೆ ಹುಚ್ಚೆದ್ದು ಕುಣಿಯುವಂತೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಬಂದಿದ್ದ 'ಪಾರ್ಟಿ ಆಂಥಮ್, ಚಾಕಲೇಟ್ ಗರ್ಲ್ (Chocolate Girl) ಹಾಡು, ಮೊದಲಾದ ಹಾಡುಗಳು ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 

ಇದೀಗ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಮತ್ತೊಂದು ಪಾರ್ಟಿ ಹಾಡಿನ (party song) ಮೂಲಕ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಮಾಡಿದ್ದು, ಹೊಸ ಹಾಡಿನ ಕುರಿತು ಜನರಲ್ಲಿ ಭಾರೀ ಕುತೂಹಲ ಮೂಡಿದೆ. ಕಸ ಗುಡಿಸುವವರಿಂದ ಹಿಡಿದು, ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುವವರು, ಆಟೋ ರಿಕ್ಷಾದವರು ಅಚ್ಚರಿಯಿಂದ ಆಗಸದತ್ತ ಮುಖ ಮಾಡಿ ನೋಡುತ್ತಿರುವ ಟೀಸರ್ ಇದಾಗಿದೆ. ಕೊನೆಗೆ 'ಕಾಟನ್ ಕ್ಯಾಂಡಿ' ಎನ್ನುವ ಟೈಟಲ್ ಆಕಾಶದಲ್ಲಿ ತೇಲಿ ಬರೋದನ್ನು ತೋರಿಸಲಾಗಿದೆ. ಈ ಹೊಸ ವರ್ಷಕ್ಕೆ ತಯಾರಾಗಿ ಕಾಟನ್ ಕ್ಯಾಂಡಿ (Cotton Candy) ಬರ್ತಿದೆ.

ಮುಕುಂದನ 'ಯುಐ' ಸಿನಿಮಾ ಬಗ್ಗೆ 'ಮ್ಯಾಕ್ಸ್‌' ಮುರಾರಿ ಪೋಸ್ಟ್ ಮಾಡಿ ಹೇಳಿದ್ದೇನು? 

ಈ ಪ್ರೊಮೋ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಬಾರಿಯ ಈ ಪಾರ್ಟಿ ಹಾಡಲ್ಲಿ ನಟಿ ಸುಷ್ಮಿತಾ ಗೋಪಿನಾಥ್ ಕಾಣಿಸಿಕೊಂಡಿದ್ದಾರೆ. ಸುಷ್ಮಿತಾ ಅವರು ಕನ್ನಡ ಹಾಗೂ ತೆಲುಗು ಸಿನಿಮಾಗಳು, ಜಾಹೀರಾತುಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿರುವ ನಟಿ. ಚಂದನ್ ಹಾಗೂ ಸುಷ್ಮಿತಾ ಜೋಡಿಯ ಹಾಡು ಯಾವ ರೀತಿ ಮೋಡಿ ಮಾಡಲಿದೆ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ. 

ಚಂದನ್ ಶೆಟ್ಟಿ 2011 ರಿಂದಲೂ ತಮ್ಮ ರ್‍ಯಾಪ್ ಸಾಂಗ್ಸ್‌ಗಳ (Rap songs) ಮೂಲಕ ಸದ್ದು ಮಾಡುತ್ತಿದ್ದಾರೆ. ಇಲ್ಲಿವರೆಗೆ ಬರೋಬ್ಬರಿ 15ಕ್ಕಿಂತ ಹೆಚ್ಚು ಹಾಡುಗಳನ್ನು ಇವರು ಕಂಪೋಸ್ ಮಾಡಿ ಹಾಡಿದ್ದಾರೆ. ಜೊತೆಗೆ, ಸಿನಿಮಾಗಳಲ್ಲೂ ಹಾಡುವ ಮೂಲಕ ಅಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಹೊಸ ವರ್ಷಕ್ಕೆ 'ಕಾಟನ್ ಕ್ಯಾಂಡಿ' ಹೆಸರಿನ ಹೊಸ ಹಾಡಿನೊಂದಿಗೆ ಫ್ಯಾನ್ಸ್‌ ಮುಂದೆ ಬರಲಿದ್ದಾರೆ. 'ನನ್ನ ಎದುರಾಳಿ ನಾನೇ, ನನಗೆ ನಾನೇ ಮಿತ್ರ, ನನಗೆ ನಾನೇ ಎಲ್ಲವೂ, ನನಗೆ ನಾನೇ ಕೌಂಟರ್ ಕೊಡುತ್ತ ಮುಂದೆ ಸಾಗುತ್ತೇನೆ' ಎಂದಿದ್ದಾರೆ.   

ಕಿಚ್ಚ ಸುದೀಪ್ 'ಮ್ಯಾಕ್ಸ್‌'ಗೆ ಬಂದ ಪ್ರತಿಕ್ರಿಯೆ ಏನು? ಸೋಲು-ಗೆಲುವಿನ ಲೆಕ್ಕಾಚಾರ ಶುರು!

ಚಂದನ್ ಶೆಟ್ಟಿಯವರ ಮೂರೇ ಮೂರು ಪೆಗ್ಗಿಗೆ ಹಾಡು, ಇವತ್ತಿಗೂ ಯುವಕರ ಫೇವರಿಟ್ ಆಗಿದೆ. ಅಷ್ಟೇ ಅಲ್ಲದೇ  'ಲಕಲಕ ಲ್ಯಾಂಬರ್ಗಿನಿ, ಟಕೀಲಾ, ತ್ರೀ ಪೆಗ್, ಪಾಟಿ ಫ್ರೀಕ್, ಟಾಪ್‌ ಟು ಗಾಂಚಾಲಿ, ಕರಾಬು, ಕೋಲುಮಂಡೆ' ಹಾಡುಗಳು ಸಖತ್ ಸೌಂಡ್ ಮಾಡಿದ್ದವು. ಆದರೆ ಕಳೆದ ಮೂರು ವರ್ಷಗಳಿಂದ ಚಂದನ್ ಶೆಟ್ಟಿಯವರ ಯಾವುದೇ ಹಾಡುಗಳು ಬಿಡುಗಡೆ ಆಗದೇ ಅವರ ಫ್ಯಾನ್ಸ್‌ಗಳ ಮುಖ ಬಾಡಿಹೋಗಿತ್ತು. ಇದೀಗ ಹೊಸ ಹಾಡಿನ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಈ ಹಾಡು ಸಹ 'ಪಾರ್ಟಿ ಆಂಥಮ್' ಆಗಲಿದೆಯೇ? ಕೂತಲ್ಲೇ ಕುಣಿಸಲಿದೆಯೇ? ಉತ್ತರಕ್ಕೆ ಒಂದೇ ದಿನ ಬಾಕಿ!  

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!