
ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ‘ಶಕೀಲಾ’ ಚಿತ್ರವನ್ನು ಪೈರಸಿ ಮಾಡಿ ಅನ್ಯಾಯ ಮಾಡಿದ್ದಾರೆ ಎಂಬುದು ನಿರ್ದೇಶಕರ ನೇರ ಆರೋಪ ಮತ್ತು ನೋವಿನ ಮಾತು.
‘ಒಂದು ಚಿತ್ರವನ್ನು ಹೆಚ್ಚು ಜನ ನೋಡಿದರೆ ನಿರ್ದೇಶಕನಿಗೆ ಖುಷಿ ಆಗುತ್ತದೆ. ತನ್ನ ಸಿನಿಮಾ ಯಾವ ಮೂಲದಲ್ಲಾದರೂ ನೋಡಲಿ ಎಂದುಕೊಳ್ಳುತ್ತಾನೆ ನಿರ್ದೇಶಕ. ಆದರೆ, ನಿರ್ಮಾಪಕನಿಗೆ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತದೆ. ಸಿನಿಮಾದಿಂದ ನಿರ್ದೇಶಕ ಗೆದ್ದರೆ ಮಾತ್ರ ಸಾಲದು. ನಿರ್ಮಾಪಕನಿಗೂ ಹಣ ಬರಬೇಕು. ಆದರೆ, ಪೈರಸಿ ಮಾಡಿದರೆ ನಿರ್ಮಾಪಕನಿಗೆ ಹಣ ಎಲ್ಲಿಂದ ಬರಬೇಕು. ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿರಗಳಲ್ಲಿ ಶಕೀಲಾ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿತ್ತು. ಆದರೆ, ಪೈರಸಿಯಿಂದ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿದೆ. ಗಳಿಕೆ ಕಡಿಮೆಯಾಗಿದೆ. ಇದು ಒಂದು ಚಿತ್ರವನ್ನು ನಿರ್ದಾಕ್ಷಿಣ್ಯವಾಗಿ ಕೊಂದಂತೆ ಆಗುತ್ತದೆ’ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.
"
ಪೈರಸಿಯನ್ನು ತಡೆಯಲು ಸೂಕ್ತ ಕ್ರಮಗಳು ಜರುಗಿಸಲು ಆಗುತ್ತಿಲ್ಲ. ಅಂತ ವ್ಯವಸ್ಥೆಯೂ ಇಲ್ಲ. ಸುಮಾರು 15 ರಿಂದ 20 ವೆಬ್‌ಸೈಟ್‌ಗಳಲ್ಲಿ ‘ಶಕೀಲಾ’ ಸಿನಿಮಾ ಸಿಗುತ್ತಿದೆ. ಯಾರೂ ಯೂಟ್ಯೂಬ್‌ನಲ್ಲೂ ಅಪ್‌ಲೋಡ್ ಮಾಡಿದ್ದಾರಂತೆ. ಬಹುಭಾಷೆಯಲ್ಲಿ ಬಿಡುಗಡೆಯಾಗಿರುವ ಕಾರಣ ಯಾರು, ಎಲ್ಲಿ, ಯಾವಾಗ ಪೈರಸಿ ಮಾಡುತ್ತಿದ್ದಾರೆ ಎಂಬುದು ಚಿತ್ರತಂಡಕ್ಕೆ ಗೊತ್ತಾಗುತ್ತಿಲ್ಲ. ಹೀಗಾಗಿ ‘ಶಕೀಲಾ’ ಪೈರಸಿ ಭೂತಕ್ಕೆ ಬಲಿಯಾಗುತ್ತಿದೆ ಎಂದು ಇಂದ್ರಜಿತ್ ನೋವು ತೋಡಿಕೊಂಡರು. ಇದೇ ಸಂದರ್ಭದಲ್ಲಿ ಪೈರಸಿಯನ್ನು ತಡೆಗಟ್ಟಿನಿರ್ಮಾಪಕರನ್ನು ಉಳಿಸಬೇಕು ಎನ್ನುವ ಮನವಿಯನ್ನು ಮುಂದಿಟ್ಟರು ಇಂದ್ರಜಿತ್ ಲಂಕೇಶ್.
ಶಕೀಲಾ ನೋಡಲು ಜನ ಬರದಿದ್ರೆ ಮತ್ಯಾವುದಕ್ಕೆ ಬರ್ತಾರೆ : ಇಂದ್ರಜಿತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.