ಹೊಸ ವರ್ಷ ರಿಲೀಸ್‌ ಆಗುತ್ತಿರುವ ಮೊದಲ ಸಿನಿಮಾ ರಾಜತಂತ್ರ!

By Kannadaprabha News  |  First Published Jan 1, 2021, 3:27 PM IST

ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ಚಿತ್ರದ ಮೂಲಕ 2021ನೇ ವರ್ಷದ ಆಚರಣೆ ಮಾಡಲಿದೆ ಕನ್ನಡ ಚಿತ್ರರಂಗ. 


ಅರ್ಥಾತ್‌ ಹೊಸ ವರ್ಷದ ಮೊದಲ ಚಿತ್ರವಾಗಿ ರಾಘಣ್ಣ ನಟನೆಯ ‘ರಾಜತಂತ್ರ’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ.

ರಾಜತಂತ್ರ ಟೀಸರ್‌ ಲಾಂಚ್‌ ಮಾಡಿದ ಪುನೀತ್‌;'ಕ್ಯಾ.ರಾಜಾರಾಮ್‌' ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌! 

Tap to resize

Latest Videos

ಜೆ ಎಂ ಪ್ರಹ್ಲಾದ್‌, ವಿಜಯ… ಭಾಸ್ಕರ್‌ ಹರಪನಹಳ್ಳಿ ಹಾಗೂ ಪಿ ಆರ್‌ ಶ್ರೀಧರ್‌ ಅವರ ನಿರ್ಮಾಣದ ಚಿತ್ರವಿದು. ಪಿವಿ ಆರ್‌ ಸ್ವಾಮಿ ಗೂಗರದೊಡ್ಡಿ ನಿರ್ದೇಶನದ ಈ ಚಿತ್ರಕ್ಕೆ ಕತೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವುದು ಜೆ ಎಂ ಪ್ರಹ್ಲಾದ್‌ ಅವರು. ಸುರೇಶ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್‌ ಹಾಸನ್‌, ಶಂಕರ್‌ ಅಶ್ವತ್‌್ಥ, ನೀನಾಸಂ ಅಶ್ವತ್‌್ಥ, ಮುನಿರಾಜು, ವಿಜಯಭಾಸ್ಕರ್‌, ಪ್ರತಾಪ್‌ ಸಿಂಹ ಅಗರ, ಶಿವಾನಂದ, ಸ್ವಾತಿ ಅಂಬರೀಶ…, ವಲ್ಲಭ್‌, ಪ್ರವೀಣ್‌, ಉಮೇಶ್‌ ಮುಂತಾದವ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿ ಇದೆ. ರಾಘವೇಂದ್ರ ರಾಜ್‌ಕುಮಾರ್‌ ಅವರು ತುಂಬಾ ಸ್ಟೈಲಿಶ್‌ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು, ಅವರ ಪಾತ್ರ ಕತೆಗೆ ಸೂಕ್ತವಾಗಿದೆಯಂತೆ. 2021ನೇ ವರ್ಷವನ್ನು ಕನ್ನಡ ಚಿತ್ರರಂಗಕ್ಕೆ ‘ರಾಜತಂತ್ರ’ ಸಿನಿಮಾ ಬಿಡುಗಡೆಯ ಮೂಲಕ ಸ್ವಾಗತಿಸುತ್ತಿದೆ ಎನ್ನಬಹುದು.

click me!