ಇರೋದ್ ಒಂದ್ ಹಾರ್ಟ್, ಎಷ್ಟು ಸರ್ತಿ ಕಾಡ್ತೀರ ಸರ್; ನೂರೊಂದು ನೆನಪಿಗೂ ಮೀರಿದವರು ಎಸ್‌ಪಿಬಿ!

By Shriram Bhat  |  First Published Jun 30, 2024, 1:40 PM IST

ಎಸ್‌ಪಿಬಿ ಅವರನ್ನು ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅಂದಿನ ಖ್ಯಾತ ಗಾಯಕಿ ಎಸ್‌ ಜಾನಕಿ ಅವರು ಪರಿಚಯಿಸಿದರು. ಬಳಿಕ ಅವರು ಒಂದಾದ ಮೇಲೆ ಮತ್ತೊಂದು ಎಂಬಂತೆ ತೆಲುಗು, ಕನ್ನಡ, ತಮಿಳು..


ಗಾನ ಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಹೇಳಿದಷ್ಟು ಕಡಿಮೆಯೇ. ಅವರೊಬ್ಬ ಮೇರು ಗಾಯಕ ಮಾತ್ರವಲ್ಲ, ಅಪ್ಪಟ ಮಾನವೀಯತೆಯ ಸಾಕಾರ ಮೂರ್ತಿಕೂಡ ಆಗಿದ್ದರು. ಅವರೊಂದಿಗೆ ಹಾಡುತ್ತಿದ್ದ ಸಹಗಾಯಕರೇ ಆಗಿರಲಿ, ಜತೆಯಲ್ಲಿನ ವಾದ್ಯಕಲಾವಿದರೆ ಆಗಲೀ ಹೇಳುತ್ತಿದ್ದುದು ಒಂದೇ ಮಾತು. ಅದೇನೆಂದ್ರೆ, ಎಸ್‌ಪಿಬಿ ಅವರೊಬ್ಬರು ಮಹಾನ್ ಕಲಾವಿದ ಮಾತ್ರವಲ್ಲ, ವಿನಯ ಹಾಗು ಸರಳತೆಯ ಮಹಾ ಸಂಗಮ ಎಂದು. 

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ್ದು ಆಂಧ್ರಪ್ರದೇಶದ ನೆಲ್ಲೂರು ಸಮೀಪದ ಹಳ್ಳಿಯೊಂದರಲ್ಲಿ. ಅಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಎಸ್‌ಪಿಬಿ ಅವರು ಒಂದು ಕಾಂಪಿಟೀಶನ್‌ನಲ್ಲಿ ಹಾಡಿದ್ದ ಹಾಡಿಗೆ ಬಹುಮಾನ ಬಂದಿತ್ತು. ಆದರೆ, ಎಸ್‌ಪಿಬಿಗೆ ಬಂದಿದ್ದು ಎರಡನೇ ಬಹುಮಾನ. ಆದರೆ, ಅಲ್ಲಿ ತೀರ್ಪುಗಾರರಾಗಿದ್ದ ಎಸ್‌ ಜಾನಕಿ ಅವರು ಉಳಿದ ಜಡ್ಜ್‌ಗಳ ಜತೆ ಜಗಳವಾಡಿ ಎಸ್‌ಪಿಬಿ ಅವರಿಗೇ ಮೊದಲ ಬಹುಮಾನ ಕೊಡಬೇಕು ಎಂದರಂತೆ. ಅದರಂತೆ ಮಾಡಲಾಯಿತು. ಕಾರಣ, ಎಸ್‌ಪಿಬಿ ಅಷ್ಟು ಚೆನ್ನಾಗಿ ಹಾಡುತ್ತಿದ್ದರು. 

Latest Videos

undefined

ಅವ್ನೊಬ್ಬ ಕಂತ್ರಿ.. ಕಜ್ಜಿನಾಯಿ, ಶುರುವಾಗಿದ್ದೇ ಅವ್ನಿಂದ; ಆದ್ರೆ ನಟ ದರ್ಶನ್ 'ಇದನ್ನ' ಮಾಡ್ಬೇಕಿತ್ತು: ಅಗ್ನಿ ಶ್ರೀಧರ್

ಇಂಥ ಮಹಾನ್ ಗಾಯಕ ಬಳಿಕ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಕಾರಣ, ಗಾಯಕ ಎಸ್‌ಪಿಬಿ ಅವರನ್ನು ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅಂದಿನ ಖ್ಯಾತ ಗಾಯಕಿ ಎಸ್‌ ಜಾನಕಿ ಅವರು ಪರಿಚಯಿಸಿದರು. ಬಳಿಕ ಅವರು ಒಂದಾದ ಮೇಲೆ ಮತ್ತೊಂದು ಎಂಬಂತೆ ತೆಲುಗು, ಕನ್ನಡ, ತಮಿಳು ಹಾಗು ಮಲಯಾಳಂ ಸಿನಿಮಾಗೀತೆಗಳನ್ನು ಹಾಡತೊಡಗಿದರು. ಅದರಲ್ಲೂ ಮುಖ್ಯವಾಗಿ ಅವರು ಕನ್ನಡ, ತೆಲುಗು ಹಾಗು ತಮಿಳು ಗೀತೆಗಳ ಗಾಯನದ ಮೂಲಕವೇ ಮಹಾನ್ ಗಾಯಕರಾದರು. ಹಿಂದಿ ಹಾಡುಗಳು ಸೇರದಂತೆ 16ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ ಎಸ್‌ಪಿಬಿ.

ಅಪಾಯದ ಸೆನ್ಸ್ ಮೊದ್ಲೇ ಆಗಿದೆ, ಆದ್ರೂ ಬೆಂಗಳೂರು ಬಿಟ್ಟು ಹೋಗದೇ ಜೈಲು ಸೇರ್ಕೊಂಡ್ರು ದರ್ಶನ್!

ಎಸ್‌ಪಿಬಿ ಅವರು ಹಾಡಿರುವ ವಿಭಿನ್ನ ಹಾಡುಗಳಿಗೆ ಲೆಕ್ಕವೇ ಇಲ್ಲ ಎನ್ನಬಹುದು. ಸಿನಿಮಾ ಗೀತೆಗಳೇ ಸುಮಾರು 45 ಸಾವಿರಕ್ಕೂ ಅಧಿಕವಾಗಿವೆ ಎನ್ನಲಾಗಿದೆ. ಭಕ್ತಿಗೀತೆಗಳು, ಭಾವಗೀತೆಗಳು ಹಾಗೂ ಗಜಲ್‌ಗಳನ್ನೆಲ್ಲ ಸೇರಸಿದರೆ ಒಂದು ಲಕ್ಷವನ್ನೂ ಮೀರಬಹುದು ಎನ್ನಲಾಗುತ್ತದೆ. ಯಾವುದೇ ರಾಗವಿರಲಿ, ಯಾವುದೇ ತಾಳವಿರಲಿ ಎಸ್‌ಪಿಬಿ ಅವರಿಗೆ ಹಾಡಲು ಯಾವುದೇ ರೀತಿಯಲ್ಲೂ ಸಮಸ್ಯೆ ಆಗುತ್ತಿರಲಿಲ್ಲ. ಅವರನ್ನೇ ಹುಡುಕಿಕೊಂಡು ಹೋಗಿ ಸಿನಿಮಾಗೀತೆಗಳನ್ನು ಎಲ್ಲರೂ ಹಾಡಿಸುತ್ತಿದ್ದರು, ಹಾಡಿಸಲು ಬಯಸುತ್ತಿದ್ದರು.

ಎದ್ನೋ ಬಿದ್ನೋ ಅಂತ ಈಗ ಜೈಲಿನ ಕಡೆ ಮುಖ ಮಾಡುತ್ತಿದ್ದಾರೆ ಮಾತನ್ನಾಡದ ನಟ ದರ್ಶನ್ ಆಪ್ತರು, ಯಾಕೆ?

ಅಂಥ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡದ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿದ್ದರು. ಅವರೇ ಸ್ವತಃ ಅದನ್ನು ಹಲವಾರು ವೇದಿಕೆಗಳಲ್ಲಿ ಹೇಳಿದ್ದರು. ತಮ್ಮ ಸ್ವಂತ ಹುಟ್ಟೂರು ಇರುವ ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಕೂಡ ನಾನು ಕನ್ನಡ ನಾಡನ್ನು, ಕನ್ನಡ ಜನರನ್ನು  ಹೆಚ್ಚು ಪ್ರೀತಿಸುತ್ತೇನೆ' ಎಂದಿದ್ದರು. ಜೊತೆಗೆ, ಮುಂದಿನ ಜನ್ಮ ಅಂತಿದ್ದರೆ ನಾನು ಮತ್ತೆ ಕನ್ನಡ ನಾಡಲ್ಲೇ ಹುಟ್ಟಬೇಕು, ಹುಟ್ಟುತ್ತೇನೆ ಎಂದಿದ್ದರು. 

ಸಖತ್ ಕ್ಲಾಸ್ ತಗೊಂಡ್ರು ಅಗ್ನಿ ಶ್ರೀಧರ್, ಏನೋ ಇದೂ, ಬುದ್ದಿವಂತ ಆಗಿದ್ದೂ ಏನು ಮಾತಿದು ಉಪೇಂದ್ರ..?

ಇಂಥ ಮಹಾನ್ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಒಮ್ಮೆ ತಮಿಳುನಾಡಿನ ವೇದಿಕೆಯಲ್ಲಿ ಕನ್ನಡದ 'ಜೊತೆಯಲಿ.., ಜೊತೆಜೊತೆಯಲಿ ಇರುವೆನು ಹೀಗೆ ಎಂದೂ..' ಎಂಬ ಕನ್ನಡದ ಸೂಪರ್ ಹಿಟ್ ಹಾಡನ್ನು ಹಾಡಿ ಸಖತ್ ಚಪ್ಪಾಳೆ ಗಿಟ್ಟಿಸಿದ್ದರು. ಅವರಿಗೆ ಕನ್ನಡದ ಮೇಲಿನ ಪ್ರೀತಿ-ಅಭಿಮಾನ ಅಪಾರವಾಗಿತ್ತುಎಂಬುದಕ್ಕೆ ಹಲವಾರು ನಿದರ್ಶನಗಳು ಹಾಗು ಸಾಕ್ಷಿಗಳು ಇವೆ. 25 ಸೆಪ್ಟೆಂಬರ್ 2020 ರಂದು ಮಹಾನ್ ಗಾಯಕ ಎಸ್‌ಪಿಬಿ ಇಹಲೋಕ ತ್ಯಜಸಿದರು. ಅವರ ನೆನಪು ಶಾಶ್ವತ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!

ರಾಕಿಂಗ್ ಸ್ಟಾರ್ ಫಾರ್ಮುಲಾ ಹೈಜಾಕ್ ಆಯ್ತಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

click me!