ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ವಿರುದ್ಧವೇ ಹೇಳಿಕೆ ನೀಡಿದ ನಟಿ ಪವಿತ್ರಾಗೌಡ

By Sathish Kumar KH  |  First Published Jun 30, 2024, 1:38 PM IST

ರೇಣುಕಾಸ್ವಾಮಿಗೆ ನಾನು ಒಂದು ಬಾರಿ ಚಪ್ಪಲಿಯಿಂದ ಹೊಡೆದೆ, ಆದರೆ ನಟ ದರ್ಶನ್ ನನ್ನ ಮುಂದೆಯೇ ಹಲ್ಲೆ ಮಾಡಿದನು ಎಂದು ದರ್ಶನ್ ವಿರುದ್ಧ ನಟಿ ಪವಿತ್ರಾಗೌಡ ಹೇಳಿಕೆ ನೀಡಿದ್ದಾರೆ. 


ಬೆಂಗಳೂರು (ಜೂ.30): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಆತನ 2ನೇ ಪತ್ನಿ ಸೇರಿದಂತೆ 17 ಜನರ ಗ್ಯಾಂಗ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಈ ವೇಳೆ ನಟಿ ಪವಿತ್ರಾಗೌಡನನ್ನು ವಿಚಾರಣೆ ಮಾಡಿದಾಗ ರೇಣುಕಾಸ್ವಾಮಿಗೆ ನಾನು ಚಪ್ಪಲಿಯಿಂದ ಒಂದು ಏಟು ಹೊಡೆದೆ. ಆದರೆ, ದರ್ಶನ್ ನನ್ನ ಮುಂದೆಯೇ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ ಎಂದು ಎ1 ಆರೋಪಿ ಪವಿತ್ರಾಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ನಟಿ ಪವಿತ್ರಾಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದಾನೆ ಎಂಬ ಕೋಪಕ್ಕೆ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಆತನನ್ನು ಕಿಡ್ನಾಪ್ ಮಾಡಿಕೊಂಡು ಕರೆತಂದು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ದೊಡ್ಡ ಸಾಕ್ಷಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಸೇರಿ ಒಟ್ಟು 17 ಜನ ಆರೋಪಿಗಳನ್ನು ವಿಚಾರಣಾಧೀನ ಕೈದಿಗಳಾಗಿ ಜೈಲಿಗಟ್ಟಲಾಗಿದೆ. ಇನ್ನು ಜೈಲಿನಲ್ಲಿ ಪ್ರತಿನಿತ್ಯ ಸಂಕಟ ಅನುಭವಿಸುತ್ತಿರುವ ನಟಿ ಪವಿತ್ರಾಗೌಡ ಒಂದು ವಾರದಲ್ಲಿಯೇ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಈ ಮೂಲಕ ತನಗಾಗಿ ರೇಣುಕಾಸ್ವಾಮಿ ಕೊಲೆ ಮಾಡಿದ ನಟ ದರ್ಶನ್ ವಿರುದ್ಧ ಹೇಳಿಕೆ ಕೊಟ್ಟಿದ್ದಾಳೆ.

Tap to resize

Latest Videos

ನಟ ದರ್ಶನ್‌ಗಾಗಿ ಜೈಲು ಸೇರಿದ ಅಭಿಮಾನಿ ಜಗದೀಶನ ಕುಟುಂಬಕ್ಕೆ ತುತ್ತು ಅನ್ನಕ್ಕೂ ತತ್ವಾರ!

ಪೊಲೀಸರ ಮುಂದೆ ಪವಿತ್ರಾಗೌಡ ಹೇಳಿದ್ದೇನು?
ಪಟ್ಟಣಗೆರೆ ಶೆಡ್ನಲ್ಲಿ ಕೂಡಿಹಾಕಿದ್ದ ರೇಣುಕಾಸ್ವಾಮಿಗೆ ನಾನು ಒಂದು ಏಟು ಚಪ್ಪಲಿಯಲ್ಲಿ ಹೊಡೆದಿದ್ದೇನೆ. ನಂತರ ತನ್ನ ಎದುರಿನಲ್ಲಿಯೇ ರೇಣುಕಾಸ್ವಾಮಿಯ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಮೂಲಕ ಕೊಲೆ ಆರೋಪಿ ನಟ ದರ್ಶನ್ ವಿರುದ್ಧವಾಗಿಯೇ ನಟಿ ಪವಿತ್ರಾಗೌಡ ಹೇಳಿಕೆ ನೀಡದ್ದಾಳೆ. 'ನಾನು ಚಪ್ಪಲಿಯಲ್ಲಿ ಒಂದು ಏಟು ಹೊಡೆದಿದ್ದು ನಿಜ, ದರ್ಶನ್ ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದು ನಿಜ, ನಾನು ಶೆಡ್ ಗೆ ಹೋಗುವುದಕ್ಕು ಮುಂಚಿನಿಂದಲೂ ದರ್ಶನ್ ಶೆಡ್‌ನಲ್ಲಿದ್ದನು' ಎಂದು ಪೊಲೀಸರ ಮುಂದೆ ಪವಿತ್ರಾ ಗೌಡ ಹೇಳಿಕೆ ನೀಡಿದ್ದಾಳೆ. 

click me!