
ಭಾರತ ಚಿತ್ರರಂಗ ಕಂಡಂತ ಅದ್ಭುತ ಗಾಯಕಿ ಶ್ರೇಯಾ ಘೋಷಾಲ್. ತನ್ನ ಹಿಂಪಾದ ಧ್ವನಿಗೆ ಹಾಗೂ ವೈಯಕ್ತಿಕ ಜೀವನದ ವಿಚಾರಗಳಿಗೆ ಸುದ್ದಿಯಾಗುವ ನಟಿ ಇದೀಗ ಬೇರೆಯೇ ವಿಚಾರಕ್ಕೆ ಟ್ಟಿಟರ್‌ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ.
2010ರ ಸಮ್ಮರ್ US ಟೂರ್ ವೇಳೆ ಓಹಿಯೋ ರಾಜ್ಯದ ಗವರ್ನರ್ ಟೆಡ್ ಸ್ಟ್ರಿಕ್ಲ್ಯಾಂಡ್ ಜೂನ್ 26ರನ್ನು ಶ್ರೇಯಾ ಘೋಷಾಲ್ ದಿನ ಎಂದು ಘೋಷಣೆ ಮಾಡಿದ್ದರು. ಹೀಗಾಗಿ ಇಂದು ಶ್ರೇಯಾ ಅಭಿಮಾನಿಗಳು 11ನೇ ಶ್ರೇಯಾ ಘೋಷಾಲ್ ದಿನವನ್ನು ಆಚರಿಸುತ್ತಿದ್ದಾರೆ. ಟ್ಟಿಟರ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುವ ಮೂಲಕ ಶ್ರೇಯಾ ಡೇ ಯನ್ನು ಟ್ರೆಂಡ್ ಮಾಡುತ್ತಿದ್ದಾರೆ.
'ಪ್ರತಿ ವರ್ಷವೂ ಈ ದಿನವನ್ನು ವಿಶೇಷವಾಗಿಸುತ್ತಿರುವುದಕ್ಕೆ ಧನ್ಯವಾದಗಳು. ಶ್ರೇಯಾ ಘೋಷಾಲ್ ದಿನ ಎಂದೆಂದಿಗೂ ನಿಮ್ಮ ದಿನವಾಗಿರುತ್ತದೆ. ಫೀಲ್ ಹಂಬಲ್ಡ್,' ಎಂದು ಶ್ರೇಯಾ ಟ್ಟೀಟ್ ಮಾಡಿದ್ದಾರೆ.
ಮಗ ದೇವ್ಯಾನ್ ಮೊದಲ ಫೋಟೋ ಶೇರ್ ಮಾಡಿದ ಶ್ರೇಯಾ
37 ವರ್ಷದ ಶ್ರೇಯಾ ಹುಟ್ಟಿದ್ದು ಬೆಂಗಾಲಿ ಕುಟುಂಬದಲ್ಲಾದರೂ ಬೆಳೆದದ್ದು ರಾಜಸ್ಥಾನದಲ್ಲಿ. ನಾಲ್ಕನೇ ವಯಸ್ಸಿಗೇ ಸಂಗೀತಾ ಅಭ್ಯಾಸ ಶುರು ಮಾಡಿದ ಈ ಗಾಯಕಿಗೆ ಇದೀಗ ಭಾರತ ಕಂಡ ಅದ್ಭುತ ಗಾಯಕಿ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಸೈಮಾ, ಫಿಲ್ಮಂ ಫೇರ್ ಹೀಗೆ ಸಾಲು ಸಾಲು ಪ್ರಶಸ್ತಿಗಳು ಶ್ರೇಯಾ ಮಡಿಲು ಸೇರಿವೆ. ಕನ್ನಡ ಸೇರಿ ದೇಶದ ವಿವಿಧ ಭಾಷೆಗಳ ಚಿತ್ರಗಳಲ್ಲಿ ಹಾಡಿರುವ ಈ ಗಾಯಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾರೆ. ಹ್ಯಾಪಿ ಶ್ರೇಯಾ ಘೋಷಾಲ್ ಡೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.