'ಅಯೋಗ್ಯ' ಚಿತ್ರದ ಈ ಹಾಡು ಫಾಲೋ ಮಾಡಿದ್ರೆ ಪಕ್ಕಾ ಪೊಲೀಸ್ ಕೇಸ್ ಆಗುತ್ತೆ: ನಟಿ ರಮ್ಯಾ

Suvarna News   | Asianet News
Published : Jun 26, 2021, 03:40 PM ISTUpdated : Jun 26, 2021, 04:11 PM IST
'ಅಯೋಗ್ಯ' ಚಿತ್ರದ ಈ ಹಾಡು ಫಾಲೋ ಮಾಡಿದ್ರೆ ಪಕ್ಕಾ ಪೊಲೀಸ್ ಕೇಸ್ ಆಗುತ್ತೆ: ನಟಿ ರಮ್ಯಾ

ಸಾರಾಂಶ

ಅಯೋಗ್ಯ ಚಿತ್ರದ ಈ ಹಾಡಿಗೆ ನಟಿ ರಮ್ಯಾ ಫಿದಾ. ಫ್ಲೀಸ್ ಸೀರಿಯಸ್ ಆಗಿ ಫಾಲೋ ಮಾಡಬೇಡಿ ಎಂದು ನೆಟ್ಟಿಗರಿಗೆ ಸಲಹೆ

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಇದೀಗ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಅಭಿನಯದ 'ಅಯೋಗ್ಯ' ಚಿತ್ರದ ಈ ಒಂದು ಹಾಡಿಗೆ ಫಿದಾ ಆಗಿದ್ದಾರೆ. ಹಾಡು ಶೇರ್ ಮಾಡಿಕೊಂಡು ರಮ್ಯಾ ಪಡ್ಡೆ ಹುಡುಗರಿಗೆ ಒಂದು ಸಲಹೆ ಕೊಟ್ಟಿದ್ದಾರೆ. 

ಪದೇ ಪದೇ ಸ್ಯಾಂಡಲ್‌ವುಡ್‌ ಪದ್ಮಾವತಿಗೆ ಕಾಡುತ್ತಿದೆ ಅದೇ ಪ್ರಶ್ನೆ! 

ರಮ್ಯಾ ಶೇರ್ ಮಾಡಿಕೊಂಡಿರುವ ವಿಡಿಯೋ 'ಹಿಂದೆ ಹಿಂದೆ ಹಿಂದೆ ಹೋಗು ಮಕ್ ಉಗುದ್ರು ಹಿಂದೆ ಹೋಗು..' ಹಾಡು. ಪಕ್ಕಾ ಮಂಡ್ಯ ಶೈಲಿಯ ಹಾಡು. 'ಸತೀಶ್ ನೀನಾಸಂ ಮತ್ತು ರಚಿತಾ ರಾಮ್‌ಗೆ ಆಲ್‌ ದಿ ಬೆಸ್ಟ್. ದಯವಿಟ್ಟು ಈ ಹಾಡಿನ ಸಾಲುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮಗೆ ಹುಡುಗಿ ಸಿಗುವುದಿಲ್ಲ ಸಿಗೋದು ಸೆಕ್ಷನ್ 294/509,' ಎಂದು ತಮಾಷೆ ಮಾಡಿದ್ದಾರೆ. 

2018ರಲ್ಲಿ ಬಿಡುಗಡೆಯಾದ ಅಯೋಗ್ಯ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. 2019ರಲ್ಲಿ ಫಿಲ್ಮಫೇರ್ ಬೆಸ್ ಸಿನಿಮಾ ಪ್ರಶಸ್ತಿ ಪಡೆದಿದೆ. ನಟ ನೀನಾಸಂ ಸತೀಶ್ ಫಿಲ್ಮಫೇರ್ ಬೆಸ್ಟ್ ನಟ ಪ್ರಶಸ್ತಿ ಪಡೆದಿದ್ದರು. ಹಾಗೂ ನಟಿ ರಚಿತಾ ರಾಮ್ ಈ ಚಿತ್ರಕ್ಕೆ ಸೈಮಾ ಬೆಸ್ಟ್ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈಗಲೂ ಟಿವಿಯಲ್ಲಿ ಸಿನಿಮಾ ಪ್ರಸಾರವಾದರೆ ಅತಿ ಹೆಚ್ಚಿನ ವೀಕ್ಷಣೆ ಪಡೆದುಕೊಂಡ ಸಿನಿಮಾ ಲಿಸ್ಟ್‌ಗೆ ಈ ಚಿತ್ರ ಸೇರುತ್ತದೆ. 

ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವುದಕ್ಕೆ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರಿಗೆ ಉತ್ತರ ನೀಡುವುದಲ್ಲದೆ, ಹೊಸ ಕಲಾವಿದರ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಿ, ಶೇರ್ ಮಾಡಿಕೊಂಡು ಶುಭ ಹಾರೈಸುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!