ಅಬ್ಬಬ್ಬಾ! ನಟಿ ಡೈಸಿ ಬೋಪಣ್ಣ ಗುಂಗುರು ಕೂದಲು ಸೀಕ್ರೆಟ್ ಇದಂತೆ!

Published : Jun 26, 2021, 02:04 PM ISTUpdated : Jun 26, 2021, 02:05 PM IST
ಅಬ್ಬಬ್ಬಾ! ನಟಿ ಡೈಸಿ ಬೋಪಣ್ಣ ಗುಂಗುರು ಕೂದಲು ಸೀಕ್ರೆಟ್ ಇದಂತೆ!

ಸಾರಾಂಶ

ನಟಿ ಡೈಸಿ ಬೋಪಣ್ಣ ಕೂದಲು ಆರೈಕೆ ವಿಡಿಯೋ ವೈರಲ್ ಆಗುತ್ತಿದೆ. ನೀವು ಗುಂಗುರು ಚೆಲುವೆ ಅಂತ ಗೊತ್ತಿರಲಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

ಸುಮಾರು 8 ವರ್ಷದಿಂದ ಕನ್ನಡ ಚಿತ್ರರಂಗದಿಂದ ದೂರು ಉಳಿದಿರುವ ನಟಿ ಡೈಸಿ ಬೋಪಣ್ಣ ಇದೀಗ ಇನ್‌ಸ್ಟಾಗ್ರಾಂ ಮೂಲಕ ಸೋಷಿಯಲ್ ಲೈಫ್‌ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕೂದಲು ಹಾಗೂ ಸ್ವಸ್ಥ ಆರೈಕೆ ಬಗ್ಗೆ ವಿಡಿಯೋ ಶೇರ್ ಮಾಡುವ ಮೂಲಕ ಡೈಸಿ ಇದೀಗ ಫ್ಯಾಷನ್ ಬ್ಲಾಗರ್‌ ಆಗುವ ಸೂಚನೆ ನೀಡಿದ್ದಾರೆ. 

ಎಲ್ಲೋದ್ರು ಡೈಸಿ ಬೋಪಣ್ಣಾ? ನಿಜಕ್ಕೂ ಸಿನಿಮಾದಿಂದ ದೂರ ಉಳಿದ್ರಾ? 

ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಪೋಟೋ ಹಾಗೂ ಇನ್‌ಸ್ಟಾ ರೀಲ್ಸ್ ಶೇರ್ ಮಾಡಿಕೊಳ್ಳುತ್ತಿರುವ ನಟಿ ಡೈಸಿ ಬೋಪಣ್ಣ ಕೂದಲು ಗುಂಗುರು ಎಂದು ಇತ್ತೀಚಿಗೆ ತಿಳಿದು ಬಂದ ವಿಚಾರ. ಕುತೂಹಲದಿಂದ ನೆಟ್ಟಿಗರು ಆರೈಕೆ ಬಗ್ಗೆ ವಿಚಾರಿಸಿದ್ದಾರೆ. ಸಣ್ಣ ವಿಡಿಯೋ ಮೂಲಕ ಡೈಸಿ  ಏನು ಮಾಡುತ್ತಾರೆ ಎಂದು ಹಂಚಿಕೊಂಡಿದ್ದಾರೆ . 'ಎಲ್ಲರೂ ತುಂಬಾ ದಿನಗಳಿಂದ ಕೇಳುತ್ತಿದ್ದೀರಿ. ನನ್ನ ಕೂದಲು ಆರೈಕೆ ತುಂಬಾನೇ ಸಿಂಪಲ್. ಸಣ್ಣ ಪುಟ್ಟ ಕೇರ್‌ನಿಂದ ನಮ್ಮ ಕೂದಲು ಚೆನ್ನಾಗಿರುತ್ತದೆ. ಇದು ತುಂಬಾ ಬೇಸಿಕ್ ಆಗಿರುವ ಕಾರಣ ಯಾರು ಬೇಕಿದ್ದರೂ ಟ್ರೈ ಮಾಡಬಹುದು,' ಎಂದು ಬರೆದುಕೊಂಡಿದ್ದಾರೆ. 

ನೆಲ್ಲಿಕಾಯಿ, ಬೃಂಗರಾಜ್ ಮತ್ತು ಬ್ರಾಹ್ಮಿ ಅಂಶ ಹೊಂದಿರುವ ಪತಂಜಲಿ ಎಣ್ಣೆಯನ್ನು ಬಳಸುತ್ತಾರಂತೆ ಡೈಸಿ. ಬುರುಡೆ ಬೆಚ್ಚಗೆ ಆಗುವವರೆಗೂ ಮಸಾಜ್ ಮಾಡಿಕೊಳ್ಳುತ್ತಾರಂತೆ. ಎಣ್ಣೆ ಮಾತ್ರವಲ್ಲ ದಿನಕ್ಕೆ ಸರಿಯಾಗಿ 6-7 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಅಡುಗೆಯಲ್ಲಿ ವಿವಿಧ ರೀತೆಯ ಬೇಳೆ ಕಾಳುಗಳನ್ನು ಬಳಸಬೇಕು ಮತ್ತು ಒಣ ಹಣ್ಣುಗಳು, ಫ್ಲೀಕ್‌ ಸೀಡ್‌ಗಳನ್ನು ಸೇವಿಸಬೇಕು ಎಂದಿದ್ದಾರೆ. 'ನಾವೂ ಈ ರೀತಿ ಮಾಡುತ್ತೇವೆ. ಇನ್ನೂ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಿನಿಮಾ, ರಾಜಕೀಯ ಎರಡರಿಂದಲೂ ದೂರ: ಮೋಹಕ ತಾರೆ ರಮ್ಯಾ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?
ದೇವರೇ.. ದರ್ಶನ್ ಸಂಕಷ್ಟ ದೂರವಾಗಲಿ: ಮಗನಿಗಾಗಿ ವಿಶೇಷ ಪೂಜೆ ಸಲ್ಲಿಸಿದ ತಾಯಿ ಮೀನಾ ತೂಗುದೀಪ