ಹಿಂದೆ ಮಾಡಿದ್ದೆಲ್ಲಾ ಬುದ್ಧಿವಂತರಿಗೆ ಆದರೆ ಇದು ಅತಿ ಬುದ್ಧಿವಂತರಿಗೆ ಮಾತ್ರ; UI ಸತ್ಯ ಬಿಚ್ಚಿಟ್ಟ ಉಪ್ಪಿ!

By Vaishnavi Chandrashekar  |  First Published Sep 19, 2024, 1:28 PM IST

ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಉಪೇಂದ್ರ. UI ಸಿನಿಮಾ ಯಾರಿಗೆ ಮಾಡಿರುವುದು ಗೊತ್ತೇ? 
 


ಸ್ಯಾಂಡಲ್‌ವುಡ್‌ನ ಬುದ್ದಿವಂತ, ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 56ನ ವತಂತಕ್ಕೆ ಕಾಲಿಟ್ಟಿರುವ ಉಪ್ಪಿ ತಮ್ಮ ಫ್ಯಾನ್ಸ್ ಜೊತೆ ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ತಮ್ಮ ನಟನೆ-ನಿರ್ದೇಶನದ ಮೋಸ್ಟ್ ಅವೇಟೆಡ್ ಮೂವಿ UIನ ಎಕ್ಸ್ ಕ್ಲೂಸಿವ್ ಅಪ್ ಡೇಟ್ ಕೂಡ ಹಂಚಿಕೊಂಡಿದ್ದಾರೆ. ಉಪ್ಪಿ ನಟನೆಯ 45, ಬುದ್ದಿವಂತ -2 ತಂಡಗಳಿಂದಲೂ ಸ್ಪೆಷಲ್ ನ್ಯೂಸ್ ಬಂದಿವೆ. ಈ ವರ್ಷ ತಮ್ಮ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ಸ್ ನೀಡಿದ್ದಾರೆ.

ಇವತ್ತು ಕನ್ನಡ  ಸಿನಿರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಉಪೇಂದ್ರಗೆ ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್‌ವುಡ್‌ನಲ್ಲಿ ತನ್ನ ವಿಭಿನ್ನ ಐಡಿಯಾಗಳಿಂದ ಹೊಸ ಅಲೆಯನ್ನ ಸೃಷ್ಟಿಸಿದ್ದವರು ಸೃಷ್ಟಿಸುತ್ತಿರುವವರು ಉಪ್ಪಿ. ನಿರ್ದೇಶನದ ಜೊತೆಗೆ  ನಟನೆಗೂ ಇಳಿದು, ಎರಡೂ ದೋಣಿಯ ಮೇಲೆ ಕಾಲಿಟ್ಟು, ಕಾಲೆಳೆಯುವವರ ಮುಂದೆ ಗೆದ್ದು ಬೀಗಿದ ಅಸಲಿ ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ತಮ್ಮ ಕತ್ರಿಗುಪ್ಪೆಯ ನಿವಾಸದಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಷನ್ ಮಾಡಿದ್ದಾರೆ. ತಡರಾತ್ರಿಯಿಂದಲೇ ಆಗಮಿಸಿದ ಅಭಿಮಾನಿಗಳನ್ನ ಭೇಟಿ ಮಾಡಿ ಫ್ಯಾನ್ಸ್ ಕೊಟ್ಟ ಉಡುಗೊರೆ ಸ್ವೀಕರಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ರು.

Tap to resize

Latest Videos

undefined

ಆಂಟಿ ನಿಮ್ಮ ಮಗಳಿಗೆ ಮದ್ವೆ ಮಾಡಲ್ವಾ...ಓಡೋದ್ರೆ ಕಷ್ಟ?; ಫಂಕ್ಷನ್‌ಗೆ ಹೋದ್ರೂ ಶ್ರೀಲೀಲಾ ಕಾಲೆಳೆದ ನೆಟ್ಟಿಗರು!

ಇನ್ನೂ ಉಪ್ಪಿ ಕೂಡ ಅಭಿಮಾನಿಗಳಿಗೆ ಬರ್ತ್ ಡೇ ದಿನ ಭರ್ಜರಿ ಉಡುಗೊರೆ ಕೊಟ್ಟಿದ್ದಾರೆ. 8 ವರ್ಷಗಳ ಬಳಿಕ ಮತ್ತೆ ಡೈರೆಕ್ಟರ್​ ಕ್ಯಾಪ್ ತೊಟ್ಟಿರೋ ಉಪ್ಪಿ UI ಅನ್ನೋ ಪ್ಯಾನ್ ಇಂಡಿಯಾ ಸಿನಿಮಾನ ರೆಡಿ ಮಾಡಿದ್ದಾರೆ. ಉಪ್ಪಿ ಬರ್ತ್ ಡೇ ದಿನ UIನ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಉಪೇಂದ್ರ ಕುದುರೆ ಮೇಲೆ ಕುಳಿತಿರೋ ಈ ಪೊಸ್ಟರ್ ನೋಡ್ತಿದ್ರೆ ಉಪ್ಪಿ ಕಲ್ಕಿ ಅವತಾರ ತಳೆದಂತೆ ಕಾಣ್ತಾ ಇದೆ.UI ಜೊತೆಗೆ ಉಪೇಂದ್ರ ನಟಿಸಿರೋ 45 ಸಿನಿಮಾದ ಗ್ಲಿಂಪ್ಸ್ ಕೂಡ ರಿಲೀಸ್ ಆಗಿದೆ. ಅರ್ಜುನ್ ಜನ್ಯ ಡೈರೆಕ್ಟ್ ಮಾಡಿರೋ  ಈ ಸಿನಿಮಾದಲ್ಲಿ ರಾಜ್ ಶೆಟ್ಟಿ ಜೊತೆ ಉಪ್ಪಿ ಸ್ಕ್ರೀನ್ ಶೇರ್ ಮಾಡಿದ್ದಾರೆ. 45 ಸಿನಿಮಾದ ಉಪ್ಪಿ ಲುಕ್ ಕೂಡ ಸಖತ್ ಡಿಫ್ರೆಂಟ್ ಆಗಿದೆ. ಬುದ್ದಿವಂತ-2 ಟೀಮ್ ಕೂಡ ಹೊಸ ಪೋಸ್ಟರ್ ರಿಲೀಸ್ ಮಾಡಿ, ಉಪ್ಪಿಗೆ ಶುಭ ಹಾರೈಸಿದ್ದರು. ಇನ್ನೂ UI ತಂಡದ ಜೊತೆಗೆ ಮಾಧ್ಯಮದವರನ್ನ ಭೇಟಿ ಮಾಡಿದ ಉಪ್ಪಿ, ಸಿನಿಮಾದ ಒಂದಿಷ್ಟು ಎಕ್ಸ್ ಕ್ಲೂಸಿವ್ ವಿಚಾರವನ್ನೂ ಹಂಚಿಕೊಂಡಿದ್ದಾರೆ. ತಾನು ಹಿಂದೆ ಮಾಡಿದ್ದೆಲ್ಲಾ ಬುದ್ದಿವಂತರಿಗೆ. ಆದ್ರೆ UI ಅತಿ ಬುದ್ದಿವಂತರಿಗೆ ಮಾತ್ರ ಎಂದಿದ್ದಾರೆ. 

 

click me!