ಮತ್ತೆ ಮದ್ವೆ ಆಗ್ತಾರೆ ಚಂದನ್ ಶೆಟ್ಟಿ, ಅವ್ರು ಹೊಸ ಪಾರ್ಟನರ್, ಆವತ್ತು ಮದ್ವೆ..!

Published : Jan 24, 2025, 04:37 PM ISTUpdated : Jan 24, 2025, 04:40 PM IST
ಮತ್ತೆ ಮದ್ವೆ ಆಗ್ತಾರೆ ಚಂದನ್ ಶೆಟ್ಟಿ, ಅವ್ರು ಹೊಸ ಪಾರ್ಟನರ್, ಆವತ್ತು ಮದ್ವೆ..!

ಸಾರಾಂಶ

'ನೋಡಿರುವ ಪ್ರಪಂಚಕ್ಕಿಂತ ನಾನು ನೋಡದಿರುವ, ನೋಡಬೇಕಾದ ಪ್ರಪಂಚವೇ ಜಾಸ್ತಿ ಇದೆ ಎಂಬ ಅರಿವು ನನ್ನಲ್ಲಿ ಮೂಡುತ್ತಿದೆ. ಸಿಕ್ಕ ಸಮಯವನ್ನು ಜೀವನದ ಅನುಭವ ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದೇನೆ. ನನ್ನ ಮರುಮದುವೆ ಬಗ್ಗೆ ಹೇಳಬೇಕು ಎಂದರೆ, '2020ರಲ್ಲಿ ಇದ್ದ ನನ್ನ ಮೆಂಟಾಲಿಟಿ ಬದಲಾಗಿದೆ. ಜೀವನದ ಕೆಲವು ಘಟನೆಗಳಿಗೆ ಕಾರಣಗಳನ್ನು ಹುಡುಕುತ್ತ, ಹುಳುಕುಗಳನ್ನು ಕೆದಕುತ್ತ ಕೂರುವುದನ್ನು ಈಗ ನಿಲ್ಲಿಸಿಬಿಟ್ಟಿದ್ದೇನೆ.. 

ಸಿಂಗರ್, ನಟ ಹಾಗೂ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ (Chandan Shetty) ಮದುವೆ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಕುತೂಹಲ ಇದ್ದೇ ಇದೆ. 2020ರಲ್ಲಿ ನಟಿ, ಬಿಗ್ ಬಾಸ್ ಸಹಸ್ಪರ್ಧಿ ನಿವೇದಿತಾ ಗೌಡ ಜೊತೆ ಲವ್ ಆಗಿ ಮದುವೆ ಆಗಿದ್ದರು ಚಂದನ್ ಶೆಟ್ಟಿ. ಆದರೆ, ಅವರಿಬ್ಬರಲ್ಲಿ ಹೊಂದಾಣಿಕೆ ಆಗದೇ 2024ರಲ್ಲಿ ಇಬ್ಬರೂ ಪರಸ್ಪರ ಸಮ್ಮತಿ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಅಂದಿನಿಂದ ಇಂದಿವರೆಗೂ ಚಂದನ್ ಶೆಟ್ಟಿ ಮತ್ತೆ ಮದುವೆ ಆಗ್ತಾರಾ ಎಂಬ ಪ್ರಶ್ನೆ ಅವರನ್ನು ಬಿಟ್ಟು ಉಳಿದ ಹಲವರನ್ನು ಕಾಡುತ್ತಲೇ ಇದೆ.

ಬರೀ ಪ್ರಶ್ನೆ ಮಾತ್ರವಲ್ಲ, ಹೋದಲ್ಲಿ ಬಂದಲ್ಲಿ ಮರುಮದುವೆ ಬಗ್ಗೆ ತಮಗೆ ಪ್ರಶ್ನೆ ಬರುತ್ತಲೇ ಇರುತ್ತದೆ ಎಂಬುದನ್ನು ಸ್ವತಃ ಚಂದನ್ ಶೆಟ್ಟಿಯವರೇ ಬಾಯ್ಬಿಟ್ಟಿದ್ದಾರೆ. 'ವಿಚ್ಛೇದನ ಪಡೆದುಕೊಂಡು ಮತ್ತೆ ಸಿಂಗಲ್ ಆದ ದಿನದಿಂದಲೂ ತಮಗೆ ಆಗಾಗ ಈ ಪ್ರಶ್ನೆ ಎದುರಾಗುತ್ತಲೇ ಇದೆ' ಎಂದಿದ್ದಾರೆ ಚಂದನ್ ಶೆಟ್ಟಿ. ಆದರೆ, ಈ ಬಗ್ಗೆ ಅವರು ಅದೇನು ಉತ್ತರ ಕೊಡುತ್ತಾರೆ? ಸದ್ಯ ಆ ಬಗ್ಗೆ ಏನಂತ ನಿರ್ಧಾರ ಮಾಡಿದ್ದಾರೆ? ಇಲ್ಲಿದೆ ನೋಡಿ ಉತ್ತರ.. 

ಚಂದನ್ ಶೆಟ್ಟಿ ಆಗ್ರಾ ಸವಾರಿ, ಓಡ್ತಿರೋ ಕಾರಲ್ಲಿ ಏನ್ ಮಾಡ್ತಿದಾರೆ ಗುರೂ..?!

ಹೌದು, ಚಂದನ್ ಶೆಟ್ಟಿಯವರು ಮತ್ತೆ ಸಿಂಗಲ್ ಆಗಿ ಒಂದು ವರ್ಷವಾಗುತ್ತ ಬಂತು.. ಸದ್ಯಕ್ಕೆ ಅವರು ಮತ್ತೆ ಮದುವೆ ಆಗಿಲ್ಲ. ಈ ಬಗ್ಗೆ ಚಂದನ್ 'ಸದ್ಯ ನಾನು ಕೆಲಸಗಳಲ್ಲಿ ಬಹಳಷ್ಟು ಬ್ಯುಸಿ ಆಗಿದ್ದಾನೆ, ಕೆಲಸಗಳ ಮಧ್ಯೆ ಸಿಗುವ ಅಲ್ಪಸ್ವಲ್ಪ ರಜಾಗಳನ್ನು ನಾನು ವಿಭಿನ್ನ ರೀತಿಯಲ್ಲಿ ಕಳೆಯುತ್ತಿದ್ದೇನೆ. ಅಂದರೆ, ನಾನಿನ್ನೂ ನೋಡಿರದ ಜಾಗಗಳಿಗೆ ಹೋಗುವುದು, ನನ್ನ ಡ್ರೀಮ್‌ ಟ್ರಿಪ್ ಮಾಡುವುದು, ಹೊಸಹೊಸ ಸಾಹಸಗಳಲ್ಲಿ ತೊಡಗಿಸಿಕೊಳ್ಳುವುದು ಇತ್ಯಾದಿ..

ಈಗಲೂ ಅಷ್ಟೇ, ನಾನು ಬೆಂಗಳೂರಿನಿಂದ ಹಿಮಾಚಲ ಪ್ರದೇಶಕ್ಕೆ ಕಾರ್‌ನಲ್ಲಿ ಟೂರ್ ಮಾಡುತ್ತಿದ್ದೇನೆ. ಈಗಾಗಲೇ 3000 ಕೀಮೀ ಕ್ರಮಿಸಿ ನಾಗ್ಪುರ ದಾಟಿ, ಆಗ್ರಾಕ್ಕೆ ಬಂದಾಗಿದೆ. ಇಲ್ಲಿಯ ಪ್ರಕೃತಿ ಸೌಂದರ್ಯ, ಇಲ್ಲಿನ ಜನತೆಯೆ ಜೀವನ ಕ್ರಮ ಹೀಗೆ ಹತ್ತು ಹಲವು ಸಂಗತಿಗಳ ಕಡೆ ಗಮನಗೊಟ್ಟು ನೋಡುತ್ತಿದ್ದೇನೆ. ನೋಡಿರುವ ಪ್ರಪಂಚಕ್ಕಿಂತ ನಾನು ನೋಡದಿರುವ, ನೋಡಬೇಕಾದ  ಪ್ರಪಂಚವೇ ಜಾಸ್ತಿ ಇದೆ ಎಂಬ ಅರಿವು ನನ್ನಲ್ಲಿ ಮೂಡುತ್ತಿದೆ. ಸಿಕ್ಕ ಸಮಯವನ್ನು ಜೀವನದ ಅನುಭವ ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದೇನೆ. 

ಎಲ್ಲಾ ಪ್ಯಾಕ್ ಮಾಡ್ಕೊಂಡು ಇದ್ದಕ್ಕಿದ್ದಂತೆ ಹಿಮಾಚಲ ಪ್ರದೇಶಕ್ಕೆ ಹೊರಟ ಚಂದನ್ ಶೆಟ್ಟಿ! 

ಮದುವೆ ಬಗ್ಗೆ ಹೇಳಬೇಕು ಎಂದರೆ, '2020ರಲ್ಲಿ ಇದ್ದ ನನ್ನ ಮೆಂಟಾಲಿಟಿ ಬದಲಾಗಿದೆ. ಜೀವನದ ಕೆಲವು ಘಟನೆಗಳಿಗೆ ಕಾರಣಗಳನ್ನು ಹುಡುಕುತ್ತ, ಹುಳುಕುಗಳನ್ನು ಕೆದಕುತ್ತ ಕೂರುವುದನ್ನು ಈಗ ನಿಲ್ಲಿಸಿಬಿಟ್ಟಿದ್ದೇನೆ. 'Life has its Own Plan' ಅಂತಾರಲ್ಲ ಹಾಗೆ, ಜೀವನದಲ್ಲಿ ಮುಖ್ಯವಾದ ಘಟನೆಗಳು ಸಮಯ ಬಂದಾಗ ನಡೆಯಲು ಬಿಡಬೇಕು ಎಂಬ ಅರಿವು ನನ್ನಲ್ಲಿ ಮೂಡಿದೆ.

ನನ್ನ ಕೆಲಸಗಳಲ್ಲಿ, ನನ್ನ ಮಹತ್ವಾಕಾಂಕ್ಷೆಗಳಲ್ಲಿ, ನನಸಾಗದ ಕೆಲವು ಕನಸುಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಸದ್ಯಕ್ಕೆ ನಾನು ತೊಡಗಿಸಿಕೊಂಡಿದ್ದೇನೆ. ಕ್ತ ವ್ಯಕ್ತಿ, ಪೂರಕವಾದ ಸಮಯ ಕೂಡಿ ಬಂದರೆ, ನನ್ನ ಜೀವನದಲ್ಲಿ ಅದು ಬರಬೇಕು ಎಂದಿದ್ದರೆ ಖಂಡಿತ ಆ ಕಾಲ ಬರುತ್ತದೆ. ಆಗ ನಾನು ಅದಕ್ಕೆ 'ಯೆಸ್' ಎನ್ನಬಹುದು. ಅದು ಬಿಟ್ಟರೆ, ಮದುವೆ ಬಗ್ಗೆ ನಾನು ಸದ್ಯ ಆಗಬೇಕು ಅಂತಾಗಲಿ, ಆಗಬಾರದು ಅಂತಾಗಲೀ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಕುಂಯ್‌ಕಾ‌ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?

ಸೂಕ್ತ ಹುಡುಗಿ ಸಿಕ್ಕಾಗ ಅವ್ರೇ ನನ್ನ ಹೊಸ ಪಾರ್ಟನರ್, ಆವತ್ತೇ ನನ್ನ ಮದುವೆ ಬಗ್ಗೆ ನಿರ್ಧಾರ.. ಸದ್ಯಕ್ಕೆ ಭವಿಷ್ಯದ ಬಗ್ಗೆ ಯೋಚಿಸುವ, ಕಲ್ಪಿಸಿಕೊಳ್ಳುವ ಮೆಂಟಾಲಿಟಿಯಿಂದ ಹೊರಬಂದು ವರ್ತಮಾನದಲ್ಲಿ ಜೀವಿಸುತ್ತಿದ್ಧೇನೆ' ಎಂದಿದ್ದಾರೆ ಚಂದನ್ ಶೆಟ್ಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!