
ಬೆಂಗಳೂರು (ಜ.24): ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರು ಮತ್ತೊಮ್ಮೆ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಫೇಸ್‌ಬುಕ್ ಲೈವ್ ವಿಡಿಯೋದಲ್ಲಿ ವಾಗ್ದಾಳಿ ನಡೆದಿದ್ದಾರೆ. 'ಡಿ'ಬಾಸ್ ಬಾಯ್ಸ್ ಸ್ವಲ್ಪ ಅಮ್ಮಿಕಂಡಿರಿ; ನೀವೊಬ್ಬರೇ ಗಂಡ್ಸಾ? ಬೇರೆಯವರು ಬಳೆ ತೊಟ್ಟುಕೊಂಡಿದ್ದಾರಾ? ನನಗೆ ಮೆಸೇಜ್ ಮಾಡುವುದಕ್ಕೂ ಮುನ್ನ, ನನ್ನನ್ನು ಟ್ರೋಲ್ ಮಾಡುವುದನ್ನೂ ಮುನ್ನ ಎಚ್ಚರದಿಂದಿರಿ. ನನಗೆ ಗೌರವ ಕೊಡದಿದ್ದರೆ, ನಿಮಗೆ ಹೇಗೆ ಗೌರವ ಬಿಟ್ಟು ಮಾತನಾಡಬೇಕು ಎಂಬುದು ನನಗೂ ಬರುತ್ತದೆ. ನಿಮ್ಮ ಬಾಸ್ ದರ್ಶನ್ ಬೇಲ್ ಕ್ಯಾನ್ಸಲ್ ಆಗದೇ ಮನೆಗೆ ಬರಲಿ. ಆದರೆ, ಆಗಲೂ ಪಕ್ಕದ ಮನೆಗೆ ಹೋಗದೇ ಅವರ ಮನೆಗೆ ಹೋಗಲಿ ಎಂದು ವಕೀಲ್ ಜಗದೀಶ್ ಕಿಡಿಕಾರಿದ್ದಾರೆ.
ಫೇಸ್ ಬುಕ್ ಲೈವ್‌ನಲ್ಲಿ ಸುಮಾರು 12 ನಿಮಿಗಳ ಕಾಲ ಮಾತನಾಡಿರುವ ಅವರು, ನಮ್ಮ ದರ್ಶನ್‌ಗೆ ಅಂದರೆ ಶಿಷ್ಯರಿಂದ 'ಡಿ'ಬಾಸ್ ಎಂದು ಕರೆಸಿಕೊಳ್ಳುವ ದರ್ಶನ್ ವಿಚಾರ ಇದು. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಿ ಬಂದಿರುವುದು ಗೊತ್ತಿದೆ. ಹೈಕೋರ್ಟ್‌ನಿಂದ ದರ್ಶನ್‌ಗೆ ಜಾಮೀನು ಮಂಜೂರು ಮಾಡಿದೆ. ಈಗ ಹೈಕೋರ್ಟ್ ಜಾಮೀನು ಕೊಟ್ಟಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅಂದರೆ, ದರ್ಶನ್‌ಗೆ ಬೇಲ್ ಕೊಟ್ಟಿರುವ ವಿಚಾರವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿರುವ ಬೆನ್ನಲ್ಲಿಯೇ ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ 7 ಜನ ದರ್ಶನ್ ಗ್ಯಾಂಗ್‌ನವರಿಗೆ ನೋಟಿಸ್ ಜಾರಿಯಾಗಿದೆ.
ಹೈಕೋರ್ಟ್ ಜಾಮೀನು ಕೊಟ್ಟಿರುವುದು ತಪ್ಪು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ದರ್ಶನ್ ಸೇರಿ 7 ಜನರಿಗೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದ ಬೆನ್ನಲ್ಲಿಯೇ ಮುಂದಿನ ದಿನಗಳಲ್ಲಿ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದುಗೊಳಿಸುವ ಸಾಧ್ಯತೆ ಹೆಚ್ಚಾಗಿದೆ. ಡಿ-ಬಾಸ್ ಗ್ಯಾಂಗ್ ಇದಕ್ಕೆಲ್ಲಾ ನೀವು ಏನು ಮಾಡ್ತೀರಪ್ಪಾ? ನೀವೇನೂ ಮಾಡೋದಕ್ಕೆ ಆಗೊಲ್ಲ, ಇದು ಕಾನೂನು ಪ್ರಕ್ರಿಯೆ ಇದನ್ನು ಎಲ್ಲರೂ ಪಾಲಿಸಲೇಬೇಕು.
ಇದನ್ನೂ ಓದಿ: ಸುಪ್ರೀಂಕೋರ್ಟ್ ನಲ್ಲಿ ದರ್ಶನ್ ಅರ್ಜಿ ವಿಚಾರಣೆ, ಏನಾಯ್ತು?
ನಟ ದರ್ಶನ್‌ಗೆ ಮುಂದಿನ ದಿನಗಳಲ್ಲಿ ಬಿಗ್ ಸರ್ಪೈಸ್ ಎದುರಾಗಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದಾದರೆ ಪುನಃ ಜೈಲು ಸೇರುವುದು ಗ್ಯಾರಂಟಿ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವಂತೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಆದರೆ, ನಾನು ದರ್ಶನ್ ಜೈಲಿಗೆ ಹೋಗುತ್ತಾನೆ ಎಂದು ಹೇಳಿ ಟ್ರೋಲ್ ಆಗುವುದಕ್ಕೆ ಹೋಗುವುದಿಲ್ಲ. ದರ್ಶನ್‌ಗೆ ಒಳ್ಳೆಯದಾಗಲಿ. ಹೆಂಡತಿ ಮಕ್ಕಳೊಂದಿಗೆ ಸುಖವಾಗಿರಲಿ. ಅವರ ಎಲ್ಲ ಅಭಿಮಾನಿಗಳೂ ಸಂತಸದಿಂದಿರಲಿ.
ಜೈಲಿಗೆ ಹೋಗಿ ವಾಪಸ್ ಬಂದು ಜಾಮೀನಿನ ಮೇಲೆ ಹೊರಗಿದ್ದಾನೆ, ನಿಮ್ಮ ಬಾಸ್ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ನೀವೆಲ್ಲರೂ ಎಗರಾಡಲು ಹೋಗಬೇಡಿ. ಈಗ ನನ್ನನ್ನ ಟ್ರೋಲ್ ಮಾಡಿ.. ನಾನು ಯಾರಿಗೂ ನಾನು ಜಗ್ಗಲ್ಲ, ಬಗ್ಗಲ್ಲ, ನಿಮ್ಮಂತಹ ನೂರು ಜನರು ಬಂದರೂ ನನಗೆ ಏನೂ ಮಾಡಿಕೊಳ್ಳೋಕೆ ಆಗಲ್ಲ. ನಾನು ಯಾವ ಶೆಡ್ಡಿಗೂ ಹೋಗಲ್ಲ, ಪಕ್ಕದ ಮನೆಗೂ ಹೋಗಲ್ಲ. ಅದೇ ರೀತಿ ನೆಟ್ಟಗೆ ಮನೆಗೆ ಹೋಗಲು ಹೇಳಿ ನಿಮ್ಮ ಬಾಸ್‌ಗೆ. ನಿಮ್ಮ ಬಾಸ್ ಪಕ್ಕದ ಮನೆಗೆ ಹೋಗಿದ್ದರಿಂದಲೇ ಈ ರೀತಿ ಆಗಿರುವುದು.
ಲೋಕಾಯುಕ್ತ ಸಂತೋಷ್ ಹೆಗಡೆ ಅವರು ಹೇಳಿದಂತೆ ನಾನು ಬೇರೆಯವರ ಹಾಗೆ ಎರಡೆರಡು ಮನೆ ಮಾಡಿಕೊಂಡಿಲ್ಲ. ಎರಡೆರಡು ಮನೆಗಳನ್ನು ಮಾಡಿಕೊಳ್ಳದೇ ನಮ್ಮದು ಒಂದೇ ಮನೆ ಮಾಡಿಕೊಂಡು, ಅದೇ ಮನೆಗೆ ಹೋದರೆ ಈ ತರಹ ಆಗುತ್ತದೆ. ಅದೂ ಅಲ್ಲದೇ ಪಕ್ಕದ ಮನಗೆ ಹೋಗಿ, ಅವರ ಮಾತನ್ನು ಕೇಳಿ ಯಾರನ್ನೋ ಕೊಲೆ ಮಾಡಿದರೆ ಈ ತರಹ ಆಗುತ್ತದೆ. ಇದನ್ನೂ ಕೂಡ ನೀವು ಟ್ರೋಲ್ ಮಾಡಿ. ನೀವು ಟ್ರೋಲ್ ಮಾಡಿದರೆ, ಬೇಲ್ ಕೂಡ ಕ್ಯಾನ್ಸಲ್ ಆಗುತ್ತದೆ. ಪಕ್ಕದ ಮನೆಗೆ ಹೋದರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತದೆ. ಸುಪ್ರೀಂ ಕೋರ್ಟ್‌ನಿಂದ ಯಾವುದೇ ತೀರ್ಪು ಬರುವವರೆಗೂ ನೀವು ಸುಮ್ಮನಿರಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ
ನೀವು ನನಗೆ ಟ್ರೋಲ್ ಮಡ್ತೀರಾ? ಕೆಟ್ಟದಾಗಿ ಮೆಸೇಜ್ ಮಾಡ್ತೀರಾ? 'ಡಿ' ಬಾಸ್ ಬಾಯ್ಸ್ ಸ್ವಲ್ಪ ಅಮ್ಮಿಕಂಡಿರಿ; ನೀವೊಬ್ಬರೇ ಗಂಡ್ಸಾ? ಬೇರೆಯವರು ಬಳೆ ತೊಟ್ಟುಕೊಂಡಿದ್ದಾರಾ? ನನಗೆ ಮೆಸೇಜ್ ಮಾಡುವುದಕ್ಕೂ ಮುನ್ನ ಒಂದು ಗೌರವ ಇರಲಿ. ನಿಮಗೆ ಗೌರವ ಕೊಡಲು ಬರಲಿಲ್ಲವೆಂದರೆ ನನಗೂ ಗೌರವ ಬಿಟ್ಟು ಮಾತನಾಡಲು ಬರುತ್ತದೆ. ಏನೇ ಆಗಲಿ, ಜಾಮೀನು ಕ್ಯಾನ್ಸಲ್ ಆಗದೇ ಮನೆಗೆ ಹೋಗಲಿ. ಪಕ್ಕದ ಮನೆಗೆ ಹೋಗಿ ಅವರಿಗೆ ಬಂದ ಮೆಸೇಜ್ ನೋಡಿ ಕೊಲೆ ಮಾಡೋಡು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದರು.
ದರ್ಶನ್‌ದು ಜಾಮೀನು ಕ್ಯಾನ್ಸಲ್ ಆಗದೇ ಮನೆಗೆ ಬರಲಿ ಎಂದು ನಾನು ಕೂಡ ಆಶಿಸುತ್ತೇನೆ. ಟ್ರೋಲ್ ನಿಮಗೊಬ್ಬರಿಗೆ ಮಾಡುವುದಕ್ಕೆ ಬರೋದಾ? ನಾವು ಟ್ರೋಲ್ ಮಾಡಿದರೆ ನಿಮ್ಮ ಮುಖ ಬಾಡಿ ಹೋಗಿಬಿಡಬೇಕು. ದರ್ಶನ್ ಬೇಲ್ ಕ್ಯಾನ್ಸಲ್ ಆಗೊಲ್ಲ, ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟಿನ ಜಾಮೀನು ಎತ್ತಿ ಹಿಡಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿವರೆಗೂ ನೀವೆಲ್ಲಾ ಅಭಿಮಾನಿಗಳು ಸುಮ್ಮನಿರಿ. ನಿಮ್ಮ ಯೋಗ್ಯತೆಗಳನ್ನು ನಾನು ನಾಲ್ಕೈದು ತಿಂಗಳಿಂದ ನೋಡುತ್ತಿದ್ದೀನಿ ಟಾಮೀಸ್ ಎಂದು ವಕೀಲ ಜಗದೀಶ್ ನಿಂದನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.