ಒಳ್ಳೆ ಗಂಡನಾಗ್ತೀನಿ, ಆದರೆ ಸಿನಿಮಾ ವಿಚಾರಕ್ಕೆ ತಲೆ ಹಾಕಬಾರದು; ಭಾವಿ ಪತ್ನಿಗೆ ಪ್ರಥಮ್ ರಿಕ್ವೆಸ್ಟ್!

By Vaishnavi Chandrashekar  |  First Published Jun 29, 2023, 4:46 PM IST

ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಒಳ್ಳೆ ಹುಡುಗ ಪ್ರಥಮ್. ಪತ್ನಿ ಮಾಧ್ಯಮಗಳಿಂದ ದೂರ ದೂರ. ನಮಗೆ ಸಿದ್ಧರಾಮಯ್ಯ ಸಾಹೇಬರು ಸ್ಫೂರ್ತಿ... 


ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಲ ಒಳ್ಳೆ ಹುಡುಗ ಎಂದು ಕರೆಸಿಕೊಂಡಿರುವುದು ಒಳ್ಳೆ ಹುಡುಗ ಪ್ರಥಮ್. ನಟ ಭಯಂಕರ್ ಸಿನಿಮಾ ಆದ್ಮೇಲೆ ಕರ್ನಾಟಕದ ಅಳಿಯಾ ಮತ್ತು ಡ್ರೋನ್ ಪ್ರಥಮ್ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಸೈಲೆಂಟ್ ಆಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಭಾವಿ ಪತ್ನಿ ಮಾಧ್ಯಮಗಳಿಂದ ತುಂಬಾ ದೂರ ಮೊಬೈಲ್ ಬಳಸುವುದಿಲ್ಲ ಎಂದು ಆಗಾಗ ಹೇಳುತ್ತಿರುತ್ತಾರೆ. ಮೊದಲ ಸಲ ಈ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

'ನನ್ನ ಪತ್ನಿ ಸಿದ್ಧರಾಮಯ್ಯ ಮತ್ತು ರವಿಚಂದ್ರನ್ ಅವರ ಪತ್ನಿ ರೀತಿ ಮಾಧ್ಯಮಗಳಿಂದ ದೂರ ಇದ್ದಾರೆ. ಯಾಕೆ ಈ ರೀತಿ ಹೇಳುತ್ತಿರುವೆ ಅಂದ್ರೆ ಅನವಶ್ಯಕವಾಗಿ ಮಾಧ್ಯಮಗಳ ಮುಂದೆ ಯಾವತ್ತೂ ಅವರ ಮನೆಯವರು ಕಾಣಿಸಿಕೊಂಡಿಲ್ಲ. ಚಾಮುಂಡಿ ಬೆಟ್ಟಕ್ಕೆ ಹೋದರೆ ತಲೆಗೆ ಸೆರಗು ಹಾಕಿಕೊಂಡು ಅಸಿಸ್ಟೆಂಟ್ ಹುಡುಗನ ಜೊತೆ ದರ್ಶನ ಮಾಡಿಕೊಂಡು ಬರುತ್ತಾರೆ ಯಾರಿಗೂ ತಿಳಿಯುವುದಿಲ್ಲ ಎಲ್ಲೂ ಪ್ರಚಾರವಿಲ್ಲ. ಒಂದು ಜಾಗದಲ್ಲೂ ನಾನು ಸಿಎಂ ಅವರ ಪತ್ನಿ ಎಂದು ಹೇಳಿಕೊಂಡಿಲ್ಲ ಇವರೆಲ್ಲಾ ನಮಗೆ ಸ್ಪೂರ್ತಿ. ಸಿದ್ಧಾರಾಮಯ್ಯ ಅವರ ಪತ್ನಿ, ಪತಿ ಮೇಲೆ ಪ್ರೆಶರ್ ಹಾಕೋಲ್ಲ.  ಹೋಗಿ ಈ ಕೆಲಸ ಮಾಡಿಕೊಡಿ, ನಮ್ಮ ಕಡೆಯವರಿಗೆ ಇದು ಮಾಡಿಸಿ ಎಂದು ಏನೂ ಹೇಳುವುದಿಲ್ಲ. ಸಿದ್ಧರಾಮಯ್ಯ ಅವರ ತಮ್ಮ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಅದೇ ಒಬ್ಬ ಕಾರ್ಪೋರೆಟರ್ ಮಗ ಈಜಿಪ್ಟ್‌ ಯುರೋಪ್‌ನಲ್ಲಿ ಓಡುತ್ತಾರೆ ಮಾಜಿ ಕಾರ್ಪೋರೆಟರ್ ಮಗ ದುಬಾರಿ ಕಾರಿನಲ್ಲಿ ಓಡಾಡುತ್ತಾರೆ' ಎಂದು ಪ್ರಥಮ್ ಖಾಸಗಿ ಮಾಧ್ಯಮದಲ್ಲಿ ಮಾತನಾಡಿದ್ದಾರೆ.

Tap to resize

Latest Videos

undefined

ಒಳ್ಳೆ ಹುಡುಗ ಪ್ರಥಮ್ ಮದ್ವೆ ಆಗೋ ಹುಡುಗಿ ಫೋಟೋ ಲೀಕ್!

'ಎಂಗೇಜ್‌ಮೆಂಟ್ ಅದ್ಮೇಲೆ ಯಾರಿಗೂ ಊಟ ಹಾಕಿಲ್ಲ ಎನ್ನುತ್ತಾರೆ ಆದರೆ ನಾನು ವೃದ್ಧಾಶ್ರಮದಲ್ಲಿ 130 ಮಕ್ಕಳಿಗೆ ಸಿಹಿ ಊಟ ಹಾಕಿಸಿದ್ದೀವಿ ಹಾಗೂ ಚಳಿಗಾಲ ಆಗಿರುವ ಕಾರಣ ಶಾಲು ಕೊಟ್ಟಿರುವೆ. ನನ್ನ ಮದುವೆಯಾಗುವ ಹುಡುಗಿ ಮೊದಲೇ ಹೇಳಿದರೂ ಇದನ್ನು ಮಾಧ್ಯಮಗಳಿಗೆ ತಿಳಿಯಬಾರದು ತೋರ್ಪಡಿಕೆ ಆಗಬಾರದು ಎಂದು ಮನಸ್ಸಿನಿಂದ ಮಾಡಿದ್ದೀವಿ. ಅವರು ಒಬ್ಬಳೇ ಮಗಳಾಗಿರುವ ಕಾರಣ ಎಲ್ಲಿ ಬೇಕಿದ್ದರೂ ಮದುವೆ ಮಾಡಿ ಕೊಡಲಿ. ನನ್ನನ್ನು ಬೆಳಸಿರುವ ಮಾಧ್ಯಮ ಸ್ನೇಹಿತರಿಗೆ ಒಂದೊಳ್ಳೆ ಊಟ ಹಾಕಿಸಬೇಕು ಅನ್ನೋದು ನನ್ನ ಆಸೆ. ನನ್ನ ಮದುವೆ ಆಗುವ ಹುಡುಗಿ ಮಾಧ್ಯಮಗಳಿಂದ ತುಂಬಾ ದೂರ' ಎಂದು ಪ್ರಥಮ್ ಹೇಳಿದ್ದಾರೆ.  

ನನ್ನ ಹುಡ್ಗಿ ಮೊಬೈಲೇ ಬಳಸಲ್ಲ, ಮದ್ವೆ ಆದ್ಮೇಲೆ ಎಲ್ರಿಗೂ ಆಗೋತರ ನಂಗು ಮಗು ಆಗುತ್ತೆ: ಒಳ್ಳೆ ಹುಡುಗ ಪ್ರಥಮ್

'ನಂದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್ ಯಾರನ್ನೂ ಲವ್ ಮಾಡಿಲ್ಲ ಮನೆಯವರು ನೋಡಿರುವ ಹುಡುಗಿ. ನಾನು ಲವ್ ಮಾಡಬೇಕು ಅಂದ್ರೂ ಯಾರು ಲವ್ ಮಾಡ್ತಾರೆ? ನನ್ನನ್ನು ಅರ್ಥ ಮಾಡಿಕೊಂಡು ಮ್ಯಾನೇಜ್ ಮಾಡುವುದು ತುಂಬಾನೇ ಕಷ್ಟ ನನ್ನ ಆಟಿಡ್ಯೂನ್‌ ನೋಡಿಕೊಂಡು ಓಡಿ ಹೋಗುತ್ತಾರೆ. ನನಗೆ ಕ್ರಶ್ ಮತ್ತು ಲವ್ ಆಗಿಲ್ಲ ಆದರೆ ಒಳ್ಳೆ ಸ್ನೇಹಿತರಿದ್ದಾರೆ ಆ ಸ್ನೇಹ ಉಳಿಸಿಕೊಂಡಿರುವೆ. ನಾನು ಮದುವೆಯಾಗುವ ಹುಡುಗಿಗೆ ಒಂದೇ ಒಂದು ಮನವಿ ಮಾಡಿಕೊಂಡಿರುವುದು ನಿಮಗೆ ಒಳ್ಳೆ ಗಂಡನಾಗಿ ನಾನು ಇರಬೇಕು ಇರುತ್ತೀನಿ ಆದರೆ ಸಿನಿಮಾ ವಿಚಾರದಲ್ಲಿ ನೀವು ತಲೆ ಹಾಕಬಾರದು. ಡ್ರೋನ್ ಪ್ರಾಥಮ್ ಮತ್ತು ಕರ್ನಾಟಕದ ಅಲಿಯಾ ಸಿನಿಮಾ ಮುಗಿಸಿದ ಮೇಲೆ ಮತ್ತೊಂದು ಸಿನಿಮಾ ಇದೆ. ಸದ್ಯಕ್ಕೆ ಕರ್ನಾಟಕದ ಅಳಿಯಾ ಸಿನಿಮಾ ಫೈನಲ್ ಫೈಟಿಂಗ್ ಸೀನ್ ನಡೆಯುತ್ತಿದೆ ಅದಾದ ಮೇಲೆ ಡ್ರೋನ್ ಪ್ರಥಮ್ ಮಾಡಿ ಮುಗಿಸುವೆ' ಎಂದಿದ್ದಾರೆ ಪ್ರಥಮ್. 

click me!