ಶ್ರೀಲೀಲಾಗೆ ಹೋಲಿಸಿದ್ದಕ್ಕೆ ರೇಷ್ಮಾ ನಾನಯ್ಯ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಾಕ್. UI ಸಿನಿಮಾದಲ್ಲಿ ಮಿಂಚಲಿದ್ದಾರೆ ರೇಷ್ಮಾ............
ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಾಡಲ್ ರೇಷ್ಮಾ ನಾನಯ್ಯ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಜೊತೆ UI ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಚಿತ್ರದಕ್ಕೆ ಹಿಟ್ ನೋಡಿದ ರೇಷ್ಮಾ ತಮ್ಮ ಎರಡನೇ ಚಿತ್ರವನ್ನು ಸ್ಟಾರ್ ನಟನ ಜೊತೆ ಆಯ್ಕೆ ಮಾಡಿಕೊಂಡಿದ್ದು ನಿಜವಾದ ಬೆಳವಣಿಗೆ. ಅಲ್ಲದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಕೆಡಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿರುವ ರೇಷ್ಮಾ ನಾನಯ್ಯರನ್ನು ಇತ್ತೀಚಿಗೆ ನಟಿ ಶ್ರೀಲೀಲಾ ಜೊತೆ ಹೋಲಿಸುತ್ತಿದ್ದಾರೆ.
ಯಾಕೆ ಹೋಲಿಕೆ?
undefined
ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ಮಾಡಿ ಸೀದಾ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿರುವ ಶ್ರೀಲೀಲಾಗೂ, ಕನ್ನಡದಲ್ಲಿ ಉಳಿದುಕೊಂಡು ಇನ್ನೂ ಕನ್ನಡದಲ್ಲಿ ಸಿನಿಮಾ ಮಾಡುತ್ತಿರುವ ರೇಷ್ಮಾ ನಾನಯ್ಯಗೂ ಎಲ್ಲಿಂಗ ಹೋಲಿಕೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಇವರಿಬ್ಬರನ್ನು ಹೋಲಿಸಿಕೊಂಡು ಜನರು ಚರ್ಚೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಷ್ಠಿತ ಮಾಧ್ಯಮವೊಂದು ಪ್ರಶ್ನೆ ಮಾಡಿದಾಗ ರೇಷ್ಮಾ ಕೊಟ್ಟ ಉತ್ತರ ವೈರಲ್.
ಕಳೆದ ವರ್ಷ ಹಲವರನ್ನು ಕಳೆದುಕೊಂಡೆ ಅದಿಕ್ಕೆ 30ರಲ್ಲಿ ನನ್ನ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವೆ: ಹಿತಾ ಚಂದ್ರಶೇಖರ್
'ನನ್ನ ಸಿನಿಮಾ ಜರ್ನಿ ಹೇಗಿದೆ ಎಂದು ನನಗೆ ಗೊತ್ತಿಲ್ಲ. ಡ್ಯಾನ್ಸಿಂಗ್ ನನ್ನ ಶಕ್ತಿ, ಆದರೂ ನನ್ನ ನಟನೆಯಿಂದ ಜನರೊಟ್ಟಿಗೆ ಕನೆಕ್ಟ್ ಆಗಬೇಕು. ಒಳ್ಳೆ ಕಲಾವಿದೆ ಒಳ್ಳೆ ಆರ್ಟಿಸ್ಟ್ ಆಗಿ ಗಮನವೆಲ್ಲಾ ಕೆಲಸದ ಮೇಲೆ ಇದೆ ಎಂದು ಗುರುತಿಸಿಕೊಳ್ಳಬೇಕು. ಏನೇ ಇರಲಿ ಜನರು ನನ್ನ ಜೊತೆ ನಟನೆಯಿಂದ ಡೀಪರ್ ಲೆವೆಲ್‌ನಲ್ಲಿ ಕನೆಕ್ಟ್ ಆಗಬೇಕು' ಎಂದು ರೇಷ್ಮಾ ಉತ್ತರಿಸಿದ್ದಾರೆ. ಇಲ್ಲಿ ಜನರ ಗಮನ ಸೆಳೆದಿದ್ದು ರೇಷ್ಮಾ ಉತ್ತರ ಕೊಟ್ಟ ಶೈಲಿ, ಯಾವುದೇ ನೆಗೆಟಿವ್ ಕಾಮೆಂಟ್ ಕೊಡದೆ ತಮ್ಮ ಪರ್ಫಾರ್ಮೆನ್ಸ್ ಬಗ್ಗೆ ಮಾತ್ರ ಮಾತನಾಡಿದ್ದಾರೆ.
ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್
20ನೇ ವಯಸ್ಸಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ರೇಷ್ಮಾ ಇದುವರೆಗೂ ಯಾವುದೇ ಕಾಂಟ್ರವರ್ಸಿಗಳನ್ನು ಕ್ರಿಯೇಟ್ ಮಾಡಿಕೊಂಡಿಲ್ಲ. ಸಖತ್ ಸಿಂಪಲ್ ಆಂಡ್ ಹಂಬಲ್ ಆಗಿರುವ ರೇಷ್ಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಉಳಿಯಲಿ ಎಂದು ಕನ್ನಡ ಸಿನಿ ರಸಿಕರು ವಿಶ್ ಮಾಡುತ್ತಾರೆ.
ದೊಗಳೆ ಶರ್ಟ್ ಮೇಲೆ ಲಂಗಾ ಹಾಕಿಕೊಂಡ ಅನುಪಮಾ ಗೌಡ; ರೆಡಿಯಾಗುತ್ತಿರುವ ಫೋಟೋ ಲೀಕ್