ನಂಗೆ ಅಂತ ಏನೂ ಮಾಡ್ಕೊಂಡಿಲ್ಲ, ಹೆಂಡ್ತಿ ಕೆಲಸಕ್ಕೆ ಹೋಗ್ತಾಳೆ: ಲೂಸ್ ಮಾದ ಯೋಗಿ

Published : Jun 16, 2023, 01:06 PM IST
ನಂಗೆ ಅಂತ ಏನೂ ಮಾಡ್ಕೊಂಡಿಲ್ಲ, ಹೆಂಡ್ತಿ ಕೆಲಸಕ್ಕೆ ಹೋಗ್ತಾಳೆ: ಲೂಸ್ ಮಾದ ಯೋಗಿ

ಸಾರಾಂಶ

ಕಾಂಟ್ರವರ್ಸಿಗಳಿಗೆ ಡೇಂಟ್ ಕೇರ್. ಫ್ಯಾಮಿಲಿ ಸಪೋರ್ಟ್ ಮಾಡುವೆ. ನನಗೆ ಅಂತ ಕಾರು ಬಿಟ್ಟರ ಏನೂ ಮಾಡಿಕೊಂಡಿಲ್ಲ...

ಕನ್ನಡ ಚಿತ್ರರಂಗಕ್ಕೆ ನಂದ ಲವ್ಸ್‌ ನಂದಿತಾ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಪರ್ಸನಲ್ ಲೈಫ್‌ನ ತುಂಬಾನೇ ಪ್ರೈವೇಟ್ ಆಗಿ ಇಟ್ಟಿಕೊಂಡಿರುವ ಯೋಗ ಕಾಂಟ್ರವರ್ಸಿ, ಸಿನಿಮಾ, ಫ್ಯಾಮಿಲಿ ಬಗ್ಗೆ ಹಂಚಿಕೊಂಡಿದ್ದಾರೆ. 

'32ನೇ ವಯಸ್ಸಿಗೆ ನಾನು 35 ಸಿನಿಮಾ ಮಾಡಿರುವೆ ಚಿಕ್ಕ ವಯಸ್ಸಿಗೆ ಅತಿ ಹೆಚ್ಚು ಸಿನಿಮಾ ಮಾಡಿರುವೆ. ಒಂದೊಂದು ಸಲ ಒಂದು ವರ್ಷದಲ್ಲಿ 5 ಸಿನಿಮಾ ಮಾಡಿರುವೆ. ಕಳೆದ 5-6 ವರ್ಷದಲ್ಲಿ 8 ರಿಂದ 9 ಸಿನಿಮಾ ಮಾಡಿರುವೆ. ನನ್ನ ಮೊದಲ ಚಿತ್ರ ನಂದ ಲವ್ಸ್‌ ನಂದಿತಾಗೆ 5 ಲಕ್ಷ ಸಂಭಾವನೆ ಪಡೆದಿರುವೆ ಅದಾದ ಮೇಲೆ ಅಂಬಾರಿ ಚಿತ್ರಕ್ಕೆ 25- 30 ಲಕ್ಷ ಹಾಗೆ ಹೆಚ್ಚಾಗಿದೆ. ಇವತ್ತಿನವರೆಗೂ ಏನೇ ಸಂಪಾದನೆ ಮಾಡಿದರೂ ಅದನ್ನು ತಂದೆ ಕೈಗೆ ಕೊಟ್ಟಿರುವೆ ನನಗೆ ಅಂತ ಒಂದು ಕಾರು ಬಿಟ್ಟರೆ ಏನೂ ಮಾಡಿಕೊಂಡಿಲ್ಲ. ಮನೆಗೆ ತುಂಬಾ ಸಪೋರ್ಟಿವ್ ಆಗಿರುವೆ ಈಗ ಬೇರೆ ಕಡೆ ಬಂಡವಾಳ ಹಾಕುತ್ತಿರುವೆ'  ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದರು.  

ಲೂಸ್‌ಮಾದ ಯೋಗಿ 'ನಾನು ಅದು ಮತ್ತು ಸರೋಜ' ಟ್ರೇಲರ್‌ ಬಿಡುಗಡೆ

'ಎಂದೂ ನನಗೆ ಇಂಡಸ್ಟ್ರಿ ಬೇಡ ಅನಿಸಿಲ್ಲ ಆದರೆ ಕೆಲವೊಮ್ಮೆ ಬೇಸರವಾಗುತ್ತಿತ್ತು. ನನ್ನ ಮೇಲೆ ನನಗೆ ಬೇಸರವಾಗುತ್ತದೆ ಹೊರತು ಬೇರೆ ಅವರ ಮೇಲೆ ಬೇಸರ ಅನಿಸಿಲ್ಲ. ನಾನು ಮಾಡಿದ್ದು ಸರಿ ನಾನು ಮಾಡಿದ್ದು ತಪ್ಪು ನನಗೆ ಮಾತ್ರ ಗೊತ್ತು ಬೇರೆ ಅವರು ಬಂದು ನಮ್ಮ ಬಗ್ಗೆ ಕಾಮೆಂಟ್ ಮಾಡುವಾಗ ತಲೆಗೆ ತೆಗೆದುಕೊಳ್ಳಬಾರದು. ನಾವು ಸರಿ ಮಾಡುತ್ತಿರುವಾಗ ನಮ್ಮ ಬೆನ್ನು ನಾವು ತಟ್ಟಿಕೊಳ್ಳಬೇಕು. ಜೀವನದ ಸತ್ಯ ಅರಿವು ಮಾಡಿಕೊಂಡರೆ ಖಂಡಿತಾ ಯಾರ ಮೇಲೂ ಬೇಸರ ಮಾಡಿಕೊಳ್ಳುವುದಿಲ್ಲ. ಇಂಡಸ್ಟ್ರಿ ಬಿಟ್ಟು ಹೋಗುವ ಮನಸ್ಸುಇಲ್ಲ. ಮನುಷ್ಯ ನಾನು ಕೆಲವೊಮ್ಮೆ ತಪ್ಪು ಮಾಡಿದ್ದೀನಿ ಮಾಡಬಾರದು ಅನಿಸಿತ್ತು ಆದರೆ ಜನರು ಹೇಗೆ ಮಾತನಾಡುತ್ತಾರೆ ಅಂದ್ರೆ ಬಿಡೋ ಅವನು ಪ್ರೊಡ್ಯೂಸರ್ ಮಗ ಅವರಪ್ಪನೇ ಸಿನಿಮಾ ಮಾಡ್ತಾರೆ ನಮ್ಮ ಮನೆಯಲ್ಲಿ ಏನಾಗುತ್ತಿದೆ ಎಂದು ನಮಗೆ ಮಾತ್ರ ಗೊತ್ತಿದೆ. ನನ್ನ ಕುಟುಂಬಗ್ಕೋರ ಮಾಡಿದ ಅನ್ನೋದು ಬೇಜಾರಿಂದ ಖುಷಿಯಾಗುತ್ತದೆ' ಎಂದು ಯೋಗಿ ಮಾತನಾಡಿದ್ದಾರೆ. 

'ಬಿಗ್ ಬಾಸ್‌ಗೆ ಹೋಗಿದ್ದು ನಾನು ಗೆಸ್ಟ್‌ ಆಗಿ ಸ್ಪರ್ಧಿಯಾಗಿ ಅಲ್ಲ ಅದಾದ ಮೇಲೆ ಅವರೇ 15 ದಿನ ಅಲ್ಲೇ ಇರಿ ಎಂದು ಹೇಳಿದ್ದರು. ಬಿಗ್ ಬಾಸ್‌ನಲ್ಲಿದ್ದಾಗ ನನ್ನ ಕೈಯಲ್ಲಿ 15 ಸಿನಿಮಾಗಳಿತ್ತು ಅಲ್ಲಿ ಹೋಗ ಬೇಕು ದುಡಿಯಬೇಕು ಅನ್ನೋದು ಏನೂ ಇರಲಿಲ್ಲ. ಪ್ರತಿಯೊಂದು ರಿಯಾಲಿಟಿ ಶೋಗಳು ಜನರಿಗೆ ಮನೋರಂಜನೆ ನೀಡಲು ಒಪ್ಪಿಕೊಂಡಿರುವೆ ದೊಡ್ಡ ಸ್ಕ್ರೀನ್‌ಗಿಂತ ಚಿಕ್ಕ ಸ್ಕ್ರೀನ್‌ನಲ್ಲಿ ನೋಡಿದಾಗ ಜನರಿಗೆ ಬೇಗ ಹತ್ತಿರವಾಗುತ್ತೀವಿ. ಟಿವಿ ಇರಬೇಕು ಸಿನಿಮಾ ಮಾಡಬೇಕು ಹಾಗೆ ಹೀಗೆ ಅಂತಿಲ್ಲ ಎಲ್ಲಾ ಕೆಲಸ ಮಾಡುವೆ' ಎಂದ  ಯೋಗೇಶ್. 

ಲೂಸ್‌ ಮಾದ ಯೋಗಿ ಪುತ್ರಿ ವಿಡಿಯೋ ವೈರಲ್; ಟ್ವಿಂಕಲ್ ಹಾಡು ಕೇಳಿದ್ದೀರಾ?

'ಮಗು ಆದ್ಮೇಲೆ ನನ್ನ ಹೆಂಡತಿ ಕೆಲಸ ಬಿಟ್ಟಿದ್ದರು ಈಗ ಕೆಲಸ ಮತ್ತೆ ಶುರು ಮಾಡಿದ್ದಾರೆ. ಮನೆ ನಡೆಸುವುದಕ್ಕೆ ನನ್ನ ಕೊಡುವೆ ಇರಬೇಕು ಅನ್ನೋ ಅಸೆ ಆಕೆಗೆ ಇದೆ ಅದಿಕ್ಕೆ ಕೆಲಸ ಮಾಡುತ್ತಾಳೆ. ನನ್ನ ಖರ್ಚಿಗೆ ನಾನು ಮಾಡಿಕೊಳ್ಳಬೇಕು ಅನ್ನೋದು ಅವಳ ಮಾತು' ಎಂದು ಹೇಳುವ ಮೂಲಕ ಪತ್ನಿ ಬಗ್ಗೆ ಮಾತನಾಡಿದ್ದಾರೆ.  

'ಕಾಂಟ್ರವರ್ಸಿ ಬಂದಾಗ ನನಗೆ ಬೇಸರ ಆಗಲ್ಲ ಸೆಲೆಬ್ರಿಟಿ ಅಂದ್ಮೇಲೆ ನನ್ನ ಬೆನ್ನಲೆ ಇರುತ್ತದೆ ಯಾವುದು ತೆಲೆಗೆ ಹಾಕಿಕೊಳ್ಳಬಾರದು. ನಿಜ ಏನೆಂದು ನನಗೆ ಗೊತ್ತು.. ಮತ್ತೊಬ್ಬರ ಬಗ್ಗೆ ನಾನು ಸರಿ ಇಲ್ಲ ಹಾಗೆ ಹೀಗೆ ಎನ್ನಬಾರದು ನಿಮ್ಮ ಬಗ್ಗೆ ಗೊತ್ತಿಲ್ಲ ಅಂದ್ರೆ ಏನು ಮಾತನಾಡಲಿ? ಸುಮ್ಮನೆ ಜನರು ನನ್ನ ಬಗ್ಗೆ ಮಾತನಾಡುತ್ತಾರೆ. ನನ್ನನ್ನು ನೀವು ಬೈಯುತ್ತಿದ್ದೀರಾ ಅಂದ್ಮೇಲೆ ನೀವು ನನ್ನನ್ನು ಎಲ್ಲೋ ನೋಡರಬೇಕು ಯಾವುದೋ ವಿಚಾರದಲ್ಲಿ ಸಿಲುಕಿಕೊಂಡಿರಬೇಕು ಯಾವುದು ಅಗಿಲ್ಲ ಅಂದ್ಮೇಲೆ ಯಾಕೆ ಮಾತನಾಡುತ್ತಾರೆ ಗೊತ್ತಿಲ್ಲ' ಎಂದು ಹೇಳಿದ್ದಾರೆ ಮಾದ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?