ಗೆಳೆಯನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ಕಾರ್ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಭಾವುಕರಾದ ಸ್ನೇಹಿತ

Published : Jun 16, 2023, 11:06 AM IST
ಗೆಳೆಯನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ಕಾರ್ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಭಾವುಕರಾದ ಸ್ನೇಹಿತ

ಸಾರಾಂಶ

ಗೆಳೆಯನ ಹುಟ್ಟುಹಬ್ಬಕ್ಕೆ ನಟ ಧ್ರುವ ಸರ್ಜಾ 52 ಲಕ್ಷ ಮೌಲ್ಯದ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ಉಡುಗೊರೆಗೆ ಸ್ನೇಹಿತ ಭಾವುಕರಾಗಿದ್ದಾರೆ. 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳ ಜೊತೆಗೆ ಆಗಾಗ ಮಾನವೀಯ ಕೆಲಸಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ. ಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡುತ್ತಾರೆ. ಗೆಳೆತನಕ್ಕೆ ಹೆಚ್ಚು ಗೌರವ ನೀಡುವ ಧ್ರುವ ಸರ್ಜಾ ತನ್ನ ಸುತ್ತ ಇರುವ ಸ್ನೇಹಿತರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇದೀಗ ತನ್ನ ಆಪ್ತ ಗೆಳೆಯನಿಗೆ ಧ್ರುವ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ದುಬಾರಿ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಧ್ರುವ ಸರ್ಜಾ, ತಮ್ಮ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಅಶ್ವಿನ್ ಅವರ ಹುಟ್ಟುಹಬ್ಬಕ್ಕೆ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೌದು 52 ಲಕ್ಷ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಕರೆದುಕೊಂಡು ಹೋಗಿ ಆಶ್ಚರ್ಯವಾಗುವಂತೆ ಗಿಫ್ಟ್ ಆಗಿ ಕಾರನ್ನು ನೀಡಿದ್ದಾರೆ ಧ್ರುವ ಸರ್ಜಾ. ತಮ್ಮ ಗೆಳೆಯನಿಗೆ ಧ್ರುವ ಸರ್ಪ್ರೈಸ್ ಉಡುಗೊರೆ ನೀಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಧ್ರುವ ಸರ್ಜಾ ಮಗಳ ಫೋಟೋ ರಿವೀಲ್; ನಾವೇ ಹೆಸರಿಡುತ್ತೀವಿ ಎಂದ ಅಭಿಮಾನಿಗಳು

ಧ್ರುವ ಆತ್ಮೀಯ ಗೆಳೆಯ, ಮ್ಯಾನೇಜರ್ ಆಗಿರುವ ಅಶ್ವಿನ್ ಸದಾ ಧ್ರುವ ಜೊತೆಯೆ ಇರುತ್ತಾರೆ. ಧ್ರುವ ಸರ್ಜಾ ಎಲ್ಲಿಯೇ ಹೋಗಲಿ, ಯಾವುದೇ ಶೂಟಿಂಗ್, ಕಾರ್ಯಕ್ರಮ ಯಾವುದೇ ಆಗಿದ್ದರು ಜೊತೆಯಲ್ಲಿ ಅಶ್ವಿನ್ ಇದ್ದೇ ಇರುತ್ತಾರೆ. ಅಶ್ವಿನ್ ಆವರ ತಂದೆ-ತಂದೆ ಅವರ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ನಿಧನರಾಗಿದ್ದಾರೆ. ಕಾರಿನ ಜೊತೆಗೆ ಅಶ್ವಿನ್ ಅವರಿಗೆ ಮರೆಯಲಾದ ಫೋಟೋವನ್ನು ಗಿಫ್ಟ್ ಆಗಿ ನೀಡಿದ್ದಾರೆ.  ಅಶ್ವಿನ್​ರ ಅಪ್ಪ-ಅಮ್ಮನ ಹಳೆಯ ಫೋಟೊವನ್ನು ಹುಡುಕಿ ತೆಗೆಸಿ ಅದನ್ನು ಕಾರಿನ ಒಳಗೆ ಇರಿಸಿದ್ದಾರೆ. ಗೆಳೆಯ ಧ್ರುವ ಕೊಟ್ಟ ಈ ಉಡುಗೊರೆ ಕಂಡು ಅಶ್ವಿನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಗೆಳೆಯ ಹುಟ್ಟುಹಬ್ಬ ಆಚರಿಸಿದರು.

 

7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಧ್ರುವ ಸರ್ಜಾ: ಹೆಸರೇನು?

ಧ್ರುವ ಸರ್ಜಾ ಸಿನಿಮಾ ವಿಚಾರಕ್ಕೆ ಬರೋದಾದರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಧ್ರುವ ನಟಿಸುತ್ತಿದ್ದಾರೆ. ಒಂದು ಎ ಪಿ ಅರ್ಜುನ್ ನಿರ್ದೇಶಿಸಿರೋ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶೀಘ್ರದಲ್ಲಿಯೇ ಸಿನಿಮಾದ ಪ್ರಚಾರ ಆರಂಭ ಆಗಲಿದೆ. ಇನ್ನೊಂದು ಕಡೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ' ಶೂಟಿಂಗ್ ನಡೆಯುತ್ತಿದೆ. ಕೆವಿಎನ್ ಪ್ರೊಡಕ್ಷನ್ ದುಬಾರಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಸಂಜಯ್ ದತ್ ಹಾಗೂ ಶಿಲ್ಪ ಶೆಟ್ಟಿ ನಟಿಸುತ್ತಿದ್ದಾರೆ. ಈಗಾಗಲೇ ಶಿಲ್ಪಾ ಶೆಟ್ಟಿ ಲುಕ್ ರಿವೀಲ್ ಆಗಿದ್ದು ವೈರಲ್ ಆಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 Winner: 6 ತಿಂಗಳ ಹಿಂದೆ ಕಾಸಿಲ್ಲ- ಗಿಲ್ಲಿ ನಟನಿಗೆ ಈಗ ಹಣದ ಹೊಳೆ; ಕಿಚ್ಚ ಸುದೀಪ್‌ ಕೊಟ್ಟಿದ್ದೆಷ್ಟು?
ಭಾರತದ Bigg Boss ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ನಟ ಕಿಚ್ಚ ಸುದೀಪ್​- ಏನಿದು ರೆಕಾರ್ಡ್​?