ಘಟನೆಯಿಂದ ಹೊರ ಬರಲು ಔಷಧಿ ತೆಗೆದುಕೊಂಡ ಕಿರಿಕ್ ಕೀರ್ತಿ;ನಾನು 100% ಗ್ರೇಟ್‌ ಅಲ್ಲ ಅಂದಿದ್ಯಾಕೆ?

Published : Mar 18, 2023, 04:49 PM IST
ಘಟನೆಯಿಂದ ಹೊರ ಬರಲು ಔಷಧಿ ತೆಗೆದುಕೊಂಡ ಕಿರಿಕ್ ಕೀರ್ತಿ;ನಾನು 100% ಗ್ರೇಟ್‌ ಅಲ್ಲ ಅಂದಿದ್ಯಾಕೆ?

ಸಾರಾಂಶ

ಜೀವನದಲ್ಲಿ ಎದುರಿಸುತ್ತಿರುವ ಕಹಿ ಘಟನೆ ಬಗ್ಗೆ ಮೌನ ಮುರಿದ ಕಿರಿಕ್ ಕೀರ್ತಿ. ನನ್ನ ಮಗನೇ ಪ್ರಪಂಚ, ಕೈ ತುತ್ತು ಕೊಡುವುದು ಮಿಸ್ ಮಾಡಿಕೊಳ್ಳುವೆ ಎಂದಿದ್ದಾರೆ....

ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಕಿರೀಕ್ ಕೀರ್ತಿ ವೈವಾಹಿಕ ಜೀವನದಲ್ಲಿ ಆದ ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ದಿನಕ್ಕೊಂದು ಸುದ್ದಿ ಕ್ರಿಯೇಟ್ ಮಾಡುತ್ತಿರುವ ನೆಟ್ಟಿಗರಿಗೆ ಕ್ಲಾರಿಟಿ ಕೊಟ್ಟಿದ್ದಾರೆ.

'ಸೋಷಿಯಲ್ ಲೈಫ್‌ನಲ್ಲಿ ಇರುವವರಿಗೆ ಜೀವನದ ಬಗ್ಗೆ ಜವಾಬ್ದಾರಿ ಹೆಚ್ಚಿರುತ್ತದೆ. ನಾವು ಒಂದು ರೀತಿ ಗಾಜಿನ ಮನೆಯಲ್ಲಿ ವಾಸ ಮಾಡುವುದು. ನಾವೇ ಕಲ್ಲು ತಾಗಿಸಿಕೊಂಡರೂ ಅಥವಾ ಹೊರಗಿನಿಂದ ಮತ್ತೊಬ್ಬರು ಕಲ್ಲು ಹೊಡೆದರೆ ನಮ್ಮ ಮನೆಯೇ ಪುಡಿ ಆಗುವುದು. ಮನುಷ್ಯ ಒಂದು ಸೆಲೆಬ್ರಿಟಿ ಆಗಿರಬೇಕು ಇಲ್ಲ ಸಾಮಾನ್ಯರಂತೆ ಇರಬೇಕು ಈ ನಡುವೆ ಇರುವ ಪಾಪ್ಯೂಲಾರಿಟಿಯಲ್ಲಿ ಇರಬಾರದು. ಆ ಸೆಂಟರ್‌ನಲ್ಲಿ ಸಿಲುಕಿಕೊಳ್ಳುವುದು ಗ್ಲಾಸ್ ಹೌಸ್. ಈಗ ಯಶ್ ಸರ್ ಸುದೀಪ್ ಸರ್ ಅವರು ಸೆಲೆಬ್ರಿಟಿಗಳು ಅವರು ಬಂದಾಗ ಜನರು ಸಂಭ್ರಮಿಸಿದ್ದಾರೆ ಅವರದ್ದೇ ಕೋಟೆ ಕಟ್ಟು ಕೊಂಡಿರುತ್ತಾರೆ. ಈ ಪಾಪ್ಯೂಲರ್ ಫೇಸ್‌ಗಳು ಅಂದ್ರೆ ಜನರಿಗೆ ಪರಿಚಯ ಇರುವವರು ಏನೋ ಸಾಧನೆ ಮಾಡಿದ್ದೀವಿ ಅಂತಲ್ಲ ಆದರೆ ಜನರು ನಮ್ಮನ್ನು ನೋಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ 5 ನಿಮಿಷ ನೋಡುವ ಕೀರ್ತಿಯನ್ನು ನಿಜವಾದ ಕೀರ್ತಿ ಎಂದು ಜನರು ನಂಬಿಕೊಂಡಿದ್ದಾರೆ. ನನಗೂ ಒಂದು ಬದುಕು ಇದೆ ನನಗೂ ಒಂದು ಜೀವನ ಇದೆ ಅದನ್ನು ಯಾರು ನಂಬುವುದಿಲ್ಲ' ಎಂದು ಕೀರ್ತಿ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಆ ನಾಲ್ಕು ವ್ಯಕ್ತಿಗಳಿಗೆ ನಾನು ಹೇಳುತ್ತಿರುವುದು ಅರ್ಥವಾಗುತ್ತದೆ: ವದಂತಿಗಳಿಗೆ ಬ್ರೇಕ್ ಹಾಕಿದ ಕಿರಿಕ್ ಕೀರ್ತಿ

'ನಿನಗೆ ಜವಾಬ್ದಾರಿ ಇಲ್ಲ ಎಂದು ತಾಯಿನೋ ತಂಗಿನೋ ಬೈಯುತ್ತಿದ್ದಾರೆ ಅದನ್ನು ಮೊದಲು ನೋಡಿಕೊಳ್ಳಿ ನೀವು ಸುಮ್ಮನೆ ಕುಳಿತುಕೊಂಡು ನನ್ನ ಬಗ್ಗೆ ಕಾಮೆಂಟ್ ಮಾಡಬೇಡಿ. ನಿಮ್ಮ ತಟ್ಟಿಯಲ್ಲಿ ಹೆಗಣ ಇದೆ ನನ್ನ ತಟ್ಟೆಯಲ್ಲಿ ನೊಣ ಹುಡುಕುವ ಕೆಲಸ ಮಾಡಬೇಡಿ. ನಿಮ್ಮ ಲೈಫ್‌ನ ಸರಿ ಮಾಡಿ ಎಂದು ಜನರ ಮುಂದೆ ಬಂದಿಲ್ಲ. ತಪ್ಪು ನಿರ್ಧಾರ ಮಾಡಿದ್ದು ನಿಜ ಆದರೆ ನಿಮ್ಮ ಮುಂದೆ ಬದುಕಿರುವೆ. ನಾವು ದೊಡ್ಡ ಕನಸು ಕಟ್ಟಿಕೊಂಡಿರುವತ್ತೀವಿ ಯಾವುದರಲ್ಲಿ ಬಂದು ಹೊಡೆದರೂ ಕುಸಿಯುವುದಿಲ್ಲ ಅಷ್ಟು ಗಟ್ಟಿಯಾಗಿರುತ್ತದೆ. ಕುಗ್ಗಿರುವ ವ್ಯಕ್ತಿಯನ್ನು ಎಬ್ಬಿಸಲು ಆಗದಿದ್ದರೂ ಪರ್ವಾಗಿಲ್ಲ ಆದರೆ ಮತ್ತೆ ಹೂತು ಹಾಕುವ ಕೆಲಸ ಮಾಡಬೇಡಿ. ಆ ಕ್ಷಣದ ನಿರ್ಧಾರ ಅಷ್ಟೆ, ಆ ಸಮಯಲ್ಲಿ ನನ್ನ ಕುಟುಂಬ ನನ್ನ ಗೆಳೆಯರು ನನಗೆ ಶಕ್ತಿ ತುಂಬಿದ್ದರು. ನನ್ನ ಊರು ಶಿವಮೊಗ್ಗದಲ್ಲಿ ಇರುವೆ..ಇದರಿಂದ ಹೊರ ಬರಲು ಒಂದಿಷ್ಟು ಔಷಧಿಗಳನ್ನು ತೆಗೆದುಕೊಂಡಿರುವೆ. ಯಾರ ಜೊತೆನೂ ಮಾತನಾಡೇಕು ಅನಿಸಲಿಲ್ಲ' ಎಂದು ಕೀರ್ತಿ ಹೇಳಿದ್ದಾರೆ.

ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಇದೆ ನನ್ನ ತಟ್ಟೆಯಲ್ಲಿ ನೊಣ ಹುಡುಕಬೇಡಿ; ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋ ವೈರಲ್

'ನನ್ನ ಮಗನನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ ಏಕೆಂದರೆ ಅವನು ನನ್ನ ಪ್ರಪಂಚ. ಕಣ್ಣು ಮುಚ್ಚಿದರೂ ಕಣ್ಣು ತೆಗೆದರೂ  ಎದುರು ಇರುತ್ತಾನೆ. ಬೆಳಗ್ಗೆ ಎದ್ದ ತಕ್ಷಣ ಪಪ್ಪಿ ಕೊಡುವುದು ಕೈ ತುತ್ತು ಎಲ್ಲವೂ ಮಿಸ್ ಆಗುತ್ತದೆ. ಜೀವನದ ಜರ್ನಿ ಇದು ಇರಲಿ ಎಲ್ಲವೂ ಎದುರಿಸುವೆ. ಪರಿಸ್ಥಿತಿ ಯಾವತ್ತು ಹೇಗಿರುತ್ತೆ ಗೊತ್ತಿಲ್ಲ ಕಳೆದ ವರ್ಷ ಈ ರೀತಿ ಇರಲಿಲ್ಲ ಮುಂದಿನ ವರ್ಷ ಈ ಸಮಯ ಹೇಗಿರುತ್ತೆ ಗೊತ್ತಿಲ್ಲ ಹೀಗಾಗಿ ಮುಂದೆ ಹೇಗೆ ಏನೂ ಗೊತ್ತಿಲ್ಲ. ವಿಷ ಅನ್ನೋದು ಮನುಷ್ಯನ ಎದೆಯಲ್ಲಿ ಎಲ್ಲಿ ತನಕ ಇರುತ್ತದೆ ಅಲ್ಲಿ ತನಕ ಯಾವ ಸಂಬಂಧವೂ ಸರಿ ಹೋಗಲ್ಲ ವಿಷ ಇಳಿದರೆ ಸಂಬಂಧ ಗಟ್ಟಿಯಾಗುತ್ತದೆ. ಮನುಷ್ಯನಿಗೆ ಯಾವ ಸಾಕ್ಷಿ ಬೇಕಿಲ್ಲ ಆತ್ಮ ಸಾಕ್ಷಿ ಒಂದೇ ಸಾಕು ಅದು ನನ್ನಲ್ಲಿದೆ. ನಾನು ಸಾಚ ನಾನು 100% ನಾನು ಗ್ರೇಟ್‌ ಅಲ್ಲ ಆದರೆ ತಪ್ಪಿನ ಪ್ರಮಾಣ ಅನ್ಯಾಯದ ಪ್ರಮಾಣ ನೋವಿನ ಪ್ರಮಾಣ ಬೇಸರದ ಪ್ರಮಾಣ ಮಾಡಿದವರಿಗೆ ಗೊತ್ತಿರುತ್ತದೆ ಅದನ್ನು ಎದುರಿಸಿದವರಿಗೆ ಗೊತ್ತಿರುತ್ತದೆ' ಎಂದಿದ್ದಾರೆ ಕೀರ್ತಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ