ಗಂಡನ ಜತೆ ಖುಷಿಯಾಗಿಲ್ಲ ಅಂದ್ರೆ ತಂದೆ-ತಾಯಿ ಮಗಳಿಗೆ ಸಪೋರ್ಟ್‌ ಮಾಡಿ; ಡಿವೋರ್ಸ್‌ ಬಗ್ಗೆ ಮೌನ ಮುರಿದ ಅನು ಪ್ರಭಾಕರ್

By Vaishnavi ChandrashekarFirst Published Mar 18, 2023, 3:16 PM IST
Highlights

ಇಂಟರ್‌ನೆಟ್‌ನಲ್ಲಿ ನನ್ನ ಬಗ್ಗೆ ಮೊದಲು ಸಿಗುವುದು ಡಿವೋರ್ಸ್‌ ವಿಚಾರ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮುಖ್ಯ. ಮೊದಲ ಮದುವೆ ಬಗ್ಗೆ ಅನು ಪ್ರಭಾಕರ್ ಮಾತು....
 

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ಈಗ ಬೆಳ್ಳಿ ತೆರೆ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಅನು ಪ್ರಭಾಕರ್ ಮೊದಲ ಮದುವೆ ಬಗ್ಗೆ ಹಲವು ವರ್ಷಗಳ ನಂತರ ಮಾತನಾಡಿದ್ದಾರೆ. ಅಭಿನಯ ಶಾರದೆ ಜಯಂತಿ ಮಗನನ್ನು ವರಿಸಿದ್ದ ಅನು, ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

'2001- 2002ರಲ್ಲಿ ನನ್ನ ವೃತ್ತಿ ಜೀವನ (Career) ಪೀಕ್‌ನಲ್ಲಿದ್ದಾಗ ನಾನು ಮದುವೆ ಮಾಡಿಕೊಂಡೆ. ಆ ಸಮಯದ ಬಗ್ಗೆ ಮಾತನಾಡಬೇಕಂದ್ರೆ ನಾನು ಹೇಳಬೇಕಾಗಿರುವುದು ಜಯಂತಿ ಅಮ್ಮನ ಬಗ್ಗೆ. ಅವರ ಮನೆ ಸೊಸೆಯಾಗಿ, ಅವರೊಟ್ಟಿಗೆ ಒಳ್ಳೆ ಸಂಬಂಧವನ್ನು ಬೆಳೆಸಿಕೊಂಡೆ. ಬಹಳ ಸಂದರ್ಶನದಲ್ಲಿ ಹೇಳಿದಂತೆ, ಹೆಣ್ಣಾಗಿ, ಒಂದು ನಟಿಯಾಗಿ ಜಯಂತಿ ಅಮ್ಮ ಅವರಿಂದ ತುಂಬಾ ವಿಚಾರಗಳನ್ನು ಕಲಿತಿರುವೆ. ಅವರು ಅನೇಕ ಘಟನೆಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. 10 ರಿಂದ 12 ವರ್ಷಗಳ ಕಾಲ ಅವರ ಜೊತೆಗಿದ್ದೆ. ಅದಾದ ಮೇಲೆ ಎಲ್ಲರಿಗೂ ಗೊತ್ತಿದೆ ಜೀವನ ಬೇರೆ ತಿರುವು ಪಡೆಯಿತು. ಜೀವನ ಹೀಗೆ ಆಗುತ್ತದೆ ಎಂದು ನಾವು ಯಾರೂ ಅಂದು ಕೊಂಡಿರುವುದಿಲ್ಲ,' ಎಂದು ಅನು ಪ್ರಭಾಕರ್‌ ಖಾಸಗಿ ಯುಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಮೊದಲ ತೆಗುಲು ಚಿತ್ರದಲ್ಲಿ ನಟಿಸಿ ಡಬ್ಬಿಂಗ್ ಮಾಡಿದ ಅನು ಪ್ರಭಾಕರ್!

'ನಾನು ವಾಪನ್‌ ನನ್ನ ತಾಯಿ ಮನೆಗೆ ಬಂದೆ. ನನ್ನ ಡಿವೋರ್ಸ್‌ ವಿಚಾರ ಇಂಟರ್‌ನೆಟ್‌ನಲ್ಲಿ ಸಿಗುತ್ತೆ. ನನ್ನ ಬಗ್ಗೆ ಹುಡುಕಿದರೆ ಬರುವ ಮೊದಲ ವಿಚಾರವೇ ನನ್ನ ಡಿವೋರ್ಸ್‌. ನೆಗೆಟಿವ್‌ ಕಮೆಂಟ್ಸ್ ನಮ್ಮ ಜೀವನದ ಒಂದು ಭಾಗ. ಅದನ್ನು ಸ್ವೀಕರಿಸಿ, ಮುಂದೆ ಸಾಗಿಸಬೇಕು. ಮದುವೆ ಆದ್ಮೇಲೆ ನಾನು ಕೆಲಸ ನಿಲ್ಲಿಸಬಾರದೆಂದು ಎಂದು ಜಯಂತಿ ಅಮ್ಮನವರು ಹೇಳಿದ್ದರು. ಮದುವೆ ಆದ ವರ್ಷವೇ 9 ಸಿನಿಮಾಗಳಲ್ಲಿ ನಟಿಸಿದೆ. ಮೊದಲಿನಿಂದಲೂ ಡ್ರೆಸ್‌ ತುಂಬಾ ಸಿಂಪಲ್ ಹಾಕಿಕೊಳ್ಳುವುದು ನಾನು. ಗ್ರ್ಯಾಂಡ್ ಆಗಿ ರೆಡಿ ಆಗಬೇಕು ಅಂತ ಅವರೇ ಸಲಹೆ ಕೊಡುತ್ತಿದ್ದರು. ಮೊದಲ ಮದುವೆಯಲ್ಲಿ ಏನಾಯ್ತು, ಯಾಕಾಯ್ತು ಎನ್ನುವ ವಿಚಾರವನ್ನು ನಾನು ಮಾತನಾಡುವುದಿಲ್ಲ,' ಎಂದು ಅನು ಹೇಳಿದ್ದಾರೆ.

'ನಾನಲ್ಲದೆ ನಮ್ಮ ದಾಂಪತ್ಯ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶ ಮಾಡಿದ್ದರಾ ಅನ್ನೋ ಪ್ರಶ್ನೆಗಳೆಲ್ಲ ತೀರಾ ಪರ್ಸನಲ್. ಹೀಗಾಗಿ ನಾನು ಮಾತನಾಡಬಾರದೆಂದು ತೀರ್ಮಾನ ಮಾಡಿರುವೆ. ಇಬ್ಬರೂ ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಅದು ಆ ರೂಮ್‌ನ ನಾಲ್ಕು ಗೋಡೆಗಳ ನಡುವೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ನನ್ನ ತಂದೆ, ತಾಯಿ ಅವರ ತಂದೆ ತಾಯಿಗೂ ಕರೆಕ್ಟ್‌ ಆಗಿ ಯಾವ ವಿಚಾರವೂ ಗೊತ್ತಿರುವುದಿಲ್ಲ ಇದೆಲ್ಲಾ ತುಂಬಾ ಪರ್ಸನಲ್ ವಿಚಾರ. ಮುಖ್ಯವಾಗಿ ಏನು ಹೇಳಬೇಕು ಅಂದ್ರೆ ಮನುಷ್ಯನಿಗೆ ಇರೋದು ಒಂದೇ ಜೀವನ. ಆ ಜೀವನವನ್ನು ಸಂತೋಷದಿಂದ ಬಾಳಬೇಕು. ಖುಷಿಯಾಗಿ ಬದುಕಬೇಕು. ನೋವಿನಲ್ಲಿಯೇ ಜೀವನ ಸಾಗಿಸುವಂತೆ ಆಗಬಾರದು. ನಾವಿಬ್ಬರೂ ಒಟ್ಟಿಗೆ ಇರಲು ಆಗುವುದಿಲ್ಲ. ಸಂತೋಷ ಅಸಾಧ್ಯವೆಂದೆನಿಸಿದಾಗ ನೋವು ಕೊಡುವ ನಿರ್ಧಾರಗಳಾದರೂ ಸರಿ, ತೆಗೆದುಕೊಳ್ಳಬೇಕಾಗುತ್ತದೆ. ಅದರಿಂದ ಮುಂದೆ ಆಗಿದ್ದೆಲ್ಲವೂ ಆಯಿತು,' ಎಂದಿದ್ದಾರೆ ಅನು.

ಬಂಡಿಪುರದಲ್ಲಿ ಮಗಳ ಮೊದಲ ಸಫಾರ್; ಕ್ಯೂಟ್‌ ಫೋಟೋ ಹಂಚಿಕೊಂಡ ಅನು ಪ್ರಭಾಕರ್!

'ಒಂದು ಮುಖ್ಯವಾದ ಮಾತು ಹೇಳಬೇಕು. ನಿಮ್ಮ ಮನೆ ಹೆಣ್ಣು ಮಕ್ಕಳು ಕಣ್ಣೀರು  ಹಾಕಿಕೊಂಡು, ಗಂಡನ ಮನೆಯಲ್ಲಿ ನೋವಾಗುತ್ತಿದೆ. ಜೀವನ ಸಾಗಿಸಲು ಆಗುತ್ತಿಲ್ಲ ಎಂದರೆ, ತಂದೆ ತಾಯಿಯಾಗಿ ಆವರನ್ನು ದಯವಿಟ್ಟು ಸಪೋರ್ಟ್ ಮಾಡಿ. ನಾನು ಆ ಘಟನೆ ಬಗ್ಗೆ ಯೋಚಿಸಿದಾಗ, ನನ್ನ ತಾಯಿ ಅಣ್ಣ ಮತ್ತು ಸ್ಕೂಲ್ ಫ್ರೆಂಡ್ಸ್‌  ನನ್ನ ಪರ ನಿಂತುಕೊಂಡರು. ಆಗ ನನ್ನ ತಂದೆ ಇರಲಿಲ್ಲ. ಈ ರೀತಿ ಘಟನೆ ಹೆಣ್ಣು ಮಕ್ಕಳ ಜೀವನದಲ್ಲಿ ನಡೆದರೆ, ಕುಗ್ಗುತ್ತಾರೆ. ಫ್ಯಾಮಿಲಿ ಸಪೋರ್ಟ್‌ ಇದ್ದಿದ್ದರಿಂದ ಮತ್ತೊಂದು ಲೈಫ್‌ ಕ್ರಿಯೇಟ್ ಮಾಡಿಕೊಳ್ಳಲು ಸಾಧ್ಯವಾಯ್ತು. ಸಮಾಜದಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುವುದಿಲ್ಲ. ಕೊನೆಗೆ ನಮ್ಮ ಪರ ನಿಲ್ಲುವುದು ತಂದೆ- ತಾಯಿ ಮಾತ್ರ. ಡಿವೋರ್ಸ್‌ ಪರಿಹಾರ ಎಂದು ನಾನು ಹೇಳುವುದಿಲ್ಲ. ಸರಿ ಮಾಡಿಕೊಳ್ಳಿ, ಇಲ್ಲ ಸೂಕ್ತವಾದ ನಿರ್ಧಾರ ತೆಗದೆುಕೊಳ್ಳಿ. ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡುತ್ತಾರೆ. ಅಲ್ಲಿ ವರದಕ್ಷಿಣಿಗಾಗಿ ಅವಳ ಪ್ರಾಣ ತೆಗೆದರೆ, ನೀವು ಆಮೇಲೆ ಮಾತನಾಡಿ ಏನು ಉಪಯೋಗ?' ಎಂದು ಅನು ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.

click me!