ದ್ವಾರಕೀಶ್‌ರನ್ನು ಚಿತ್ರರಂಗಕ್ಕೆ ತಂದವರು ಯಾರು, ಕುಳ್ಳನನ್ನು ಮದ್ರಾಸ್‌ಗೆ ಯಾಕೆ ಕಳಿಸಿದ್ರು?

By Shriram Bhat  |  First Published Apr 21, 2024, 6:26 PM IST

ಯಾವಾಗಲೂ ಮಾವನ ಬಳಿ ಚಿತ್ರರಂಗಕ್ಕೆ ತಮ್ಮನ್ನು ಪರಿಚಯಿಸಿ ಎಂದು ದ್ವಾರಕೀಶ್ ಅಂಗಲಾಚಿ ಬೇಡಿಕೊಳ್ಳುತ್ತಿದ್ದರಂತೆ. ಸೋದರಳಿಯ ಎಂಬ ಪ್ರೀತಿಯೇನೋ ಇತ್ತಾದರೂ, ಮಾವ ದ್ವಾರ್ಕಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಹಿಂದೆಮುಂದೆ ನೋಡುತ್ತಿದ್ದರು. 


ನಟ, ನಿರ್ಮಾಪಕ ಹಾಗು ನಿರ್ದೇಶಕ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಒಂದು ಆಕಸ್ಮಿಕವೇ ಆಗಿತ್ತು. ಅಂದಿನ ಕಾಲದಲ್ಲಿ ಖ್ಯಾತಿ ನಿರ್ದೇಶಕರು ಎನಿಸಿಕೊಂಡಿದ್ದ ಹುಣುಸೂರು ಕೃಷ್ಣಮೂರ್ತಿ ಅವರಿಗೆ ಸೋದರಳಿಯ ಆಗಿದ್ದವರು ದ್ವಾರಕೀಶ್. ಯಾವಾಗಲೂ ಮಾವನ ಬಳಿ ಚಿತ್ರರಂಗಕ್ಕೆ ತಮ್ಮನ್ನು ಪರಿಚಯಿಸಿ ಎಂದು ದ್ವಾರಕೀಶ್ ಅಂಗಲಾಚಿ ಬೇಡಿಕೊಳ್ಳುತ್ತಿದ್ದರಂತೆ. ಸೋದರಳಿಯ ಎಂಬ ಪ್ರೀತಿಯೇನೋ ಇತ್ತಾದರೂ ಹುಣುಸೂರು ಕೃಷ್ಣಮೂರ್ತಿಯವರು ದ್ವಾರ್ಕಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಹಿಂದೆಮುಂದೆ ನೋಡುತ್ತಿದ್ದರು.

ಕಾರಣ, ಇಲ್ಲಿನ ಸೋಲು-ಗೆಲುವು ಎಂಬ ಹಾವು-ಏಣಿ ಆಟದ ಅನುಭವ ಅವರಿಗಿತ್ತು. ಆದರೂ ಸೋದರಳಿನ ಕನಸಿಗೆ ತಾವು ಸಹಾಯ ಮಾಡಲೇಬೇಕು ಎಂಬ ತುಡಿತವಿದ್ದ ಕೃಷ್ಣಮೂರ್ತಿಯವರು, ಕೊನೆಗೂ ದ್ವಾರಕೀಶ್ ಅವರನ್ನು ತಮ್ಮ ಆಸರೆಯಲ್ಲಿ ಮದ್ರಾಸ್‌ಗೆ ಕಳುಹಿಸಿಕೊಟ್ಟರು. ಹೀಗೆ 1964ರಲ್ಲಿ ತಮ್ಮ ಮಾವನ ಸಹಾಯದಿಂದ ಸಿನಿಮಾರಂಗಕ್ಕೆ ಕಾಲಿಟ್ಟರು ದ್ವಾರಕೀಶ್.

Tap to resize

Latest Videos

ಮುಂಬೈ ಬೆಡಗಿ ದೀಪಿಕಾ ಕನ್ನಡ ಚಿತ್ರಕ್ಕೆ ಆಯ್ಕೆಯಾದ ಸೀಕ್ರೆಟ್ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಸಿನಿಮಾ ಉದ್ಯಮದ ಆಗುಹೋಗುಗಳನ್ನು ಅರಿತುಕೊಳ್ಳುತ್ತ, ಒಳಸುಳಿಗಳನ್ನು ಅರ್ಥಮಾಡಿಕೊಂಡು ಸಿನಿಮಾರಂಗದಲ್ಲಿ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರಾಗಿ ಮಿಂಚತೊಡಗಿದರು ದ್ವಾರಕೀಶ್. ಡಾ ರಾಜ್‌ಕುಮಾರ್ ಜತೆ 23 ಸಿನಿಮಾಗಳಲ್ಲಿ ನಟಿಸಿದ್ದರು ದ್ವಾರಕೀಶ್. ದ್ವಾರಕೀಶ್ ಅವರು ತಮ್ಮ 23ನೇ ವಯಸ್ಸಿಗೇ 'ಮಮತೆಯ ಬಂಧನ' ಸಿನಿಮಾ ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಕಾಲಿಟ್ಟರು.

ವಿಷ್ಣುವರ್ಧನ್‌ಗೆ ಮತ್ತೊಂದು ಸಿನಿಮಾಗೆಂದು ಸೀಕ್ರೆಟ್ಟಾಗಿ ಲಂಡನ್‌ನಿಂದ ಏನೋ ತಂದಿದ್ರು ಪುಟ್ಟಣ್ಣ ಕಣಗಾಲ್?

ಬಳಿಕ, ತಮ್ಮ 27ನೇ ವಯಸ್ಸಿಗೇ ಡಾ ರಾಜ್‌ಕುಮಾರ್ ಕಾಲ್‌ಶೀಟ್ ಪಡೆದು 'ಮೇಯರ್ ಮುತ್ತಣ್ಣ' ಸಿನಿಮಾ (Mayor Muthanna)ವನ್ನು ನಿರ್ಮಾಣ ಮಾಡಿದರು. ಆಗ ಡಾ ರಾಜ್‌ಕುಮಾರ್ ಕನ್ನಡದ ಸೂಪರ್ ಸ್ಟಾರ್ ಆಗಿದ್ದರು. ಹಾಗಿದ್ದರೂ ದ್ವಾರಕೀಶ್ ಡಾ ರಾಜ್‌ಕುಮಾರ್ ಕಾಲ್‌ಶೀಟ್ ಪಡೆಯುವಲ್ಲಿ ಸಫಲರಾಗಿದ್ದು ಸಣ್ಣ ವಿಷಯವೇನೂ ಅಲ್ಲ. ಜತೆಗೆ, ಅಂದು ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿದ್ದ ಸಿದ್ದಲಿಂಗಯ್ಯ ಹಾಗು ಭಾರ್ಗವ ಅವರಿಗೆ ಮೊದಲು ಅವಕಾಶ ಕೊಟ್ಟವರೇ ದ್ವಾರಕೀಶ್. 

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್

ದ್ವಾರಕೀಶ್ ಹಾಗು ವಿಷ್ಣುವರ್ಧನ್ ಅವರಿಬ್ಬರೂ ತುಂಬಾ ಅಪ್ತರಾಗಿದ್ದರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. 'ಕಿಟ್ಟು-ಪುಟ್ಟು', 'ಸಿಂಗಾಪುರದಲ್ಲಿ ರಾಜಾಕುಳ್ಳ' ಮುಂತಾದ ಚಿತ್ರಗಳ ಮೂಲಕ ಶುರುವಾದ ದ್ವಾರಕೀಶ್-ವಿಷ್ಣುವರ್ಧನ್ ಸ್ನೇಹ, ಸೂಪರ್ ಹಿಟ್ ಸಿನಿಮಾ 'ಆಪ್ತಮಿತ್ರ' ನಿರ್ಮಾಣ ಮಾಡುವವರೆಗೂ ಮುಂದುವರೆದಿತ್ತು.

'ರಿಲೇಶನ್‌ಶಿಪ್‌'ನಲ್ಲಿ ಇದೀನಿ, ಒಪ್ಪಿಕೊಂಡ ನಟ ವಿಜಯ್ ದೇವರಕೊಂಡ; ಫ್ಯಾನ್ಸ್ ಫುಲ್ ಶಾಕ್!

ವಿಷ್ಣು-ದ್ವಾರ್ಕಿ ಸ್ನೇಹವು ಒಮ್ಮೆ ಹಳಸಿ ಮತ್ತೆ ಟ್ರಾಕ್‌ಗೆ ಬಂದಿತ್ತು. ಅದೇನೇ ಇದ್ದರೂ, ನಟ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ 'ಆಪ್ತ ಸ್ನೇಹಿತರು' ಎಂದೇ ಹೆಸರುವಾಸಿಯಾಗಿದ್ದವರು. 

click me!