ವಿಷ್ಣುವರ್ಧನ್‌ಗೆ ಮತ್ತೊಂದು ಸಿನಿಮಾಗೆಂದು ಸೀಕ್ರೆಟ್ಟಾಗಿ ಲಂಡನ್‌ನಿಂದ ಏನೋ ತಂದಿದ್ರು ಪುಟ್ಟಣ್ಣ ಕಣಗಾಲ್?

By Shriram Bhat  |  First Published Apr 21, 2024, 3:59 PM IST

ಸಿನಿಮಾ ಅಂತಲ್ಲ, ಹೆಚ್ಚಿನ ಯಾವುದೇ ವಿಷಯಕ್ಕೂ ನಟ ವಿಷ್ಣುವರ್ಧನ್ ಅವರು ಅದನ್ನು ಹೆಚ್ಚು ನಂಬುತ್ತಿದ್ದರು. ಕಾಲ ಕೂಡಿ ಬಂದರಷ್ಟೇ ಕೆಲವೊಂದು ಸಂಗತಿ ನಡೆಯಲು ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ನಾಗರಹಾವು ಬಳಿಕ ವಿಷ್ಣುವರ್ಧನ್..


ಕನ್ನಡದ ಮೇರು ನಟ ಪುಟ್ಟಣ್ಣ ಕಣಗಾಲ್ ಅವರು ತಾವೇ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸ್ಟಾರ್ ನಟ ವಿಷ್ಣುವರ್ಧನ್ ಅವರಿಗೆ ಮತ್ತೊಂದು ಚಿತ್ರವನ್ನು ಮಾಡಲೇ ಇಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಸ್ವತಃ ಅದನ್ನು ನಟ ವಿಷ್ಣುವರ್ಧನ್ ಕೂಡ ಹಲವಾರು ಬಾರಿ ಹೇಳಿಕೊಂಡಿದ್ದರು. ಆದರೆ, ಅದನ್ನು ವಿಷ್ಣು ಹೇಳಿಕೊಂಡ ರೀತಿ ಮಾತ್ರ ಬೇರೆಯದೇ ರೀತಿಯಲ್ಲಿತ್ತು. 'ಯಾವಾಗ್ಲೂ ಎಲ್ಲದಕ್ಕೂ ಯೋಗ ಕೂಡಿ ಬರಬೇಕು' ಎಂದು ಹೇಳುವ ಮೂಲಕ ವಿಷ್ಣುವರ್ಧನ್ ಮತ್ತೊಮ್ಮೆ ತಾವಿಬ್ಬರೂ ಸೇರಿ ಸಿನಿಮಾ ಮಾಡಲಿಲ್ಲ ಎಂಬ ಸಂಗತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. 

ಸಿನಿಮಾ ಅಂತಲ್ಲ, ಹೆಚ್ಚಿನ ಯಾವುದೇ ವಿಷಯಕ್ಕೂ ನಟ ವಿಷ್ಣುವರ್ಧನ್ ಅವರು ಅದನ್ನು ಹೆಚ್ಚು ನಂಬುತ್ತಿದ್ದರು. ಕಾಲ ಕೂಡಿ ಬಂದರಷ್ಟೇ ಕೆಲವೊಂದು ಸಂಗತಿ ನಡೆಯಲು ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ನಾಗರಹಾವು ಬಳಿಕ ವಿಷ್ಣುವರ್ಧನ್ ಯಾವತ್ತೂ ತಮಗೆ ಇನ್ನೊಂದು ಸಿನಿಮಾ ಮಾಡಿ ಪುಟ್ಟಣ್ಣ ಕಣಗಾಲ್ ಅವರ ಬಳಿ ಅಂಗಲಾಚಿ ಬೇಡಿರಲಿಲ್ಲವಂತೆ. ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತೆ ತಮ್ಮನ್ನು ಹುಡುಕಿಕೊಂಡು ಬಂದ ಅವಕಾಶಗಳನ್ನು ಉಪಯೋಗಿಸಿಕೊಂಡು ವಿಷ್ಣುವರ್ಧನ್ ಬೆಳೆದರು. ಅತ್ತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡ ತಮ್ಮಿಷ್ಟದಂತೆ ಹಲವರ ಜತೆ ಸಿನಿಮಾ ಮಾಡುತ್ತಿದ್ದರು. 

Tap to resize

Latest Videos

ಸಮಂತಾಗೆ ತಾಯಿಯಾಗುವ ಬಯಕೆ ನನಗೆ; ರಶ್ಮಿಕಾ ಮಂದಣ್ಣ ಹೇಳಿಕೆಗೆ ಕಂಗಾಲಾದ್ರಾ ಸ್ಯಾಮ್?

ಆದರೆ, ಒಮ್ಮೆ ಪುಟ್ಟಣ್ಣನವರೇ ಸ್ವತಃ ವಿಷ್ಣುವರ್ಧನ್‌ಗೆ 'ಒಳ್ಳೇ ಸಬ್ಜೆಕ್ಟ್‌ ಸಿಕ್ಕರೆ ನಿನಗೊಂದು ಸಿನಿಮಾ ತೆಗಿತೀನಿ ಮರೀ..' ಎಂದಿದ್ದರಂತೆ. ಅದರಂತೆ, 'ರಾಜಾ ವೆಂಕಟಪ್ಪ ನಾಯಕ' ಹೆಸರಿನ ಸಿನಿಮಾ ನಿರ್ದೇಶನಕ್ಕೆ ಪುಟ್ಟಣ್ಣ ಕಣಗಾಲ್ ಅವರು ಸ್ಕೆಚ್ ಹಾಕಿದ್ದರಂತೆ. ಅದರ ಚಿತ್ರಕಥೆಯನ್ನು ನಟ ವಿಷ್ಣುವರ್ಧನ್ ಅವರಿಗಾಗಿಯೇ ಬರೆಯಲಾಗಿತ್ತು ಎನ್ನುವ ಮಾತಿದೆ. ಅದರಂತೆ, ಆ ಚಿತ್ರಕ್ಕೆ ಲಂಡನ್‌ನಿಂದ ಒಂದು 'ಮೈಕ್ರೋ ಫಿಲಂ'ಅನ್ನು ತರುವ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದರು ಪುಟ್ಟಣ್ಣ ಕಣಗಾಲ್. ಆ ಸಿನಿಮಾ ಕಾರ್ಯರೂಪಕ್ಕೆ ಬಂದಿದ್ದರೆ, ವಿಷ್ಣುವರ್ಧನ್-ಪುಟ್ಟಣ್ಣ ಕಾಂಬಿನೇಷನ್‌ನಲ್ಲಿ ಭರ್ಜರಿ ಸಿನಿಮಾ ಮೂಡಿ ಬರುವುದಿತ್ತು. ಆದರೆ ಅದು ಆಗಲೇ ಇಲ್ಲ. 

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್

ಆ ಸಿನಿಮಾ ಏನಾದರೂ ಆಗಿದ್ದರೆ ಕನ್ನಡ ಚಿತ್ರರಂಗಕ್ಕೆ ಅಂದು ಹೊಸ ಟೆಕ್ನಾಲಜಿಯ ಪರಿಚಯ ಆಗಿರುತ್ತಿತ್ತು. ಲಂಡನ್ ಮೈಕ್ರೋಫಿಲಂ ಮೂಲಕ ಕನ್ನಡ ಸಿನಿಮಾ ಅಂದು ಆಗಿದ್ದಿದ್ದರೆ, ಪುಟ್ಟಣ್ಣ ಕಣಗಾಲ್ ಅಂದಿನ ಕಾಲದಲ್ಲಿ ನಿರ್ದೇಶಕರಾಗಿ ಬೇರೆಯದೇ ಲೆವಲ್‌ನಲ್ಲಿ ಮಿಂಚುತ್ತಿದ್ದರು. ಆದರೆ, ಅದು ಕನಸಾಗಿಯೇ ಕಸದಬುಟ್ಟಿ ಸೇರಿಕೊಂಡಿತು. ನಟ ವಿಷ್ಣುವರ್ಧನ್ ಅವರು ಹೇಳಿದಂತೆ 'ಎಲ್ಲದಕ್ಕೂ ಕಾಲ ಕೂಡಿ ಬರಬೇಕು' ಎಂಬಂತೆ, ವಿಷ್ಣುವರ್ಧನ್-ಪುಟ್ಟಣ್ಣ ಕಣಗಾಲ್ ಸಂಗಮದ ಮತ್ತೊಂದು ಸಿನಿಮಾ ಮೂಡಿ ಬರಲೇ ಇಲ್ಲ. 

ಕೇರಳದಲ್ಲಿ 'ವಡಕ್ಕನ್'ಎಂದ ಕನ್ನಡ ನಟ ಕಿಶೋರ್; ಮಲಬಾರ್ ಥ್ರಿಲ್ಲರ್‌ಗೆ ಬಂತು ಭಾರೀ ಜೈ ಹೋ !

click me!