"ಆ ಚಿತ್ರದಲ್ಲಿ ರವಿಚಂದ್ರನ್ ತಾಯಿ ಅಲ್ಲ, ಧೀರೇಂದ್ರ ಗೋಪಾಲ್ ಹೆಂಡತಿ": ಹಳೆಯ ಗೊಂದಲ ಬಿಡಿಸಿದ ನಟಿ ಆಶಾಲತಾ

Published : Nov 17, 2026, 06:22 PM IST
Aruna Irani Annayya role confusion

ಸಾರಾಂಶ

Actress Ashalatha: ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಭಿನಯದ ಎವರ್‌ಗ್ರೀನ್ ‘ಅಣ್ಣಯ್ಯ’ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಹಿರಿಯ ನಟಿ ಆಶಾಲತಾ ಅವರು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Aruna Irani Annayya role confusion:  ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಭಿನಯದ ‘ಅಣ್ಣಯ್ಯ’ ಚಿತ್ರದ ಕುರಿತು ಹಿರಿಯ ನಟಿ ಆಶಾಲತಾ ಅವರು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಇಂದಿಗೂ ಪ್ರೇಕ್ಷಕರು ತಮ್ಮ ಪಾತ್ರದ ಬಗ್ಗೆ ಹೊಂದಿರುವ ಗೊಂದಲವನ್ನು ಬಗೆಹರಿಸಿರುವುದಲ್ಲದೆ, ಸೆಟ್‌ನಲ್ಲಿ ನಡೆದ ಸಗಣಿ, ಕೊಟ್ಟಿಗೆ ಹಾಗೂ ಹಾವಿನ ದೃಶ್ಯಗಳ ಸ್ವಾರಸ್ಯಕರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

‘ಅರುಣಾ ಇರಾನಿ ಪಾತ್ರ ನನ್ನದಲ್ಲ’: ಪಾತ್ರದ ಗೊಂದಲಕ್ಕೆ ತೆರೆ

‘ಅಣ್ಣಯ್ಯ’ ಸಿನಿಮಾದಲ್ಲಿ ತಮ್ಮ ಪಾತ್ರದ ಕುರಿತು ಅಭಿಮಾನಿಗಳಲ್ಲಿರುವ ಗೊಂದಲದ ಬಗ್ಗೆ ಮಾತನಾಡಿದ ಆಶಾಲತಾ, "ಕೆಲವರೆಲ್ಲಾ ಅರುಣಾ ಇರಾನಿ ಅವರ ಪಾತ್ರವನ್ನು ನಾನೇ ಮಾಡಿದ್ದೀನಿ ಎಂದುಕೊಂಡಿದ್ದಾರೆ. ‘ಅಯ್ಯೋ, ಅಣ್ಣಯ್ಯದಲ್ಲಿ ರವಿಚಂದ್ರನ್ ಅಮ್ಮ ನೀವೇ ತಾನೇ?’ ಎಂದು ಕೇಳುತ್ತಾರೆ. ನೀವಿಬ್ಬರೂ ಒಂದೇ ತರಹ ಕಾಣಿಸುತ್ತೀರಾ ಮೇಡಂ ಅಂತ ತುಂಬಾ ಜನ ಹೇಳುತ್ತಾರೆ. ಆದರೆ ಅದು ನಾನಲ್ಲ, ಆ ಸಿನಿಮಾದಲ್ಲಿ ನಾನು ಧೀರೇಂದ್ರ ಗೋಪಾಲ್ ಅವರ ಪತ್ನಿಯ (ಮಿಸಸ್) ಪಾತ್ರದಲ್ಲಿ ನಟಿಸಿದ್ದೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ಸಗಣಿ, ಕೊಟ್ಟಿಗೆ ಹಾಗೂ ಹಾವುಗಳ ಜೊತೆಗಿನ ಶೂಟಿಂಗ್ ನೆನಪು ಬಿಚ್ಚಿಟ್ಟ ಆಶಾಲತಾ

ಚಿತ್ರದ ಯಶಸ್ಸಿನ ಕುರಿತು ಸಂತಸ ವ್ಯಕ್ತಪಡಿಸಿದ ಅವರು, "ಇವತ್ತಿಗೂ ‘ಅಣ್ಣಯ್ಯ’ ಚಿತ್ರಕ್ಕೆ, ಅದರ ಹಾಡುಗಳಿಗೆ ಹಾಗೂ ಇಡೀ ಸಿನಿಮಾಕ್ಕೆ ತುಂಬಾ ಹೆಸರಿದೆ. ನಾವೆಲ್ಲರೂ ಬಹಳ ಎಂಜಾಯ್ ಮಾಡಿಕೊಂಡು ಪಾತ್ರಗಳನ್ನು ಮಾಡಿದ್ದೆವು" ಎಂದರು.

ಸೆಟ್‌ನಲ್ಲಿನ ಮರೆಯಲಾಗದ ಕ್ಷಣಗಳ ಬಗ್ಗೆ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಶಾಲತಾ, "ಚಿತ್ರದಲ್ಲಿ ಸಗಣಿಯಲ್ಲಿ ಬೀಳುವ ದೃಶ್ಯ ಹಾಗೂ ಕೊಟ್ಟಿಗೆ ಸೀನ್‌ಗಳಿದ್ದವು. ಇನ್ನು ಹಬ್ಬದ ಸಮಯದಲ್ಲಿ ಹಸುಗಳು ಎಲ್ಲಾದರೂ ಹೋದರೆ ಅಂತ ನಾವು ಒಂದು ಬಕೆಟ್ ಇಟ್ಟುಕೊಂಡು ಕಾಯುತ್ತಾ ಕೂರುತ್ತಿದ್ದೆವು! ಸೆಟ್ ತುಂಬಾ ಚೆನ್ನಾಗಿತ್ತು, ಎಲ್ಲರೂ ಉತ್ತಮ ಕಲಾವಿದರಿದ್ದರು" ಎಂದು ಹಳೆಯ ದಿನಗಳನ್ನು ಸ್ಮರಿಸಿದ್ದಾರೆ.

ತೆರೆ ಮೇಲೆ ಗಂಭೀರ, ಸೆಟ್‌ನಲ್ಲಿ ಜಾಲಿಯಾಗಿದ್ದ ರವಿಚಂದ್ರನ್!

ಚಿತ್ರದಲ್ಲಿ ಪಂಚೆ ಹಿಡಿದುಕೊಂಡು ರವಿಚಂದ್ರನ್ ಅವರು ತೋರುತ್ತಿದ್ದ ವಿಶಿಷ್ಟ ಮ್ಯಾನರಿಸಂ ಕುರಿತು ನಿರೂಪಕಿ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಆಶಾಲತಾ, "ಆಗಿನ ಶೂಟಿಂಗ್ ದಿನಗಳೇ ಬೇರೆ ತರಹ ಇದ್ದವು. ರವಿಚಂದ್ರನ್ ಅವರ ಪಾತ್ರ ಮಾತ್ರ ತೆರೆ ಮೇಲೆ ಗಂಭೀರವಾಗಿರುತ್ತಿತ್ತು. ಅಷ್ಟು ಬಿಟ್ಟರೆ ಅವರು ಯಾವಾಗಲೂ ಒಂದೇ ರೀತಿ ಜಾಲಿಯಾಗಿರುತ್ತಿದ್ದರು. ಅವರ ಜೊತೆ ಸೆಟ್‌ನಲ್ಲಿ ಎಲ್ಲರೂ ಬಹಳ ಖುಷಿಯಿಂದ ಇರುತ್ತಿದ್ದರು" ಎಂದು ಕ್ರೇಜಿ ಸ್ಟಾರ್ ಅವರ ಸರಳ ಹಾಗೂ ಹಾಸ್ಯಪ್ರಿಯ ಸ್ವಭಾವವನ್ನು ಬಣ್ಣಿಸಿದ್ದಾರೆ.

ಹೊಸ ತಲೆಮಾರಿನ ಪ್ರೇಕ್ಷಕರಿಗೂ ಚಿರಪರಿಚಿತ ಆಶಾಲತಾ

ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ಸಕ್ರಿಯರಾಗಿರುವ ಹಿರಿಯ ನಟಿ ಆಶಾಲತಾ ಅವರು, ತಮ್ಮ ಸಹಜ ಹಾಗೂ ಪ್ರಬುದ್ಧ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಪತ್ನಿ, ತಾಯಿ, ಅತ್ತಿಗೆಯಂತಹ ಕೌಟುಂಬಿಕ ಪಾತ್ರಗಳಿಂದ ಹಿಡಿದು ಹಾಸ್ಯ ಹಾಗೂ ವಿಭಿನ್ನ ಪೋಷಕ ಪಾತ್ರಗಳವರೆಗೆ ಪರಕಾಯ ಪ್ರವೇಶ ಮಾಡಿರುವ ಅವರು, ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ಅಣ್ಣಯ್ಯ’ದಂತಹ ಎವರ್‌ಗ್ರೀನ್ ಹಿಟ್ ಸಿನಿಮಾಗಳಲ್ಲಿನ ಅವರ ಅಭಿನಯ ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿದೆ. ಹೀಗೆ ದಶಕಗಳ ಸಿನಿಪಯಣದ ನಂತರವೂ ತಮ್ಮ ಸರಳ ವ್ಯಕ್ತಿತ್ವ ಹಾಗೂ ನಟನೆಯ ಮೂಲಕ ಹೊಸ ತಲೆಮಾರಿನ ಪ್ರೇಕ್ಷಕರಿಗೂ ಅವರು ಚಿರಪರಿಚಿತರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂಬರೀಷ್​-ಸುಮಲತಾ ಮೊದಲು ಭೇಟಿಯಾಗಿದ್ದೆಲ್ಲಿ? ಭಯ ಪಡುತ್ತಲೇ ಪ್ರೀತಿಯಲ್ಲಿ ಬಿದ್ದ ನಟಿ- ರೋಚಕ ಲವ್​ ಸ್ಟೋರಿ
₹25 ಲಕ್ಷ ಬಜೆಟ್‌ನಲ್ಲಿ 8 ಕೋಟಿ ಗಳಿಕೆ, ಆತಂಕದ ಘಟನೆಯಿಂದ ಹುಟ್ಟಿದ ರಾಜ್ ಈ ಸಿನಿಮಾ ಸೂಪರ್ ಹಿಟ್