ಹಾಸ್ಟಲ್ ಹುಡುಗರಿಗೆ ಜಯ; ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿದ ಕೋರ್ಟ್, ನಾಳೆ ರಿಲೀಸ್!

By Vaishnavi Chandrashekar  |  First Published Jul 20, 2023, 3:40 PM IST

ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಪರ ನಿಂತ  ಕೋರ್ಟ್‌. ರಮ್ಯಾ ಹಾಕಿದ ಕೇಸ್ ತೆರವುಗೊಳಿಸಿದ ಕೋರ್ಟ್‌....


ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಹಲವು ವರ್ಷಗಳ ನಂತರ 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಮೂಲಕ ಕಬ್ ಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೆ ಚಿತ್ರದ ರಮ್ಯಾ ಇಸ್ ಬ್ಯಾಕ್, ಟೀಸರ್ ಮತ್ತು ಹಾಡುಗಳು ಸಖತ್ ವೈರಲ್ ಆಗುತ್ತಿದೆ. ಜುಲೈ 21ರಂದು ಅದ್ಧೂರಿಯಾಗಿ ಬಿಡುಗಡೆ ಕಾಣಲು ಸಜ್ಜಾಗಿದೆ ಅಷ್ಟರಲ್ಲಿ ರಮ್ಯಾ ಉಲ್ಟಾ ಹೊಡೆದಿದ್ದಾರೆ. ನನ್ನ ಅನುಮತಿ ಇಲ್ಲದೆ ಟೀಸರ್‌ನಲ್ಲಿ ನನ್ನ ದೃಶ್ಯ ಬಳಸಿದ್ದಾರೆ ಎಂದು ಕೋರ್ಟ್‌ ನೋಟಿಸ್‌ ಕಳುಹಿಸಿದ್ದರು. ಇದೇನಪ್ಪಾ? ಹೊಸ ಚಿತ್ರತಂಡಕ್ಕೆ ಸಹಾಯ ಮಾಡುವುದಾಗಿ ಹೇಳಿ ರಮ್ಯಾ ಹೀಗೆ ಕೊನೆ ಕ್ಷಣದಲ್ಲಿ ವಿರುದ್ಧ ನಿಲ್ಲುವುದಾ? ಎನ್ನುವ ಪ್ರಶ್ನೆ ಮೂಡಿತ್ತು. 

ಈಗ ಅದೇ ಹಾಸ್ಟಲ್ ಹುಡುಗರಿಗೆ ಜಯ ಸಿಕ್ಕಿದೆ. ರಮ್ಯಾ ತಡೆಯಾಜ್ಞೆ ಬಗ್ಗೆ ಇಂದು ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ. ಇಡೀ ಹಾಸ್ಟಲ್ ಹುಡುಗರು ಮತ್ತು ನಿರ್ಮಾಪಕ ವರುಣ್ ಗೌಡ ಕೋರ್ಟ್‌ಗೆ ಆಗಮಿಸಿದ್ದರು. ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್ ಮಾಡಬಹುದು ಹಾಗೂ ಯಾವ ದೃಶ್ಯಕ್ಕೂ ಕತ್ತರಿ ಇಲ್ಲದೆ ರಿಲೀಸ್ ಮಾಡಲು ಅನುಮತಿ ಸಿಕ್ಕಿದೆ. ರಮ್ಯಾ ಹಾಕಿದ ಕೇಸ್ನ ಕೋರ್ಟ್‌ ವಜಾ ಗೊಳಿಸಿದೆ.

Tap to resize

Latest Videos

ರಮ್ಯಾಗಾಗಿ ಗುಡಿ ಕಟ್ಟಿಸಿ ಪ್ರತಿಭಟನೆ ಮಾಡಿದ 'ಹಾಸ್ಟೆಲ್ ಹುಡುಗರು'; ವಿಡಿಯೋ ನೋಡಿ ಫ್ಯಾನ್ಸ್ ಖುಷ್

ಹಾಸ್ಟಲ್ ಹುಡುಗರು ಚಿತ್ರದಲ್ಲಿ ರಮ್ಯಾ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಟ್ರೇಲರ್‌ನಲ್ಲಿ ಸಖತ್ ಹಾಟ್‌ ಆಗಿ ಎರಡು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಒಂದು ಕೆಂಪು ಸೀರೆ ಧರಿಸಿ ಕ್ಲಾಸ್‌ ಟೀಚರ್‌ ಆಗಿ ಎಂಟ್ರಿ ಕೊಡುವುದು ಮತ್ತೊಂದು ಕಾಲಿ ಜಾಗದಲ್ಲಿ ಬಾತ್‌ ಕೋಟ್‌ ಧರಿಸಿ ಕೈಯಲ್ಲಿ ಕ್ಯಾಂಡಲ್ ಹಿಡಿದು ಕುಳಿತಿರುವುದು. ಇದೆಲ್ಲಾ ಕೆಲವು ಸೆಕೆಂಡ್‌ಗಳ ದೃಶ್ಯ ಆಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು ಆದರೆ ರಮ್ಯಾ ಮಾತ್ರ ನನ್ನ ಅನುಮತಿ ಇಲ್ಲದೆ ಹಾಕಿರುವುದು ತಪ್ಪು ಎಂದು ತಕರಾರು ತೆಗೆದಿದ್ದಾರೆ ಹಾಗೂ ಕೋರ್ಟ್‌ ನೋಟಿಸ್‌ ಕಳುಹಿಸಿ 1 ಕೋಟಿ ಪರಿಹಾರ ನೀಡಬೇಕು ಎಂದು ಹೇಳಿದ್ದರು. 

ಕೊನೆಗೂ ಚಿತ್ರಮಂದಿರಕ್ಕೆ ಬರ್ತಿದ್ದಾರೆ 'ಹಾಸ್ಟೆಲ್ ಹುಡುಗರು'; ಯಾವಾಗ?

ಹಾಸ್ಟಲ್ ಹುಡುಗರು ಯಾಕೆ ಟಾರ್ಗೆಟ್‌? ಹೌದು ಈ ಸಿನಿಮಾ ಪೋಸ್ಟರ್ ರಿಲೀಸ್ ದಿನದಂದ ಈ ಕ್ಷಣದವರೆಗೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಚಿತ್ರದ ಮೊದಲ ಪೋಸ್ಟರ್ ರಿಲೀಸ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡಿ ತಮಾಷೆಗೆ ದಬ್ಬ ತರ ಇದೆ ಎಂದಿದ್ದರು. ಆನಂತರ ಇದು ಪ್ರಮೋಷನ್ ಗಿಮಿಕ್ ಎಂದು ತಿಳಿಯಿತ್ತು. ಇದಾದ ಮೇಲೆ ರಕ್ಷಿತ್ ಶೆಟ್ಟಿ ಪರಮವಾ ಸ್ಟುಡಿಯೋ ಪ್ರೆಸೆಂಟ್ ಮಾಡಲಿದೆ ಅನ್ನೋದು ಮತ್ತು ಪಿಲ್ಲರ್ ಶಕ್ತಿ ಪಡೆಯಿತ್ತು. ಇದೆಲ್ಲಾ ಓಕೆ ಮತ್ಯಾಕೆ ಬಿಲ್ಡಪ್ ಎನ್ನುವಷ್ಟರಲ್ಲಿ ರಮ್ಯಾ ಇಸ್ ಬ್ಯಾಕ್ ಎನ್ನುವ ವಿಡಿಯೋ ರಿಲೀಸ್ ಮಾಡಿದ್ದರು. ರಮ್ಯಾ ಯಾವಾಗ ಸಿನಿಮಾ ಮಾಡ್ತಾರೆ ಅಂತ ಪ್ರಶ್ನೆ ಕೇಳುವ ಹಾಸ್ಟರ್ ಹುಡುಗರಿಗೆ ಉತ್ತರ ಕೊಟ್ಟ ರಮ್ಯಾ ವಿಡಿಯೋ ಸಖತ್ ವೈರಲ್ ಆಗಿತ್ತು. ಇದು ಕೇವಲ ಪ್ರಮೋಷನ್ ಎಂದು ಸುಮ್ಮನಾಗಿದ್ದರು ಆದರೆ ಟ್ರೇಲರ್‌ನಲ್ಲಿ ರಮ್ಯಾ ನಟಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಖುಷಿ ಪಟ್ಟಿದ್ದಾರೆ. ಗೆಸ್ಟ್‌ ಪಾತ್ರ ಮಾಡಿದ್ದರೂ ಓಕೆ ನಮ್ಮ ನಟಿ ಇದ್ದಾರೆ ಅನ್ನೋ ಖುಷಿಯಲ್ಲಿದ್ದರು. 

ಒಟ್ಟಾರೆ ಸಿನಿಮಾ ನಾಳೆ ರಿಲೀಸ್ ಆಗುತ್ತಿರುವುದೇ ಸಿಹಿ ಸುದ್ದಿ. ಸಿನಿಮಾ ನೋಡಿ ಹೇಗಿದೆ ಅಂತ ಕಾಮೆಂಟ್ ಮಾಡೋದು ಮರಿಬೇಡಿ.

click me!