ಮಹಿಳಾ ನಿರ್ದೇಶಕಿ ಸುಧಾ ಕೊಂಗರ ಜೊತೆ ಹೊಸ ಚಿತ್ರ ಅನೌನ್ಸ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌!

By Suvarna News  |  First Published Apr 21, 2022, 5:02 PM IST

ಕೆಜಿಎಫ್ ಯಶಸ್ಸಿನ ಬೆನ್ನಲೆ ಹೊಸ ಸಿನಿಮಾ ಅನೌನ್ಸ್ ಮಾಡಿದ ಹೊಂಬಾಳೆ ನಿರ್ಮಾಣ ಸಂಸ್ಥೆ. 


ವಿಶ್ವಾದ್ಯಂತ ಹೆಸರು ಮಾಡಿರುವ ಕೆಜಿಎಫ್‌ (KGF) ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ (Hombale films) ಇಂದು ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದೆ. ಕೆಜಿಎಫ್ ಯಶಸ್ಸಿನ ಬೆನ್ನಲೆ ಹೊಸ ಚಿತ್ರ ಅನೌನ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಹೊಂಬಾಳೆ ಫಿಲ್ಮ್ಸ್‌ನ ಮೆಚ್ಚಿಕೊಂಡಾಡುತ್ತಿದ್ದಾರೆ.

'ಕೆಲವೊಂದು ಸತ್ಯಕಥೆಗಳನ್ನು ಹೇಳಲೇ ಬೇಕು, ಅದು ಸರಿಯಾದ ರೀತಿಯಲ್ಲಿ ಹೇಳಬೇಕು. ನಾವು ಹೊಂಬಾಳೆ ಫಿಲ್ಮ್ಸ್‌ ತುಂಬಾ ಹೆಮ್ಮೆಯಿಂದ ಘೋಷಣೆ ಮಾಡುತ್ತಿದ್ದೀನಿ ನಮ್ಮ ಮುಂದಿನ ಸಿನಿಮಾ ನಿರ್ದೇಶಕ ಸುಧಾ ಕೊಂಗರ (Sudha Kongara) ಅವರ ಜೊತೆ.  ನಮ್ಮೆಲ್ಲಾ ಸಿನಿಮಾಗಳ ರೀತಿಯೇ ಈ ಚಿತ್ರವೂ ನಮ್ಮ ಭಾರತದ ಇಮ್ಯಾಜಿನೇಷನ್‌ನನ್ನು ಎತ್ತಿ ತೋರಿಸಲಾಗುತ್ತದೆ' ಎಂದು ಹೊಂಬಾಳೆ ಫಿಲ್ಮ್ಸ್‌ ಫೋಸ್ಟರ್ ರಿಲೀಸ್ ಮಾಡಿದ್ದಾರೆ.

Tap to resize

Latest Videos

ಯಾರು ಸುಧಾ ಕೊಂಗರ?

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಹುಟ್ಟಿ ಚೆನ್ನೈನಲ್ಲಿ ಬೆಳೆದ ಸುಧಾ ಅವರು ಹಿಸ್ಟರಿ ಮತ್ತು ಮಾಸ್ ಕಮ್ಯೂನಿಕೇಷನ್‌ ಪದವಿಧರೆ. 2002ರಲ್ಲಿ ಇಂಗ್ಲಿಷ್‌ ಸಿನಿಮಾ Mitr ಮತ್ತು ಮೈ ಫ್ರೆಂಡ್ ಚಿತ್ರಕ್ಕೆ ಸ್ಕ್ರಿಪ್ಟ್‌ ರೈಟರ್ ಆಗಿ ಕೆಲಸ ಮಾಡಿದ್ದಾರೆ. ನಿರ್ದೇಶಕ ಮಣಿ ರತ್ನಂ ಅವರ ಜೊತೆ ಏಳು ವರ್ಷ ಕೆಲಸ ಮಾಡಿದ್ದಾರೆ. 2008ರಲ್ಲಿ ಕೃಷ್ಣ ಭಗವಾನ್ ನಟಿಸಿರುವ ಆಂಧ್ರ ಅಂದಗಾಡು ಚಿತ್ರದ ಮೂಲಕ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟರು, ಅಂದುಕೊಂಡ ರೀತಿಯಲ್ಲಿ ಸಿನಿಮಾ ಯಶಸ್ಸು ಕೊಡಲಿಲ್ಲ. 

 

𝐒𝐨𝐦𝐞 𝐭𝐫𝐮𝐞 𝐬𝐭𝐨𝐫𝐢𝐞𝐬 𝐝𝐞𝐬𝐞𝐫𝐯𝐞 𝐭𝐨 𝐛𝐞 𝐭𝐨𝐥𝐝, 𝐚𝐧𝐝 𝐭𝐨𝐥𝐝 𝐫𝐢𝐠𝐡𝐭.

To a new beginning with a riveting story , based on true events. pic.twitter.com/mFwiGOEZ0K

— Hombale Films (@hombalefilms)

Air Deccan ಕ್ಯಾಪ್ಟನ್ ಜಿಆರ್‌ ಗೋಪಿನಾಥ್‌ (GR Gopinath) ಅವರ ಕಥೆ ಸೂರರೈ ಪೊಟ್ರು (Soorarai Pottru) ಚಿತ್ರದಕ್ಕೆ ಸುಧಾ ಆಕ್ಷನ್ ಕಟ್ ಹೇಳಿದ ದಿನದಿಂದ ಚಿತ್ರರಂಗ ಅವರ ಕೆಲಸ ಮತ್ತು ಸಿನಿಮಾಗಳನ್ನು ನೋಡುವ ರೀತಿ ಬದಲಾಗಿದೆ. ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆಯಾದ ಈ ಸಿನಿಮಾ ವಿಶ್ವಾದ್ಯಂತ ಗಮನ ಸೆಳೆಯಿತ್ತು. ಇದಾದ ನಂತರ ಕಳೆದ ವರ್ಷ ಓಟಿಟಿಯಲ್ಲಿ ಪಾವ ಕಡೈಗಲ್ ಸಿನಿಮಾ ಬಿಡುಗಡೆ ಮಾಡಿದ್ದರು. ಈಗ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಸುಧಾ ಯಾವ ರೀತಿಯ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. 

KGF 2 Film Review: ಅಮ್ಮನ ಹಠದ ಹಿಂದೆ ಹೋಗುವ ಮಗನ ಕಥೆಯಿದು, ಕೆಜಿಎಫ್ 2 ಅದ್ದೂರಿತನ ಮಿಸ್ ಮಾಡ್ಕೊಳ್ಬೇಡಿ!

ಒಳ್ಳೊಳ್ಳೆ ನಿರ್ದೇಶಕ/ಕಿ ಜೊತೆ ಒಳ್ಳೆ ಕಥೆಗಳ ಜೊತೆ ಹೊಂಬಾಳೆ ಫಿಲ್ಮ್ಸ್ ಕೈ ಜೋಡಿಸಿದೆ.  2014ರಲ್ಲಿ ಪುನೀತ್ ರಾಜ್‌ಕುಮಾರ್‌ (Puneeth Rajkumar) ಮತ್ತು ಏರಿಕಾ ಅವರ 'ನಿನ್ನಿಂದಲೇ' ಸಿನಿಮಾ ಮೊದಲು ನಿರ್ಮಾಣ ಮಾಡಿದ್ದು.  2015ರಲ್ಲಿ ಯಶ್ (Yash) ನಟನೆಯ ಮಾಸ್ಟರ್ ಪೀಸ್ (Master Piece), 2017ರಲ್ಲಿ ಪುನೀತ್‌ ಅವರ ರಾಜಕುಮಾರ (Rajakumara) ಸಿನಿಮಾ, 2018ರಲ್ಲಿ ಕೆಜಿಎಫ್ ಚಾಪ್ಟರ್ 1, 2021ರಲ್ಲಿ ಅಪ್ಪು ನಟನೆಯ ಯುವರತ್ನ ಸಿನಿಮಾ, 2022ರಲ್ಲಿ ಕೆಜಿಎಫ್ ಚಾಪ್ಟರ್ 2 ಮಾಡಿದ್ದಾರೆ. ಇಷ್ಟು ಬಿಡುಗಡೆಯಾಗಿರುವ ಸಿನಿಮಾ ಆದರೆ ಇನ್ನೂ ಕೆಲವೊಂದು ಸಿನಿಮಾಗಳ ಕೆಲಸ ಸೈಲೆಂಟ್ ಆಗಿ ನಡೆಯುತ್ತಿದೆ. 

ರಿಷಬ್ ಶೆಟ್ಟಿ (Rishab Shetty) ನಟನೆಯ ಕಾಂತಾರ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ, ಸಂತೋಷನ್ ಆನಂದ್ ರಾಮ್‌ ಮತ್ತು ಜಗ್ಗೇಶ್ ಕಾಂಬಿನೇಷನ್‌ನ ರಾಘವೇಂದ್ರ ಸ್ಟೋರ್ಸ್‌ (Raghavendra Stores), ಪ್ರಶಾಂತ್ ನೀಲ್ (Prashanth neel) ಮತ್ತು ಟಾಲಿವುಡ್ ನಟ ಪ್ರಭಾಸ್‌ ಅವರ ಸಲಾರ್ (Salaar) ಸಿನಿಮಾ ಮತ್ತು ರಿಕ್ಷಿತ್ ಶೆಟ್ಟಿ (Rakshit Shetty) ಜೊತೆ ಮತ್ತೊಂದು ಸಿನಿಮಾ ರಿಚರ್ಡ್‌ ಆಂಟೋನಿ. 

click me!