ರಾಧೆಯ ಲುಕ್‌ನಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್‌ ಮಾಡಿಸಿದ ಹರ್ಷಿಕಾ ಪೂಣಚ್ಚ

Published : Jul 18, 2026, 04:14 PM IST
Harshika Poonacha

ಸಾರಾಂಶ

Harshika Poonacha Pregnancy: ಇದೊಂದು ಸೊಗಸಾದ ಚಿಂತನೆಯಷ್ಟೇ. ಇಲ್ಲಿ ಪುರಾಣವನ್ನು ತಿರುಚುವ ದುರುದ್ದೇಶ ಇಲ್ಲ. ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚ ಮಾತುಗಳಿವು.

‘ರಾಧಾ ಮಾಧವರ ಪ್ರೇಮ ಈ ಜಗತ್ತು ಇರುವ ತನಕ ಎನ್ನುವ ಮಾತಿದೆ. ರಾಧೆಗೆ ಕೃಷ್ಣ ಗಂಡನಾಗಿಯಂತೂ ಸಿಗಲಿಲ್ಲ. ಮಗುವಾಗಿಯಾದರೂ ಸಿಗಲಿ ಎನ್ನುವ ಆಶಯದಲ್ಲಿ ರಾಧೆ ಗರ್ಭವತಿಯಾಗುವ ಆಶಯದಲ್ಲಿ ಈ ಫೋಟೋಶೂಟ್‌ ಮಾಡಲಾಗಿದೆ. ಇದೊಂದು ಸೊಗಸಾದ ಚಿಂತನೆಯಷ್ಟೇ. ಇಲ್ಲಿ ಪುರಾಣವನ್ನು ತಿರುಚುವ ದುರುದ್ದೇಶ ಇಲ್ಲ.’

ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚ ಮಾತುಗಳಿವು. ಸೆ.17ರ ಆಸುಪಾಸಿನಲ್ಲಿ ಹರ್ಷಿಕಾ ಭುವನ್‌ ದಂಪತಿ ಎರಡನೇ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ಷಿಕಾ ‘ಕೃಷ್ಣನ ಆಗಮನದ ನಿರೀಕ್ಷೆಯಲ್ಲಿರುವ ರಾಧೆ’ ಎಂಬ ಕಾನ್ಸೆಪ್ಟ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

‘ಗರ್ಭವತಿಯಾಗುವ ಸಿಹಿ ಕ್ಷಣಗಳನ್ನು ಕಾಪಿಡುವ ನಿಟ್ಟಿನಲ್ಲಿ ನಾನು ಪ್ರೆಗ್ನೆನ್ಸಿ ಫೋಟೋಶೂಟ್‌ ಮಾಡಿಸುತ್ತೇನೆ. ಇದರಿಂದ ಮುಂದೆ ಮಗುವಾದ ಮೇಲೆ ಅದಕ್ಕೂ ತಾನು ಅಮ್ಮನ ಹೊಟ್ಟೆಯಲ್ಲಿರುವಾಗ ಹೇಗಿದ್ದೆ ಎಂಬ ಸೊಗಸಾದ ಕಲ್ಪನೆ ಮೂಡುತ್ತದೆ’ ಎಂದರು.

ಸ್ನೇಹದ ಬಳಿಕ ವಿವಾಹ

ಇನ್ನು ಮೊದಲ ಮಗುವಿನ ಬಳಿಕ ಇದೀಗ ಎರಡನೇ ಮಗುವನ್ನು ಸ್ವಾಗತಿಸಲು ಸಿದ್ಧರಾಗಿರುವ ಈ ಜೋಡಿ, ತಮ್ಮ ಕುಟುಂಬದಲ್ಲಿ ಹೊಸ ಸಂತಸದ ಕ್ಷಣಗಳನ್ನು ಎದುರು ನೋಡುತ್ತಿದ್ದಾರೆ. ಹರ್ಷಿಕಾ ಮತ್ತು ಭುವನ್ ಅವರು ಹಲವು ವರ್ಷಗಳ ಸ್ನೇಹದ ಬಳಿಕ ವಿವಾಹವಾಗಿದ್ದು, ದಾಂಪತ್ಯ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದಾರೆ. ಇವರಿಗೆ ಈಗಾಗಲೇ ಒಂದು ಮಗು ಇದ್ದು, ಇದೀಗ ಕುಟುಂಬಕ್ಕೆ ಮತ್ತೊಂದು ಹೊಸ ಸದಸ್ಯ ಸೇರುವ ನಿರೀಕ್ಷೆಯಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Toxic: ರಾಧಿಕಾ ಒಂದೇ ಸೆಕೆಂಡ್​ನಲ್ಲಿ ಮಾಡಿದ ಟಾರ್ಗೆಟ್​, ಯಶ್​ 2 ಗಂಟೆ ತಗೊಂಡ್ರು- ಡೆಡಿಕೇಷನ್​ ಕುರಿತು ಯೋಗರಾಜ್​ ಭಟ್​
ತಪ್ಪು ಯಾರದು ಅನ್ನೋದು ಮುಖ್ಯವಲ್ಲ: ಕರಾವಳಿ ವಿವಾದಕ್ಕೆ ರಾಜ್ ಬಿ. ಶೆಟ್ಟಿ ಕ್ಷಮೆ