
1. ‘ಸ್ಟಾರ್‌ಗಳು ಕಿರುತೆರೆ ಬಿಡಿ ಸಂಭಾವನೆ ಕಡಿಮೆ ಮಾಡಿ’ ಎಂಬ ಲೇಖನದ ಚರ್ಚೆಯಾಗಲಿ. ಅದಕ್ಕಿಂತ ಮೊದಲು ಲೇಖನ ಬರೆದ ಆ ನಿರ್ಮಾಪಕ ಯಾರಂತ ಹೆಸರು ಹಾಕಿಕೊಳ್ಳಲಿ. ಹೀಗೆ ಹೆಸರೇ ಹಾಕಿಕೊಳ್ಳದೆ ಏನು ಬೇಕಾದರು ಹೇಳಿದರು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾ?
2. ನನ್ನ ಪ್ರಕಾರ ಆ ನಿರ್ಮಾಪಕರು ಹೇಳಿರುವ ಅಭಿಪ್ರಾಯಗಳು ಸತ್ಯಕ್ಕೆ ದೂರವಾದ ಮಾತುಗಳು. ಈಗ ಚಿತ್ರರಂಗ ಯಾವ ಪರಿಸ್ಥಿತಿಯಲ್ಲಿದೆ, ನಿರ್ಮಾಪಕರ ಸ್ಥಿತಿ ಏನು ಅಂತ ಎಲ್ಲಾ ಹೀರೋಗಳಿಗೂ ಗೊತ್ತು. ಹೀಗಾಗಿ ಇಂತಿಷ್ಟೇ ಸಂಭಾವನೆ ಕೊಡಿ ಅಂತ ಯಾವ ಹೀರೋ ಕೂಡ ಡಿಮ್ಯಾಂಡ್ ಮಾಡುತ್ತಿಲ್ಲ. ‘ಅಡ್ವಾನ್ಸ್ ಕೊಡಿ, ಸಿನಿಮಾ ಬಿಸಿನೆಸ್ ಆದರೆ ಉಳಿದಿದ್ದು ಕೊಡಿ, ಸಿನಿಮಾ ಚೆನ್ನಾಗಿ ಕಲೆಕ್ಷನ್ ಆದರೆ ಏನಾದರು ಸೇರಿಸಿಕೊಡಿ...’ ಹೀಗೆ ಅಡ್ಜಸ್ಟ್‌ಮೆಂಟ್‌ನಲ್ಲಿ ಸಿನಿಮಾಗಳು ನಡೆಯುತ್ತಿವೆ.
3. ಚಿತ್ರರಂಗ ಇರೋದು ನಾಲ್ಕೈದು ಮಂದಿಯಿಂದನಾ? ಯಾಕೆ ಬೇರೆ ಹೀರೋಗಳು, ಕಲಾವಿದರು, ತಂತ್ರಜ್ಞರು ಇಲ್ಲವೇ? ಅವರ ಜೊತೆಗೆ ಯಾಕೆ ಸಿನಿಮಾ ಮಾಡಲ್ಲ? ಗೆದ್ದಿರುವ ಹೀರೋಗಳ ಕಾಲ್‌ಶೀಟ್ ಬೇಕು ಅಂದರೆ ಉಳಿದವರ ಕತೆ ಏನು?
4. ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಯಾವ ಲಾಭವೂ ಇಲ್ಲ. ಸಣ್ಣ ಸಣ್ಣ ನಿರ್ಮಾಪಕರು, ಹೊಸ ಹೊಸ ಕಲಾವಿದರು, ತಂತ್ರಜ್ಞರಿಂದ ಚಿತ್ರರಂಗ ನಡೆಯುತ್ತಿದೆ. ತಾವು ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರು ಎಂದು ಹೇಳಿಕೊಳ್ಳುವವರು ಎಲ್ಲರ ಜೊತೆಗೂ ಸಿನಿಮಾ ಮಾಡಲಿ.
5. ಕ್ಯಾರವ್ಯಾನ್ ವಿಷಯ. ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಕಾಲದಲ್ಲಿ ಶೇ.90 ಚಿತ್ರೀಕರಣ ಸ್ಟುಡಿಯೋಗಳಲ್ಲೇ ನಡೆಯುತ್ತಿದ್ದವು. ಅಲ್ಲಿ ಗ್ರೀನ್ ರೂಮುಗಳಿದ್ದವು. ಅವತ್ತಿಗೆ ಕ್ಯಾರವ್ಯಾನ್ ಬೇಕಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲೆಂದರಲ್ಲಿ ಶೂಟಿಂಗ್ ಮಾಡುತ್ತಿದ್ದರು. ಗೊತ್ತಿಲ್ಲದ ಊರು, ನಗರಗಳಿಗೆ ಹೋಗುತ್ತಿದ್ದೇವೆ. ಆ ಊರುಗಳಲ್ಲಿ ಬಾತ್ ರೂಮು, ವಾಷ್ ರೂಮಿಗೆ ಅಂತ ಯಾರದ್ದೋ ಮನೆಗಳಿಗೆ ಹೋಗಕ್ಕೆ ಆಗುತ್ತದೆಯೇ? ಇಲ್ಲ ಬೀದಿಯಲ್ಲಿ ನಿಂತು ಮಾಡಕ್ಕಾಗುತ್ತಾ? ನಾವು ಬಿಡಿ ಹೆಣ್ಣು ಮಕ್ಕಳ ಪರಿಸ್ಥಿತಿ ಏನು? ಸ್ಟುಡಿಯೋಗಳಲ್ಲಿ, ಹೋಟೆಲ್‌ಗಳಲ್ಲಿ ಶೂಟಿಂಗ್ ಮಾಡುವಾಗ ಯಾರು ಕ್ಯಾರವ್ಯಾನ್ ಕಳಿಸುತ್ತಾರೆ?
6. ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ. ವರ್ಷಕ್ಕೆ ಎಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಬರುತ್ತಿವೆ, ಎಷ್ಟು ಮಂದಿ ವರ್ಷಗಳ ಕಾಲ ಕೂತು ಸಿನಿಮಾ ಮಾಡುತ್ತಿದ್ದಾರೆ ಅಂತ ಲೆಕ್ಕ ಕೊಡಿ. ಇಡೀ ಉದ್ಯಮದ ಹೀರೋಗಳು ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಹೋಗಿಲ್ಲ ತಾನೆ?
- ಹೀಗೆ ತುಂಬಾ ವಿಷಯಗಳಿವೆ ಮಾತಾಡಲು. ಮೊದಲು ಹೆಸರು ಹಾಕಿಕೊಂಡು ಅಭಿಪ್ರಾಯ ವ್ಯಕ್ತಪಡಿಸಲಿ. ಆಗ ಖಂಡಿತವಾಗಿಯೂ ಒಂದು ಒಳ್ಳೆಯ ರೀತಿಯಲ್ಲೇ ಚರ್ಚೆ ಮಾಡೋಣ ಎಂದರು ನೆನಪಿರಲಿ ಪ್ರೇಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.