ಮೆಣಸು, ಕಾಫಿ ಪೌಡರ್, ಜೇನುತುಪ್ಪದ ಜೊತೆ ಲಗ್ನಪತ್ರಿಕೆ ಹಂಚಿದ ಹರ್ಷಿಕಾ-ಭುವನ್​ ಜೋಡಿ!

Published : Aug 05, 2023, 07:09 PM ISTUpdated : Aug 06, 2023, 12:54 PM IST
ಮೆಣಸು, ಕಾಫಿ ಪೌಡರ್, ಜೇನುತುಪ್ಪದ ಜೊತೆ ಲಗ್ನಪತ್ರಿಕೆ ಹಂಚಿದ ಹರ್ಷಿಕಾ-ಭುವನ್​ ಜೋಡಿ!

ಸಾರಾಂಶ

ನಟರಾದ ಹರ್ಷಿಕಾ ಪೂಣಚ್ಚ  ಮತ್ತು ಭುವನ್​ ಪೊನ್ನಣ್ಣ ಅವರ ಮದುವೆ ಇದೇ 24ರಂದು ನಡೆಯಲಿದ್ದು,  ತೋಟದಲ್ಲಿ ಬೆಳೆದ ಮೆಣಸು, ಕಾಫಿ ಪೌಡರ್, ಜೇನುತುಪ್ಪದ ಜೊತೆ ಮದುವೆ ಪತ್ರಿಕೆ ಹಂಚಿದ್ದಾರೆ.   

ಸ್ಯಾಂಡಲ್‌ವುಡ್ ಬ್ಯೂಟಿ ಹರ್ಷಿಕಾ ಪೂಣಚ್ಚ (Harshika Poonacha) ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬಹುಕಾಲದ ಗೆಳೆಯ ಭುವನ್ ಪೊನ್ನಣ್ಣ ಜೊತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.  ತಮ್ಮ ಹುಟ್ಟೂರಿನಲ್ಲೇ ಈ ಜೋಡಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿರಾಜಪೇಟೆಯ ಅಮ್ಮತ್ತಿಯಲ್ಲಿ  ಹರ್ಷಿಕಾ ಮತ್ತು ಭುವನ್​ ಜೋಡಿಯ ಮದುವೆ ಆಗಸ್ಟ್​ 24ರಂದು ನಡೆಯುತ್ತಿದೆ. ಕಳೆದ ವಾರ  ಇಬ್ಬರ ವಿವಾಹದ ಆಮಂತ್ರಣ ಪತ್ರಿಕೆ ಲಭ್ಯವಾಗಿತ್ತು. ಕೊಡವ ಭಾಷೆಯಲ್ಲಿ ಮಂಗಳ ಪತ್ರ ಮುದ್ರಿಸಿರುವುದು ಇದರ ವಿಶೇಷತೆ. ಈಗಾಗಲೇ ಆಮಂತ್ರಣ ಪತ್ರಿಕೆ ಕೊಡುವಲ್ಲಿ ಈ ಜೋಡಿ ನಿರತವಾಗಿದೆ. 

ಇಂದು ಇನ್ನೊಂದು ವಿಶೇಷ ರೀತಿಯಲ್ಲಿ ಡಿಸೈನ್​ ಮಾಡಲಾದ ಲಗ್ನ ಪತ್ರಿಕೆಯನ್ನು  ತಮ್ಮ ತೋಟದಲ್ಲಿ ಬೆಳೆದ ಮೆಣಸು, ಕಾಫಿ ಪೌಡರ್,  ಜೇನುತುಪ್ಪದ ಜೊತೆ ಈ ಜೋಡಿ ಹಂಚಿದ್ದು, ಅದು ವೈರಲ್​ ಆಗಿದೆ. ಈ ಲಗ್ನ ಪತ್ರಿಕೆಯಲ್ಲಿ ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅವರ ಬಾಲ್ಯದ ಚಿತ್ರ ಇರುವುದು ವಿಶೇಷ. ಇದು ಬಾಲ್ಯವಿವಾಹವಲ್ಲ ಎಂದು ತಮಾಷೆಯಾಗಿ ಪತ್ರಿಕೆಯಲ್ಲಿ ಬರೆಯಲಾಗಿದೆ. ಮದುವೆಯ ಮುನ್ನಾ ದಿನವಾದ 23ರಂದು ಕೊಡವ ಸಂಪ್ರದಾಯದ ಊರ್ಕುಡುವ ಸಮಾರಂಭವಿದ್ದರೆ, 24ರ ಬೆಳಿಗ್ಗೆ 10.30ಕ್ಕೆ ಮದುವೆ ಮುಹೂರ್ತ ಇರುವುದಾಗಿ ಲಗ್ನ ಪತ್ರಿಕೆಯಲ್ಲಿ (Wedding card) ತಿಳಿಸಲಾಗಿದೆ. ಈ ಲಗ್ನಪತ್ರಿಕೆಯನ್ನು ತಮ್ಮ ತೋಟದಲ್ಲಿ ಬೆಳೆದ ಮೆಣಸು ಕಾಫಿ ಪೌಡರ್ ಜೇನುತುಪ್ಪದ ಜೊತೆ ಈ ಜೋಡಿ ಹಂಚಿರುವುದು ಕುತೂಹಲಕಾರಿಯಾಗಿದೆ. 

ನಟಿ ಹರ್ಷಕಾ ಪೂಣಚ್ಚ ಮನೆಯಲ್ಲಿ ಆಸ್ತಿಗೆ ಜಗಳ; 'ಯಜಮಾನ' ಸಿನಿಮಾ ತೋರಿಸಿದ ತಾತ!
 
ಹರ್ಷಿಕಾ ಪೂಣಚ್ಚ 2008ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. PUC ಸಿನಿಮಾ ಮೂಲಕ ಹರ್ಷಿಕಾ ಮಿಂಚಿದರು. ಬಳಿಕ  ಕೊಡುವ ಸಿನಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭೋಜಪುರಿ ಮತ್ತು ತಮಿಳು ಸಿನಿಮಾಗಳಲ್ಲಿ ಹರ್ಷಿಕಾ ಮಿಂಚಿದ್ದಾರೆ. ಕೊನೆಯದಾಗಿ ಹರ್ಷಿಕಾ ಬೇರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭುವನ್ ಪೊನ್ನಣ್ಣ (Bhuvan Ponnanna) ಸಿನಿಮಾ ಜೀವನದ ಬಗ್ಗೆ ಹೇಳುವುದಾದರೆ, ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. 2010ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಕೂಲ್ ಸಖತ್ ಹಾಟ್ ಮಗ, ಕುಚಿಕು ಕುಚಿಕು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ರಾಂದವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ಮತ್ತೆ ಭುವನ್ ತೆರೆಮೇಲೆ ಕಾಣಿಸಿಕೊಂಡಿಲ್ಲ. ಇದೀಗ ಹರ್ಷಿಕಾ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. 

ಈ ಜೋಡಿಯ ಬಗ್ಗೆ ಇನ್ನಷ್ಟು ಹೇಳುವುದಾದರೆ, ಇಬ್ಬರೂ  ಕೊಡಗಿನವರೇ. ಚಿತ್ರರಂಗ ಮಾತ್ರವಲ್ಲದೇ ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್‌ಡೌನ್ (Lockdown) ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದಾರೆ.  ಆಗಲೇ ಇಬ್ಬರ ನಡುವೆ ಪ್ರೀತಿ ಹಬ್ಬಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಜೋಡಿ ಮಾತ್ರ ಗಪ್​ಚುಪ್​ ಆಗಿತ್ತು.  ಈಗ ಅವರಿಬ್ಬರು ವೈವಾಹಿಕ ಜೀವನ ಆರಂಭಿಸುವ ಸಿದ್ಧತೆಯಲಿದ್ದಾರೆ.  ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ ಸಮಾರಂಭ ನಡೆದಿದೆ. ಇದಾದ ಬಳಿಕ ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. 

'ಬೇರ' ನಿಜ ಅರ್ಥದ ಕರಾ‍ವಳಿ ಫೈಲ್ಸ್: ಹರ್ಷಿಕಾ ಪೂಣಚ್ಚ ಬಿಚ್ಚಿಟ್ಟ ಸತ್ಯಗಳು

ಅಂದಹಾಗೆ, ಹರ್ಷಿಕಾ ಪೂಣಚ್ಚ ಅವರು 1993 ಮೇ 1ರಂದು ಹುಟ್ಟಿದ್ದು,  ಇವರ ವಯಸ್ಸು ಈಗ 30. ಭುವನ್ ಪೊನ್ನಣ್ಣ ಅವರು 1989 ಡಿಸೆಂಬರ್ 30ರಂದು ಹುಟ್ಟಿದ್ದು ಇವರ ವಯಸ್ಸು ಈಗ 34. ಭುವನ್​ ಹರ್ಷಿಕಾಕ್ಕಿಂತ 4 ವರ್ಷ ದೊಡ್ಡವರು.
 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?