ಪ್ಯಾನ್ ಇಂಡಿಯಾದಿಂದ ದೇಹ, ದಾಡಿ ಬೆಳೆಸ್ತಿದ್ದಾರೆ ನಟರು, ಇದೊಂದು ಹುಚ್ಚು: ಕಲಾವಿದರಿಗೆ ಹಂಸಲೇಖ ಮಾತಿನೇಟು

By Roopa Hegde  |  First Published Jul 16, 2024, 1:31 PM IST

ನಾದಬ್ರಹ್ಮ ಹಂಸಲೇಖ, ಫ್ಯಾನ್ ಇಂಡಿಯಾ ಬಗ್ಗೆ ಗರಂ ಆಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಫ್ಯಾನ್ ಇಂಡಿಯಾ ಹಿಂದೆ ಓಡುವ ನಾಯಕ ನಟರಿಗೆ ಛಾಟಿ ಏಟು ನೀಡಿದ್ದಾರೆ. ಎಲ್ಲೇ ಸುತ್ತಿದ್ರೂ ಇಲ್ಲಿಗೆ ಬರ್ಲೇಬೇಕು ಎನ್ನುವ ಮೂಲಕ, ಫ್ಯಾನ್ ಇಂಡಿಯಾವನ್ನು ಖಂಡಿಸಿದ್ದಾರೆ.
 


Pan India.. ಸದ್ಯ ಟ್ರೆಂಡ್ ನಲ್ಲಿರುವ ವಿಷ್ಯ. ಕನ್ನಡ ಸೇರಿ ಎಲ್ಲ ಭಾಷೆಯಲ್ಲಿಪ್ಯಾನ್ ಇಂಡಿಯಾ ಕ್ರೇಜ್ ಹೆಚ್ಚಾಗಿದೆ. ಆದ್ರೆ ಖ್ಯಾತ ಸಂಗೀತ ನಿರ್ದೇಶದ ಹಂಸಲೇಖ ಅವರಿಗೆ ಯಾಕೋ ಪ್ಯಾನ್ ಇಂಡಿಯಾ ಇಷ್ಟವಾದಂತಿಲ್ಲ. ಅವರು ತಮ್ಮ ಅಭಿಪ್ರಾಯವನ್ನು ಸ್ವಲ್ಪ ಖಡಕ್ ಆಗಿ ಎಲ್ಲರ ಮುಂದಿಟ್ಟಿದ್ದಾರೆ.ಪ್ಯಾನ್ ಇಂಡಿಯಾ ಬಗ್ಗೆ ಮಾತನಾಡಿದ ಹಂಸಲೇಖ, ಸೂಪರ್ ಸ್ಟಾರ್ ಯಶ್ ಸೇರಿ ಪ್ಯಾನ್ ಇಂಡಿಯಾ ಹಿಂದೆ ಹೊರಟ ಕಲಾವಿದರಿಗೆ ಏಟು ನೀಡಿದಂತಿದೆ.

ಇಂದ್ರಜಿತ್ ಲಂಕೇಶ್ (Indrajit Lankesh) ಮಗ ಸಬರ್ಜಿತ್ ಲಂಕೇಶ್ ನಾಯಕ ನಟನಾಗಿ ಕಾನಿಸಿಕೊಂಡಿರುವ ಗೌರಿ ಚಿತ್ರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಹಂಸಲೇಖ (Hamsalekha), ಪ್ಯಾನ್ ಇಂಡಿಯಾ ಬಗ್ಗೆ ಮಾತನಾಡಿದ್ದಾರೆ. 

Latest Videos

undefined

ಪತ್ನಿ ವಿಜಯಲಕ್ಷ್ಮಿ ಮಾತು ಕೇಳಿ ದರ್ಶನ್ ಶಾಕ್; ನಿಜಕ್ಕೂ ಜಾಮೀನು ಸಿಗಲ್ವಾ?

ಫ್ಯಾನ್ ಇಂಡಿಯಾ (Fan India) ಕನ್ನಡ ಬೇರನ್ನು ಕತ್ತರಿಸಿದೆ: ನಾದಬ್ರಹ್ಮ ಹಂಸಲೇಖ,ಪ್ಯಾನ್ ಇಂಡಿಯಾ ಅನ್ನೋದು ಹುಚ್ಚು ಎಂದಿದ್ದಾರೆ. ಕನ್ನಡ ಸೂಪರ್ ಸ್ಟಾರ್‌ಗಳಿಗೆ ಕನ್ನಡ ಬೇರುಗಳು ಕಟ್ ಆಗುತ್ತಿವೆ. ಕನ್ನಡದ ಜೊತೆ ಇಲ್ಲಿನ ಬೇರಿನ ಕನೆಕ್ಷನ್ ಇತ್ತು. ಪ್ಯಾನ್ ಇಂಡಿಯಾದಿಂದ ಅದು ಕಟ್ ಆಗಿದೆ ಎಂದಿದ್ದಾರೆ ನಾದಬ್ರಹ್ಮ.ಪ್ಯಾನ್ ಇಂಡಿಯಾ ಮೂಲಕ, ಭಾರತದಾದ್ಯಂತ ಕನ್ನಡದ ಕಲಾವಿದರು ಖ್ಯಾತ ನಾಯಕರಾಗ್ತಾರೆ ಅನ್ನೋದು ಒಂದು ಭ್ರಮೆ ಎಂಬುವುದು ಪ್ರೇಮಲೋಕ ಹಾಡುಗಳ ರಚನೆಕಾರನ ಅಭಿಪ್ರಾಯ. 

ದಕ್ಷಿಣದ ಯಾವುದಾದ್ರೂ ಹಿರೋಯಿನ್, ಉತ್ತರಕ್ಕೆ ಹೋಗಿ 20 ವರ್ಷ ಬದುಕಬಹುದೇ ಹೊರತು, ರಜನಿಕಾಂತ್, ಕಮಲಹಾಸನ್, ಮೋಹನ್ ಲಾಲ್ ಸೇರಿ ದಕ್ಷಿಣದ ಯಾವುದೇ ಸೂಪರ್ ಸ್ಟಾರ್ಸ್, ಬಾಂಬೆಗೆ ಹೋದ್ರೆ ಎರಡು ವರ್ಷ ಇರೋದಕ್ಕೆ ಆಗಲ್ಲ. ಅವರು ತವರಿಗೆ ವಾಪಸ್ ಬರ್ತಾರೆ ಎಂದು ಹಂಸಲೇಖ ಹೇಳಿದ್ದಾರೆ. ನಮ್ಮ ಹೀರೋಗಳು ಹನಿಮೂನ್ ತರ, ಪ್ಯಾನ್ ಇಂಡಿಯಾ ಮೂಲಕ ಒಂದು ಬಾರಿ ಇಂಡಿಯಾನೆಲ್ಲ ಸುತ್ತಾಕಿಕೊಂಡು ಬರ್ಲಿ. ಆದ್ರೆ ಏಲ್ಲಿ ಸುತ್ತಿದ್ರೂ ಕನ್ನಡಕ್ಕೆ ಬರ್ಲೇಬೇಕಾಗುತ್ತೆ ಎನ್ನುತ್ತಾರೆ ಹಂಸಲೇಖ. 

ನಮ್ಮಲ್ಲಿ ಎಷ್ಟೋ ಪ್ರಾದೇಶಿಕ ಭಾಷೆ, ಸಿನಿಮಾಗಳಿವೆ. ಆದ್ರೆ ಅದರಲ್ಲಿ ಅರ್ಥಗರ್ಭಿತ ಶೀರ್ಷಿಕೆ ಸ್ಯಾಂಡಲ್ವುಡ್‌ಗಿದೆ. ಸ್ಯಾಂಡಲ್ವುಡ್ ಅನ್ನು ಬಾಲಿವುಡ್‌ಗೆ ಹೋಲಿಸಲು ಸಾಧ್ಯವಿಲ್ಲ. ಟಾಲಿವುಡ್, ಕಾಲಿವುಡ್‌ಗೆ ಕೂಡ ಸ್ಯಾಂಡಲ್ವುಡ್ ಕಂಪೇರ್ ಮಾಡಲು ಸಾಧ್ಯವಿಲ್ಲ. ಸ್ಯಾಂಡಲ್ವುಡ್‌ಗೆ ಒಂದು ಗಂಧದ ಪರಿಮಳ ಇದೆ ಎಂದು ಹಂಸಲೇಖ ಹೇಳಿದ್ದಾರೆ. ಗಂಧದ ಮರದ ಹಾಗೆ ಎಲ್ಲರನ್ನೂ ಒಳಗೊಂಡು ಬೆಳೆಯುವುದೇ ಸ್ಯಾಂಡಲ್ವುಡ್. ನಾವೊಬ್ಬರೇ ಬೆಳೆಯೋದಲ್ಲ ಎನ್ನುವ ಮೂಲಕ ಅನೇಕ ಕಲಾವಿದರಿಗೆ  ಚಡಿಯೇಟು ನೀಡಿದ್ದಾರೆ.

ಸ್ಯಾಂಡಲ್ವುಡ್‌ಗೆ ಒಂದು ಪರಂಪರೆ ಇದೆ. ಭಾಷೆಯಿಂದಲೇ ಕನ್ನಡ ಚಿತ್ರರಂಗ ಬೆಳೆದ ಪರಂಪರೆ ಇದೆ. ಆ ಪರಂಪರೆಯನ್ನು ಬಿಟ್ಟು ನೀವುಪ್ಯಾನ್ ಇಂಡಿಯಾಕ್ಕೆ ಹೋದ್ರೆ ಹೇಗೆ? ನೀವು ಹೋಗಿ ಬನ್ನಿ ನಾವು ಬೇಡ ಎನ್ನಲ್ಲ ಎಂದ ಹಂಸಲೇಖ, ಪ್ಯಾನ್ ಇಂಡಿಯಾದಿಂದ ವ್ಯಾಪಾರ ಸ್ವಲ್ಪ ಜಾಸ್ತಿ ಆಗುತ್ತೆ. ದಾಡಿ ಜಾಸ್ತಿ ಬೆಳೆಯುತ್ತೆ ಅಷ್ಟೇ ಹೊರತು ಇನ್ನೇನು ಬೆಳೆಯಲ್ಲ ಎಂದಿದ್ದಾರೆ ಹಂಸಲೇಖ.ಪ್ಯಾನ್ ಇಂಡಿಯಾದಿಂದ ಬಾಡಿ ಹಾಗೂ ದಾಡಿ ಮಾತ್ರ ಬೆಳೆಯುತ್ತೆ ಎನ್ನುವ ಮೂಲಕ,ಪ್ಯಾನ್ ಇಂಡಿಯಾ ಹಿಂದೆ ಓಡ್ತಿರುವ ನಾಯಕರನ್ನು ಎಚ್ಚರಿಸಿದ್ದಾರೆ. 

41 ವರ್ಷಕ್ಕೆ ಕಾಲಿಟ್ಟ ಕತ್ರಿನಾ ಕೈಫ್; ಅಂಡಾಣು ಫ್ರೀಜ್‌ ಮಾಡಿಟ್ಟಿದ್ದೀರಾ ಎಂದ ನೆಟ್ಟಿಗರು

ಹಿಂದೆ ಒಂದೇ ಭಾಷೆಯಲ್ಲಿ ಸಿನಿಮಾ ತೆರೆಗೆ ಬರ್ತಾ ಇತ್ತು. ಆದ್ರೀಗ ಕನ್ನಡ ಸಿನಿಮಾ, ಭಾರತದಾದ್ಯಂತ ಬಿಡುಗಡೆಯಾಗುವ ಜೊತೆಗೆ ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬರ್ತಿದೆ. ಬಹುತೇಕ ಎಲ್ಲ ಚಿತ್ರರಂಗದಲ್ಲಿ ಈ ಪ್ಯಾನ್ ಇಂಡಿಯಾ ಪ್ರಸಿದ್ಧಿ ಪಡೆದಿದೆ. ಕನ್ನಡದಲ್ಲಿ ಕಾಂತಾರಾ, ಕೆಜಿಎಫ್, ವಿಕ್ರಾಂತ್ ರೋಣ, ಕಬ್ಜಾ ಸೇರಿದಂತೆ ಅನೇಕ ಚಿತ್ರಗಳುಪ್ಯಾನ್ ಇಂಡಿಯಾ ಪಟ್ಟಿಗೆ ಸೇರಿವೆ.  

click me!