: ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ ನಟಿ ಭಾವನಾ ಲವ್ ಸ್ಟೋರಿ. ನಟ ಗಣೇಶ್ ಸಿನಿಮಾ ರಿಲೀಸ್ ಸಮಯದಲ್ಲಿ ಅರಳಿದ ಪ್ರೀತಿ...
ಬಹುಭಾಷಾ ನಟಿ ಭಾವನಾ ಮತ್ತು ನವೀನ್ ಸಖತ್ ಸಿಂಪಲ್ ಆಗಿ ಕೇರಳದಲ್ಲಿ ಮದುವೆ ಮಾಡಿಕೊಂಡ ವಿಚಾರ ಎಲ್ಲರಿಗೂ ಗೊತ್ತಿದೆ. ಸಿನಿಮಾ ಸಿನಿಮಾ ಅಂತ ಫುಲ್ ಬ್ಯುಸಿಯಾಗಿದ್ದ ನಟಿ ಯಾವ ಗ್ಯಾಪ್‌ನಲ್ಲಿ ಲವ್ ಮಾಡಿದರು? ಬೆಂಗಳೂರಿನ ಹುಡುಗ ಹೇಗೆ ಸಿಕ್ಕಿದ್ದು? ಲವ್ ಆಗಲು ಕಾರಣ ಏನು ಎಂದು ಮೊದಲ ಸಲ ರಿವೀಲ್ ಮಾಡಿದ್ದಾರೆ.
'ನಮ್ದು ಲವ್ ಮ್ಯಾರೇಜ್. ನಮ್ಮಿಬ್ಬರಲ್ಲಿ ಯಾರು ಪ್ರಪೋಸ್ ಮಾಡಿದರು ಎಂದು ಹೇಳುವುದು ತುಂಬಾನೇ ಕಷ್ಟ. ಇಬ್ಬರೂ ಒಟ್ಟಿಗೆ ಪ್ರಪೋಸ್ ಮಾಡಿಕೊಂಡೆವು ಅಂದುಕೊಳ್ಳಿ. ಇದಕ್ಕೂ ಮುನ್ನ ನನಗೆ ಒಂದು ಲವ್ ಫೇಲ್ಯೂಯರ್ ಆಗಿತ್ತು. ಜಾಕಿ ಚಿತ್ರದ ಮೂಲಕ ನಾನು ಮೊದಲು ಕನ್ನಡ ಸಿನಿಮಾ ಮಾಡಿದ್ದು. ಎರಡನೇ ಸಿನಿಮಾ ಸುದೀಪ್ ಜೊತೆ ಮಾಡುವಾಗಲೇ ನನಗೆ ಗಣೇಶ್ ಜೊತೆ ರೋಮಿಯೋ ಸಿನಿಮಾ ಅವಕಾಶ ಸಿಕ್ಕಿತ್ತು. ಈ ವೇಳೆ ರೋಮಿಯೋ ಚಿತ್ರದ ಕಥೆ ಹೇಳಲು ನವೀನ್ ನನಗೆ ಕಾಲ್ ಮಾಡಿದ್ದರು. ಆ ಸಮಯದಲ್ಲಿ ಕೇರಳದಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ಹೀಗಾಗಿ ಇವರು ಅಲ್ಲಿಗೆ ಬಂದು ಕಥೆ ಹೇಳಿದರು. ಅದೇ ಸಮದಯಲ್ಲಿ ನಾನು ಬ್ರೇಕಪ್ ಮಾಡಿಕೊಂಡು ಡಿಪ್ರೆಶನ್‌ನಲ್ಲಿದ್ದೆ. ಸಿನಿಮಾ ಚಿತ್ರೀಕರಣದ ವೇಳೆ ನವೀನ್ ನನಗೆ ಒಳ್ಳೆಯ ಸ್ನೇಹಿತರಾಗಿಬಿಟ್ಟರು. ಅದೇ ಸಮದಯಲ್ಲಿ ಅವರಿಗೂ ಕೂಡ ಒಂದು ಲವ್ ಬ್ರೇಕಪ್ ಆಯ್ತು. ಇಬ್ಬರೂ ಒಂದೇ ಫೀಲ್‌ನಲ್ಲಿ ಇದ್ವಿ' ಎಂದು ತಮಿಳಿನ ಬಿಹೈಂಡ್‌ವುಡ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಭಾವನಾ ಮೆನನ್ ಮಾತನಾಡಿದ್ದಾರೆ.
ಅಬ್ಬಬ್ಬಾ! 'ಯಜಮಾನ' ಸೀರಿಯಲ್ ನಟಿ ಮಧುಶ್ರೀ ಭೈರಪ್ಪ ಸಂಭಾವನೆ ಕೇಳಿ ಎಲ್ಲರೂ ಶಾಕ್ ಶಾಕ್.....
' ಬಳಿಕ ನಮ್ಮ ಸ್ನೇಹ ಮುಂದುವರೆಯಿತ್ತು. ನನಗೆ ಆಗ ಯಾವುದೇ ಮದುವೆ ಆಲೋಚನೆ ಇರಲಿಲ್ಲ. ಎಲ್ಲರೂ ಮದುವೆ ಮಕ್ಕಳು ಅಂತ ಯೊಚನೆ ಮಾಡುತ್ತಿದ್ದರೆ ನಾನು ವಿರುದ್ಧವಾಗಿದ್ದೆ. ಲವ್ ಓಕೆ ಮದುವೆ ಯಾಕೆ ಎನ್ನುವ ಲೆಕ್ಕಾಚಾರ ಮಾಡುತ್ತಿದ್ದೆ. ಆಗ ನನ್ನ ಗಮನ ಸಂಪೂರ್ಣವಾಗಿ ಸಿನಿಮಾ ಮೇಲೆ ಇತ್ತು. ನನ್ನ ಆಲೋಚನೆಗಳು ಆಗಾಗ ಬದಲಾಗುತ್ತದೆ. ನಮ್ಮ ಜೀವನ ಮುಖ್ಯ ಎನಿಸಿದರೆ ಮತ್ತೊಮ್ಮೆ ಲೈಫ್ ಮುಖ್ಯ ಎನಿಸುತ್ತಿರಲಿಲ್ಲ. ಹೀಗೆ ನನ್ನದು ಬಹಳ ಕನ್ಫ್ಯೂಸ್ ವ್ಯಕ್ತಿತ್ವ. ನನ್ನ ಪತಿ ನನಗೆ ಬೆಂಬಲವಾಗಿ ನಿಲ್ಲುತ್ತಾರೆ ನನ್ನ ವ್ಯಕ್ತಿತ್ವಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಹಣ ಬಹಳ ಮುಖ್ಯ. ಕೋಟಿ ಕೋಟಿ ಸಂಪದಾನೆ ಮಾಡಿದವರು ಹಣವೇ ಎಲ್ಲಾ ಅಲ್ಲ ಹಣ ಹಿಂದೆ ಹೋಗಬೇಡಿ ಎಂದು ಉಪದೇಶ ಮಾಡುತ್ತಾರೆ ಅದನ್ನು ನೋಡಿಕೊಂಡು ನಗುತ್ತೀನಿ' ಎಂದು ಭಾವನಾ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್ ಕೊಟ್ಟ ಅಶ್ವಿನಿ!