ರಸ-ವಿರಸ ಎರಡೂ ಇಲ್ಲದ ಬಾಳು ನೀರಸ ಅನ್ನಿಸ್ತಾ? ಮಗು ಮಾಡಿಕೊಳ್ಳುವ ಬಗ್ಗೆ ಕಿತ್ತಾಟ ಆಯ್ತಾ?

Published : Mar 20, 2025, 04:20 PM ISTUpdated : Mar 20, 2025, 04:27 PM IST
ರಸ-ವಿರಸ ಎರಡೂ ಇಲ್ಲದ ಬಾಳು ನೀರಸ ಅನ್ನಿಸ್ತಾ? ಮಗು ಮಾಡಿಕೊಳ್ಳುವ ಬಗ್ಗೆ ಕಿತ್ತಾಟ ಆಯ್ತಾ?

ಸಾರಾಂಶ

ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಆಗಲು ಶುರುವಾಗಿ ಬಹಳಷ್ಟು ಕಾಲವೇ ಕಳೆದು ಹೋಗಿತ್ತು. ಆದರೆ, ಸಾಮಾನ್ಯವಾಗಿ ಇರುವಂತೆ ನಮ್ಮಿಬ್ಬರ ಮಧ್ಯೆ ಪದೇಪದೇ ಜಗಳ ಇರಲಿಲ್ಲ. ರಸ-ವಿರಸಗಳ ವಿಲೇವಾರಿ..

ಹೌದು, ಕನ್ನಡನಾಡಿನ ರಾಪರ್, ಆಕ್ಟರ್ ಹಾಗೂ ಮ್ಯೂಸಿಕ್ ಕಂಪೋಸರ್ ಚಂದನ್ ಶೆಟ್ಟಿಯವರು (Chandan Shetty) ಅದೇ ಸಂಗತಿಯ ಬಗ್ಗೆ ಮತ್ತೆ ಮಾತನ್ನಾಡಿದ್ದಾರೆ. ಅದೇ ಸಂಗತಿ ಅಂದ್ರೆ ಮತ್ತೇನಲ್ಲ, ನಿವೇದಿತಾ ಗೌಡ (Niveditha Gowda) ಜೊತೆಗಿನ ಡಿವೋರ್ಸ್. ಜನರಿಗೆ ಅವರಿಬ್ಬರ ವೈಯಕ್ತಿಕ ಜೀವನದ ಬಗ್ಗೆ ಅದ್ಯಾಕೆ ಅಷ್ಟು ಆಸಕ್ತಿಯೋ ಏನೋ ಗೊತ್ತಿಲ್ಲ! ಅವರಿಬ್ಬರಲ್ಲಿ ಯಾರೇ ಸಿಕ್ಕರೂ, ಕಣ್ಣಿಗೆ ಕಂಡರೂ, ಸಿನಿಮಾ ಪ್ರೆಸ್‌ಮೀಟ್‌ ಇದ್ದರೂ ಮೊದಲು ಅಥವಾ ಕೊನೆಗೆ ಕೇಳುವುದು ಅದೇ ಪ್ರಶ್ನೆ. ಅವರಿಗೂ ಸಾಕಾಗಿ ಹೋಗಿದೆಯಂತೆ..!

ಇತ್ತೀಚೆಗೆ ಚಂದನ್ ನಟನೆಯ 'ಸೂತ್ರಧಾರಿ' ಚಿತ್ರದ ಪ್ರೆಸ್‌ಮೀಟ್ ಆಯ್ತು. ಅದರಲ್ಲಿ ಕೂಡ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಚಂದನ್‌ ಶೆಟ್ಟಿ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ. 'ನಮ್ಮಿಬ್ಬರ ಮಧ್ಯೆ ಅದೇನು ನಡೆಯಿತು ಎಂಬುದು ನಮಗಿಬ್ಬರಿಗೇ ಗೊತ್ತು. ಅದನ್ನು ಯಾರಿಗೂ ಹೇಳುವ ಅಗತ್ಯವಿಲ್ಲ. ಲವ್, ಮದುವೆ ನಡೆದಂತೆ ಡಿವೋರ್ಸ್ ಕೂಡ ಆಯ್ತು. ಅದ್ಯಾವುದನ್ನೂ ನಾವೀಗ ಸಾರ್ವಜನಿಕವಾಗಿ ಚರ್ಚೆ ಮಾಡಲು ಬಯಸೋದಿಲ್ಲ. ಆದರೆ, ಒಂದಂತೂ ಸತ್ಯ, ನಮ್ಮಿಬ್ಬರ ಮಧ್ಯೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಖಂಡಿತವಾಗಿಯೂ ಡಿವೋರ್ಸ್ ಆಗಿದ್ದಲ್ಲ. 

ಚಂದನ್ ಶಟ್ಟಿ-ಸಂಜನಾ ಆನಂದ್‌ ಗಾಸಿಪ್: ಕ್ಲಾರಿಟಿ ಬಳಿಕವೂ ಬರುತ್ತಿದೆ ಕಾಮೆಂಟ್.. ಯಾಕೆ ಹೀಗೆ..!?

ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಸಮಸ್ಯೆ ಇತ್ತು, ಸಾಕಷ್ಟು ಸಮಯ ತೆಗೆದುಕೊಂಡರೂ ನಮ್ಮಿಬ್ಬರ ಮಧ್ಯೆ ಮತ್ತೆ ಆಪ್ತತೆ ಮೂಡಲೇ ಇಲ್ಲ. ಆದರೆ, ವಿರಸ ಕೂಡ ಇರಲಿಲ್ಲ.. ರಸ-ವಿರಸ ಎರಡೂ ಇಲ್ಲದ ಬಾಳು ನೀರಸ ಎನ್ನಿಸ್ತು. ಆ ಕಾರಣಕ್ಕೆ ಡಿವೋರ್ಸ್ ಆಯ್ತು.. ಆ ಬಗ್ಗೆ ಈಗ ಬೇಸರವೂ ಇಲ್ಲ ಖುಷಿಯೂ ಇಲ್ಲ. ಆ ಬಗ್ಗೆ ಮತ್ತೆಮತ್ತೆ ಮಾತನ್ನಾಡಲು ಇಷ್ಟವೂ ಇಲ್ಲ. ಆದರೆ, ಪ್ರಶ್ನೆ ಕೇಳುವವರ ಬಗ್ಗೆ ಬೇಸರವೂ ಇಲ್ಲ. ಏಕೆಂದರೆ, ಅವರಿಗೆ ಆ ಬಗ್ಗೆ ಕ್ಲಾರಿಟಿ ಅಥವಾ ಸಮಾಧಾನ ಆಗುವಂತಹ ಉತ್ತರ ಬೇಕಾಗಿರಬಹುದು. ಆದರೆ, ಯಾವ ಉತ್ತರದಿಮದ ಅವರಿಗೆ ಸಮಾಧಾನ ಆಗಬಹುದು ಎಂಬ ಕ್ಲಾರಿಟಿ ನನಗಿಲ್ಲ. 

ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಆಗಲು ಶುರುವಾಗಿ ಬಹಳಷ್ಟು ಕಾಲವೇ ಕಳೆದು ಹೋಗಿತ್ತು. ಆದರೆ, ಸಾಮಾನ್ಯವಾಗಿ ಇರುವಂತೆ ನಮ್ಮಿಬ್ಬರ ಮಧ್ಯೆ ಪದೇಪದೇ ಜಗಳ ಇರಲಿಲ್ಲ. ರಸ-ವಿರಸಗಳ ವಿಲೇವಾರಿ ಕೂಡ ಇರಲಿಲ್ಲ. ಹೀಗಾಗಿ ಸಾಕಷ್ಟು ಕಾಲ ಆರಾಮವಾಗಿಯೇ ಕಳೆದು ಹೋಯ್ತು. ಆದರೆ, ಎಷ್ಟು ದಿನ ಹಾಗೇ ಇರೋದಕ್ಕೆ ಆಗುತ್ತೆ? ಸಹಜವಾಗಿಯೇ ಇಬ್ಬರೂ ವಿಚ್ಛೇದನನ ನಿರ್ಧಾರ ತೆಗೆದುಕೊಳ್ಳಲೇಬೇಕಾಯ್ತು. ಆದರೆ, ಬಹಳಷ್ಟು ಕೇಸ್‌ಗಳಂತೆ ನಮ್ಮಿಬ್ಬರಲ್ಲಿ ಜಗಳ ಇರಲಿಲಲ, ಜೀವನಾಂಶದ ಸಮಸ್ಯೆಯೂ ಇರಲಿಲ್ಲ. ಹೀಗಾಗಿ ಎಲ್ಲವೂ ಫಟಾಫಟ್ ಅಂತ ಮಿಗಿದುಹೋಯ್ತು.' ಎಂದಿದ್ದಾರೆ ಚಂದನ್ ಶೆಟ್ಟಿ. 

ಹಾರ್ಮೋನ್ ಇಂಜೆಕ್ಷನ್‌ ಗಾಸಿಪ್‌ ಸುತ್ಕೊಂಡ ಈ ಬಾಲ ನಟಿ 16 ವರ್ಷಕ್ಕೇ ಸ್ಟಾರ್ ಹೀರೋಯಿನ್!.. ಗೆಸ್ ಮಾಡ್ತೀರಾ?

ಒಟ್ಟಿನಲ್ಲಿ ಹೇಳಬೇಕು ಎಂದರೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ರಿಯಲ್ ಕಾರಣ, ಮಗು ಮಾಡಿಕೊಳ್ಳುವ ವಿಚಾರದ ಬಗ್ಗೆ ಅಲ್ಲ ಎಂಬ ಕ್ಲಾರಿಟಿಯನ್ನು ಸ್ವತಃ ಚಂದನ್ ಶೆಟ್ಟಿ ಕೊಟ್ಟಿದ್ದಾರೆ. ಅದೇನು ಕಾರಣವೋ ಏನೋ ಒಟ್ಟಿನಲ್ಲಿ ಬೇರೆಯವರು ಅಂದುಕೊಳ್ಳದ್ದು, ಅವರಿಬ್ಬರೂ ಅಂದುಕೊಂಡಿದ್ದು ಆಗಿದೆ. ಇಬ್ಬರೂ ಚೆನ್ನಾಗಿದ್ದರೆ ಅಷ್ಟೇ ಸಾಕಲ್ಲವೇ? ಇನ್ನೇನು ಬೇಕು ಸಮಾಜಕ್ಕೆ ಹಾಗೂ ಸೋಷಿಯಲ್ ಮೀಡಿಯಾಕ್ಕೆ? 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?