Gowli Action Scenes: 35 ಲಕ್ಷ ವೆಚ್ಚದಲ್ಲಿ ಗೌಳಿ ಸಾಹಸ ದೃಶ್ಯ ಶೂಟಿಂಗ್

Published : Dec 24, 2021, 04:06 PM IST
Gowli Action Scenes: 35 ಲಕ್ಷ ವೆಚ್ಚದಲ್ಲಿ ಗೌಳಿ ಸಾಹಸ ದೃಶ್ಯ ಶೂಟಿಂಗ್

ಸಾರಾಂಶ

‘ಗೌಳಿ’ ಚಿತ್ರಕ್ಕೆ 35 ಲಕ್ಷ ವೆಚ್ಚದಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆದು ಚಿತ್ರೀಕರಣ

ನಟ ಶ್ರೀನಗರ ಕಿಟ್ಟಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿ ಕೊಳ್ಳುತ್ತಿರುವ ‘ಗೌಳಿ’ ಚಿತ್ರಕ್ಕೆ 35 ಲಕ್ಷ ವೆಚ್ಚದಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ
ಮಾಡಿಕೊಳ್ಳಲಾಯಿತು. ಈ ಸಾಹಸ ಸನ್ನಿವೇಶಗಳಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೆ ಚಿತ್ರದ ನಿರ್ಮಾಪಕ ರಘು ಸಿಂಗಂ ಅವರು ಜೀವ
ವಿಮೆ ಮಾಡಿಸಿದ ನಂತರವೇ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಲಾಯಿತು. ಸೂರ ನಿರ್ದೇಶನದ ಚಿತ್ರವಿದು. ನೆಲಮಂಗಲ
ಬಳಿಯ ಅರಿಷಿಣಕುಂಟೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಕಟಾವಿಗೆ ಬಂದಿದ್ದ 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆದು ಚಿತ್ರೀಕರಣಕ್ಕೆ ಬಳಸಿಕೊಂಡಿರುವುದು ವಿಶೇಷ. 130ಕ್ಕೂ ಹೆಚ್ಚು ಸಾಹಸ ಕಲಾವಿದರು ಹಾಗೂ ಫೈಟರ್ಸ್‌ಗಳು ಈ ಸನ್ನಿವೇಶದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.

‘ನಾನು ಎಲ್ಲಾ ಸಾಹಸ ಕಲಾವಿದರಿಗೆ ಜೀವ ವಿಮೆ ಮಾಡಿಸಿದ ಮೇಲೆ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ ಮಾಡಿಸಲಾಗಿದೆ’ ಎನ್ನುತ್ತಾರೆ
ನಿರ್ಮಾಪಕರು. ವಿಕ್ರಂ ಮೋರ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ಯಶ್ ಶೆಟ್ಟಿ ಗುಂಪಿನ ನಡುವೆ
ಹೊಡೆದಾಡುವ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಳ್ಳಲಾಯಿತು.

ಹಾಲು ಮಾರುವವನ ಕೈಯಲ್ಲಿ ರಕ್ತಸಿಕ್ತ ಕೊಡಲಿ: ಕುತೂಹಲ ಮೂಡಿಸಿದ ಗೌಳಿ

ಶ್ರೀನಗರ ಕಿಟ್ಟಿನಟನೆಯ ‘ಗೌಳಿ ಚಿತ್ರಕ್ಕೆ ಸೆಪ್ಟೆಂಬರ್‌ನಲ್ಲಿ ಅದ್ದೂರಿಯಾಗಿ ಮುಹೂರ್ತ ನಡೆದಿತ್ತು. ರಘು ಸಿಂಗಮ್‌ ನಿರ್ಮಿಸುತ್ತಿರುವ ಈ ಚಿತ್ರವನ್ನು ಸೂರ ನಿರ್ದೇಶನ ಮಾಡುತ್ತಿದ್ದಾರೆ. ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ಶ್ರೀನಗರ ಕಿಟ್ಟಿತುಂಬಾ ರಗ್‌್ಡ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ನಾನು ಇಲ್ಲಿಯವರೆಗೂ ಮಾಡಿರುವ ಚಿತ್ರಗಳದ್ದೇ ಒಂದು ಹಂತವಾದರೆ, ಗೌಳಿ ಚಿತ್ರದ್ದೇ ಮತ್ತೊಂದು ಹಂತ. ಈ ಚಿತ್ರದಲ್ಲಿನ ನನ್ನ ಪಾತ್ರದ ಲುಕ್ಕು, ಕತೆಯಲ್ಲಿ ಸಾಕಷ್ಟುಹೊತನದಿಂದ ಕೂಡಿದೆ. ಪೂರ್ತಿ ಗಡ್ಡ ಬಿಟ್ಟು ಹೀಗೆ ನಾನು ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲು. ನಿರ್ದೇಶಕ ಸೂರ ನನ್ನನ್ನು ಹೊಸ ರೀತಿಯಲ್ಲಿ ಈ ಚಿತ್ರದ ಮೂಲಕ ತೋರಿಸುತ್ತಿದ್ದಾರೆ’ ಎನ್ನುತ್ತಾರೆ ನಟ ಶ್ರೀನಗರ ಕಿಟ್ಟಿ.

ಬಹಳ ದಿನಗಳ ನಂತರ ನಿಮ್ಮ ಪ್ರೀತಿಯ ಕಿಟ್ಟಿ ಕಾಣಿಸಿಕೊಳ್ಳಲಿದ್ದಾರೆ. 4 ವರ್ಷದ ನಂತರ ಕಿಟ್ಟಿ ಸ್ಯಾಂಡಲ್‌ವುಡ್ ಸವಾರಿ ಮಾಡಲಿದ್ದು, ಸಿಲಿಕಾನ್ ಸಿಟಿ ನಂತರ ಈಗ ಗೌಳಿ ಸಿನಿಮಾ ಮಾಡುತ್ತಿದ್ದಾರೆ. ಕೈಯಲ್ಲಿ ರಕ್ತಸಿಕ್ತ ಕೊಡಲಿ ಹಿಡಿದು ಹಿಂದೆಂದೂ ಕಾಣದ ಲುಕ್‌ನಲ್ಲಿ ತೆರೆಯ ಮೇಲೆ ಅಬ್ಬರಿಸಲಿದ್ದಾರೆ.

ಗೌಳಿ ಎಂಬ ಟೈಟಲ್‌ನಲ್ಲಿಯೇ ರಕ್ತಸಿಕ್ತ ಚಿತ್ರಣ ಕಾಣಬಹುದು. ಹಾಲು ಮಾರೋ ಹುಡುಗನ ಪಾತ್ರವನ್ನು ನಟ ಮಾಡಲಿದ್ದಾರೆ. 1960ರಲ್ಲಿ ಶಿವಮೊಗ್ಗದಲ್ಲಿ ನಡೆದ ಕಥೆಯನ್ನು ಈಗಿನ ಟ್ರೆಂಡ್‌ಗೆ ಸಿದ್ಧ ಮಾಡಿಕೊಂಡು ಗೌಳಿ ಚಿತ್ರ ಸಿದ್ಧವಾಗುತ್ತಿದೆ. ಆಕ್ಷನ್ ಥ್ರಿಲರ್ ಸಿನಿಮಾವನ್ನು ರಘು ಸಿಂಗಂ ನಿರ್ಮಾಣ ಮಾಡುತ್ತಿದ್ದಾರೆ.

ಪಾವನಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಯಶ್‌ ಶೆಟ್ಟಿಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್‌ ಗೌಡ ಕ್ಯಾಮೆರಾ ಹಿಡಿಯುತ್ತಿದ್ದು, ಶಶಾಂಕ್‌ ಶೇಷಗಿರಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸೆ.21ರಿಂದ ಯಲ್ಲಾಪುರ, ಶಿರಸಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?