ನನಗೆ ಖುಷಿ ಕೊಟ್ಟ ಸಿನಿಮಾ ಟೋಬಿ: ಗೋಪಾಲಕೃಷ್ಣ ದೇಶಪಾಂಡೆ

Published : Aug 24, 2023, 10:28 AM IST
ನನಗೆ ಖುಷಿ ಕೊಟ್ಟ ಸಿನಿಮಾ ಟೋಬಿ: ಗೋಪಾಲಕೃಷ್ಣ ದೇಶಪಾಂಡೆ

ಸಾರಾಂಶ

ಕನ್ನಡ ಚಿತ್ರರಂಗದ ಬೇಡಿಕೆಯ ಪೋಷಕ ನಟ, ರಂಗಭೂಮಿಯಿಂದ ಬಂದ ಮಹಾ ನಟನಾ ಪ್ರತಿಭೆ ಗೋಪಾಲಕೃಷ್ಣ ದೇಶಪಾಂಡೆ.

ಕನ್ನಡ ಚಿತ್ರರಂಗದ ಬೇಡಿಕೆಯ ಪೋಷಕ ನಟ, ರಂಗಭೂಮಿಯಿಂದ ಬಂದ ಮಹಾ ನಟನಾ ಪ್ರತಿಭೆ ಗೋಪಾಲಕೃಷ್ಣ ದೇಶಪಾಂಡೆ. ಕಥಾ ಪ್ರಧಾನ ಸಿನಿಮಾಗಳಲ್ಲೆಲ್ಲಾ ಇವರು ಇದ್ದೇ ಇರುತ್ತಾರೆ. ನಾಳೆ ಬಿಡುಗಡೆ ಆಗುತ್ತಿರುವ ರಾಜ್‌ ಬಿ ಶೆಟ್ಟಿ ನಟನೆಯ ಟೋಬಿ ಚಿತ್ರದಲ್ಲೂ ಪ್ರಧಾನ ಪಾತ್ರ ಮಾಡಿದ್ದಾರೆ. ಟೋಬಿ ಸಿನಿಮಾ ಕುರಿತ ಅವರ ಮಾತುಗಳು ಇಲ್ಲಿವೆ.

- ಟೋಬಿ ಒಬ್ಬ ಅಪ್ಪಟ ಮನುಷ್ಯ. ಅಕ್ಕಪಕ್ಕದಲ್ಲಿ ಇದ್ದಿರಬಹುದಾದ ಸಾಮಾನ್ಯ ಮನುಷ್ಯ. ಅದಕ್ಕೆ ಅವನು ತುಂಬಾ ಹತ್ತಿರ ಆಗುತ್ತಾನೆ. ಸಮಾಜ ಅವನನ್ನು ಹೇಗೆ ನಡೆಸಿಕೊಳ್ಳುತ್ತದೆ, ಆಮೇಲೆ ಅವನು ಏನಾಗುತ್ತಾನೆ ಅನ್ನುವುದೇ ಈ ಸಿನಿಮಾ.

ರಿಲೀಸ್‌ಗೂ ಮುನ್ನವೇ 10 ಕೋಟಿ ಲಾಭದಲ್ಲಿ ರಾಜ್‌ ಬಿ ಶೆಟ್ಟಿ; ಟೋಬಿ ಕಥೆ ಏನು?

- ಸಾಮಾನ್ಯವಾಗಿ ನನಗೆ ನನ್ನನ್ನೇ ಸ್ಕ್ರೀನ್ ಮೇಲೆ ನೋಡುವುದು ಅಂಥಾ ಖುಷಿ ಕೊಡುವ ವಿಷಯ ಅಲ್ಲ. ಆದರೆ ಈ ಸಿನಿಮಾದಲ್ಲಿ ನನ್ನನ್ನು ರಾಜ್‌ ಶೆಟ್ಟಿಯವರ ಜೊತೆ ನೋಡಿ ಎಷ್ಟೊಂದು ವರ್ಷಗಳ ಪರಿಚಯ ಇದ್ದಂತೆ ಕಾಣಿಸ್ತೇವಲ್ಲ ಅಂತ ಅನ್ನಿಸಿ ಖುಷಿಯಾಯಿತು.

- ಗರುಡಗಮನ ವೃಷಭವಾಹನ ಚಿತ್ರದಲ್ಲಿ ನನಗೆ ರಾಜ್‌ ಬಿ ಶೆಟ್ಟಿಯವರ ಜೊತೆ ನಟನೆ ಇರಲಿಲ್ಲ. ಈ ಸಿನಿಮಾದಲ್ಲಿ ಅವರ ಜೊತೆಯೇ ಇರುತ್ತೇನೆ. ಒಮ್ಮೊಮ್ಮೆ ನಮ್ಮ ಎದುರಲ್ಲಿ ನಮಗೆ ಗೊತ್ತೇ ಇರದಂತೆ ಮ್ಯಾಜಿಕ್‌ ನಡೆಯುತ್ತದೆ. ಆ ಮ್ಯಾಜಿಕ್ ಅನ್ನು ಅನುಭವಿಸುವ ಅದೃಷ್ಟ ನನಗೆ ಈ ಸಿನಿಮಾದಲ್ಲಿ ಸಿಕ್ಕಿತು. ಆ ಮ್ಯಾಜಿಕ್ ಏನು ಅನ್ನುವುದು ವಿವರಿಸುವುದು ಕಷ್ಟ. ಸಿನಿಮಾದಲ್ಲಿ ನಿಮಗೆ ಸಿಕ್ಕರೆ ನಿಮ್ಮ ಅದೃಷ್ಟ.

ಟೋಬಿಗೆ ಕೌಂಟ್‌ಡೌನ್‌.. ರೀವಿಲ್‌ ಆಯ್ತು ಮೇಕಿಂಗ್: 10 ಕೋಟಿ ಬಜೆಟ್‌ನಲ್ಲಿ ಸಿದ್ಧವಾಯ್ತು ಸಿನಿಮಾ ..!

- ಪ್ರತಿಯೊಂದು ಊರಲ್ಲಿ ಜಾತಿ, ಧರ್ಮ, ಅಂತಸ್ತು ಎಲ್ಲವನ್ನೂ ಮೀರಿದ ಗೆಳೆಯರು ಇರುತ್ತಾರೆ. ಅಂಥಾ ಗೆಳೆತನ ನಮ್ಮದು. ನನ್ನದು ದಾಮೋದರ ಎಂಬ ಪಾತ್ರ. ಊರಿನಲ್ಲಿ ಯಾರಿಗೂ ಬೇಡ ದಾಮೋದರ ಮತ್ತು ಟೋಬಿಯ ಬದುಕನ್ನು ನೀವು ಸಿನಿಮಾದಲ್ಲಿ ನೋಡಬೇಕು. ನಮ್ಮನ್ನೂ ಸೇರಿದಂತೆ ಇಲ್ಲಿ ಎಲ್ಲರೂ ಮನುಷ್ಯರಂತೆಯೇ ಇರುವ ಪಾತ್ರಗಳು.

- ಟೋಬಿ ಸಿನಿಮಾ ನೋಡಿದ ಜನರ ಪ್ರತಿಕ್ರಿಯೆ ತಿಳಿದುಕೊಳ್ಳಲು ನಾನು ಎಕ್ಸೈಟ್ ಆಗಿದ್ದೇನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
ಸೀಮಂತ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ : PHOTOS