
ಸಾಮಾನ್ಯವಾಗಿ ಚಿತ್ರವೊಂದರ ಮುಹೂರ್ತಕ್ಕೆ ಚಿತ್ರತಂಡ, ಅತಿಥಿಗಳು ಮತ್ತು ಹಿತೈಷಿಗಳು ಮಾತ್ರ ಬರುವ ಪದ್ಥತಿ ಚಿತ್ರರಂಗದಲ್ಲಿ ಇದೆ. ಆದರೆ ಭೇದಭಾವವಿಲ್ಲದೆ ಚಿತ್ರರಂಗದ ಹಿರಿಯರು, ಕಿರಿಯರು ಎಲ್ಲರೂ ಚಿತ್ರದ ಮುಹೂರ್ತಕ್ಕೆ ಬಂದು ಶುಭ ಹರಸಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ‘ಜಿಎಸ್‌ಟಿ’ ಚಿತ್ರದ ಮುಹೂರ್ತ ಸಂದರ್ಭ.
ಸೃಜನ್ ಲೋಕೇಶ್ ನಿರ್ದೇಶನದ ಮೊದಲ ಸಿನಿಮಾ ಇದು. ಅವರು ಇದರಲ್ಲಿ ಪ್ರಮುಖ ಪಾತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತಕ್ಕೆ ನಾಗಾಭರಣ, ಪಿ.ಶೇಷಾದ್ರಿ, ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್, ಸುಂದರ್‌ರಾಜ್, ತಾರಾ, ಶ್ರುತಿ, ನಿರೂಪ್ ಭಂಡಾರಿ, ಕಪ್ಪಣ್ಣ ಸೇರಿದಂತೆ ನೂರಾರು ಮಂದಿ ಆಗಮಿಸಿದ್ದರು. ಸೃಜನ್ ತಾತ ಸುಬ್ಬಯ್ಯ ನಾಯ್ಡು, ತಂದೆ ಲೋಕೇಶ್ ಅವರನ್ನು ನೆನೆದು ಶುಭ ಹರಸಿದರು.
ಆಗಸ್ಟ್ 24 'ಟೋಬಿ' ಪೇಯ್ಡ್ ಪ್ರೀಮಿಯರ್ ಶೋ; ಸೆಲೆಬ್ರಿಟಿಗಳ ಜೊತೆ ಸಿನಿಮಾ ನೋಡ್ಬೇಕಾ?
ಮುಹೂರ್ತದ ನಂತರ ಮಾತನಾಡಿದ ಸೃಜನ್, ‘ತಾತ ಸುಬ್ಬಯ್ಯ ನಾಯ್ಡು ನಟನೆ, ನಿರ್ದೇಶನದ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ತಂದೆ ಲೋಕೇಶ್ ಬಾಲನಟನಾಗಿ ನಟಿಸಿದ್ದರು. ತಂದೆ ನಟನೆ, ನಿರ್ದೇಶನದ ‘ಭುಜಂಗಯ್ಯನ ದಶಾವತಾರಗಳು’ ಚಿತ್ರದಲ್ಲಿ ನಾನು ಬಾಲನಟನಾಗಿ ನಟಿಸಿದ್ದೆ. ಈಗ ನನ್ನ ನಟನೆ, ನಿರ್ದೇಶನದ ‘ಜಿಎಸ್‌ಟಿ’ ಚಿತ್ರದಲ್ಲಿ ಮಗ ಸುಕೃತ್ ಬಣ್ಣ ಹಚ್ಚುತ್ತಿದ್ದಾನೆ. ಸಿನಿಮಾದ ಮೊದಲ ಶಾಟ್‌ನಲ್ಲಿ ನನ್ನ ಅಮ್ಮನಿಗೆ ಆ್ಯಕ್ಷನ್ ಕಟ್ ಹೇಳುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಸಿನಿಮಾ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತೇವೆ’ ಎಂದರು.
ಇಡೀ ಕೂದಲ ಬಣ್ಣ ಬದಲಾಯಿಸಿಕೊಂಡ ಅನುಪಮಾ ಗೌಡ; ಕೊನೆಯಲ್ಲಿತ್ತು ಬಿಗ್ ಶಾಕ್!!
ಇದೊಂದು ಹಾರರ್, ಕಾಮಿಡಿ ಸಿನಿಮಾ ಆಗಿದ್ದು, ಗಿರಿಜಾ ಲೋಕೇಶ್, ರಜನಿ ಭಾರದ್ವಾಜ್, ನಿವೇದಿತಾ ಗೌಡ, ಪ್ರಮೋದ್ ಶೆಟ್ಟಿ, ಅರವಿಂದ್ ರಾವ್ ಅಭಿನಯಿಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪೂಜಾ ಲೋಕೇಶ್ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ.
ಈ ಸಿನಿಮಾದ ನಿರ್ಮಾಪಕರು ಸಂದೇಶ್ ಎನ್, ‘ಗೆಳೆಯ ಸೃಜನ್‌ಗಾಗಿ ಈ ಸಿನಿಮಾ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.