ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರ ಕಾಂಬಿನೇಶನ್ ಮತ್ತೊಮ್ಮೆ ಗೆದ್ದಿದೆ. ಹದಿನಾಲ್ಕು ವರ್ಷಗಳ ಹಿಂದೆ ಬಂದ ‘ಗಾಳಿಪಟ’ ಚಿತ್ರದ ಮುಂದುವರಿದ ಭಾಗ ‘ಗಾಳಿಪಟ 2’ (ಜಿ-2) ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.
ಬೆಂಗಳೂರು (ಆ.13): ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರ ಕಾಂಬಿನೇಶನ್ ಮತ್ತೊಮ್ಮೆ ಗೆದ್ದಿದೆ. ಹದಿನಾಲ್ಕು ವರ್ಷಗಳ ಹಿಂದೆ ಬಂದ ‘ಗಾಳಿಪಟ’ ಚಿತ್ರದ ಮುಂದುವರಿದ ಭಾಗ ‘ಗಾಳಿಪಟ 2’ (ಜಿ-2) ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.
ಕರ್ನಾಟಕ, ಹೊರ ರಾಜ್ಯಗಳು ಹಾಗೂ ವಿದೇಶಗಳಲ್ಲೂ ಬಿಡುಗಡೆಯಾಗಿರುವ ಗಾಳಿಪಟ 2 ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರ ಸ್ವಾಗತ ಸಿಕ್ಕಿದೆ. ಚಿತ್ರಮಂದಿರಗಳು ಶೇ.90ರಷ್ಟು ತುಂಬಿದ್ದವು. ರಾಜ್ಯದಲ್ಲೇ ಮಲ್ಟಿಪ್ಲೆಕ್ಸ್‌ಗಳಲ್ಲಿ 250 ಶೋ ಕಂಡರೆ, 150 ಸಿಂಗಲ್ ಸ್ಕ್ರೀನ್‌ಗಳಲ್ಲಿ 600ಕ್ಕೂ ಹೆಚ್ಚು ಶೋಗಳನ್ನು ಕಂಡಿದೆ. ಹೊರ ರಾಜ್ಯಗಳಲ್ಲಿ 40 ಕೇಂದ್ರಗಳಲ್ಲಿ ಸಿನಿಮಾ ಪ್ರದರ್ಶನ ಆಗಿದ್ದು, ವಿದೇಶಗಳಲ್ಲಿ ಮೊದಲ ದಿನ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ 250 ಶೋಗಳನ್ನು ಕಾಣುವ ಮೂಲಕ ‘ಗಾಳಿಪಟ 2’ ಹೊಸದಾಖಲೆ ಮಾಡಿದೆ.
undefined
ಗಾಳಿಪಟ 2 ಬರೀ ಸಿನಿಮಾ ಅಲ್ಲ, ಅದೊಂದು ಎಮೋಶನ್: ಗಣೇಶ್
‘ಗಾಳಿಪಟ 2’ ಮೊದಲ ದಿನವೇ ಸರಾಸರಿ 850 ರಿಂದ 900 ಶೋಗಳನ್ನು ಕಾಣುವ ಮೂಲಕ ಗಣೇಶ್ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿದೆ. ಗಳಿಕೆಯನ್ನೂ ನಿರೀಕ್ಷೆಗಿಂತ ಮುಂದಿದ್ದು, ಮೊದಲ ದಿನ 15ರಿಂದ 20 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಗಳು ಇವೆ. ಚಿತ್ರರಂಗದ ಈ ಲೆಕ್ಕಾಚಾರದಂತೆ ಗಣೇಶ್ ಅವರ ‘ಮುಂಗಾರು ಮಳೆ’ ಚಿತ್ರದ ಗೋಲ್ಡನ್ ದಿನಗಳು ‘ಗಾಳಿಪಟ 2’ ಚಿತ್ರದಿಂದ ಮರುಕಳಿಸಿವೆ ಎನ್ನಬಹುದು.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಣೇಶ್ ಅವರ ಪುತ್ರ ವಿಹಾನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ.
ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ರಮೇಶ್ ರೆಡ್ಡಿ ಚಿತ್ರದ ನಿರ್ಮಾಪಕರು. 'ಗಾಳಿಪಟ 2' ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ. ಮಾತ್ರವಲ್ಲದೇ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ.
ಬೆಳಗ್ಗಿನ ಶೋ ಮುಗಿದ ಕೂಡಲೇ ಸ್ನೇಹಿತರು, ಚಿತ್ರರಂಗದವರು ಹಾಗೂ ಆತ್ಮೀಯರಿಂದ ಬಂದ ರೆಸ್ಪಾನ್ಸ್ ಹಾಗೂ ಮಾಧ್ಯಮಗಳಲ್ಲಿ ಪ್ರೇಕ್ಷಕರು ಕೊಡುತ್ತಿದ್ದ ಅಭಿಪ್ರಾಯಗಳನ್ನು ನೋಡಿದಾಗ ನಾವು ಪಟ್ಟಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಅನಿಸಿತು. ಬೆಂಗಳೂರು, ಮೈಸೂರು ಭಾಗದಲ್ಲಿ ಮೊದಲ ದಿನವೇ ಶೇ.100ರಷ್ಟು ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ. ನನ್ನ ಮತ್ತು ಯೋಗರಾಜ್ ಭಟ್ ಅವರ ಕಾಂಬಿನೇಶನ್ ಉಳಿಸಿಕೊಳ್ಳಬೇಕು, ಗೆಲ್ಲಬೇಕು ಎನ್ನುವ ನಮ್ಮ ಕನಸನ್ನು ಪ್ರೇಕ್ಷಕರು ಕೈ ಹಿಡಿದಿದ್ದಾರೆ. ಇದು ಇಡೀ ‘ಗಾಳಿಪಟ 2’ ತಂಡದ ಗೆಲುವು.
- ಗಣೇಶ್, ನಟ
ಗಾಳಿಪಟ ಮೊದಲ ಪಾರ್ಟ್‌ಗೆ ನಾನೇ ನಾಯಕಿ ಆಗಬೇಕಿತ್ತು: ಶರ್ಮಿಳಾ ಮಾಂಡ್ರೆ
ನಮ್ಮ ನಿರೀಕ್ಷೆ ಇದ್ದಿದ್ದು, ಮೂರು ದಿನಗಳ ನಂತರ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂಬುದು. ಯಾಕೆಂದರೆ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್ ಸಿನಿಮಾ ಎಂದರೆ ಬಾಯಿ ಮಾತಿನ ಮೂಲಕವೇ ಹೆಚ್ಚು ಪ್ರಚಾರ ಆಗುತ್ತದೆ. ಆದರೆ, ಮೊದಲ ದಿನವೇ ಶೇ.90ರಷ್ಟು ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ನಮ್ಮ ನಿರೀಕ್ಷೆಗಿಂತ ಹೆಚ್ಚೇ ಸಿನಿಮಾ ಯಶಸ್ಸು ಕಂಡಿದೆ.
- ರಮೇಶ್ ರೆಡ್ಡಿ, ನಿರ್ಮಾಪಕ