
ಕನ್ನಡದ ನಟ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಇಂದು ತಮ್ಮ ಹುಟ್ಟಹಬ್ಬ (Birthday) ಆಚರಿಸಿಕೊಳ್ಳುತ್ತಿದ್ದಾರೆ. 'ಮುಂಗಾರು ಮಳೆ' ಮೂಲಕ ಕನ್ನಡನಾಡಿನಲ್ಲಿ ಮನೆಮನೆಮಾತಾದ ನಟ ಗಣೇಶ್, ಇಂದಿಗೂ ತಮ್ಮ ಚಾರ್ಮ್ ಹಾಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. 'ಕೃಷ್ಣಂ ಪ್ರಣಯ ಸಖಿ' ಮೂಲಕ ಮತ್ತೆ ಮ್ಯಾಜಿಕ್ ಮಾಡಿರುವ ನಟ ಗಣೇಶ್ ಕೈನಲ್ಲಿ ಸದ್ಯ 5-6 ಸಿನಿಮಾಗಳಿವೆ.
ಇಂಥ ನಟ ಗಣೇಶ್ ಅವರು ಇಂದು 02 ಜುಲೈ ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬದ ಜೊತೆ ಹುಟ್ಟುಹಬ್ಬದ ದಿನ ಖುಷಿಖುಷಿಯಾಗಿ ಕಳೆಯುತ್ತಿರುವ ನಟ ಗಣೇಶ್ ಅವರು, ಇಂದು ಬರ್ತ್‌ಡೇ ಬಾಯ್ ಆಗಿ ಫ್ಯಾನ್ಸ್ ನೆನಪಲ್ಲಿ ಮಿಂಚುತ್ತಿದ್ದಾರೆ. ಸಹಜವಾಗಿ ವೈಯಕ್ತಿಕ ಶುಭಾಶಯ ಕೋರುವವರ ಜೊತೆ, ಹಲವರು ಸೋಷಿಯಲ್ ಮೀಡಿಯಾ ಮೂಲಕ ನಟ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ಠಪೋರಿ ಚಿತ್ರದ ಮೂಲಕ 2005ರಲ್ಲಿ ಚಿತ್ರರಂಗದ ಬಣ್ಣದಬದುಕಿಗೆ ಕಾಲಿಟ್ಟ ನಟ ಗಣೇಶ್ ಅವರು, 2006ರಲ್ಲಿ ಬಂದ 'ಮುಂಗಾರು ಮಳೆ' ಸಿನಿಮಾ ಮೂಲಕ ಸ್ಟಾರ್ ನಟರಾದವರು. ಆ ಬಳಿಕ ತಿರುಗಿ ನೋಡದ ಗಣೇಶ್ ಸಾಲುಸಾಲು ಸಿನಿಮಾಗಳ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಬರುವ ಮೊದಲು ನಟ ಗಣೇಶ್ ಅವರು ಧಾರಾವಾಹಿಗಳು ಹಾಗೂ ಟಿವಿ ಶೋಗಳ ಮೂಲಕ ನಟನೆಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.
ಕಳೆದ ವರ್ಷ ಬಿಡುಗಡೆಯಾದ 'ಕೃಷ್ಣಂ ಪ್ರಣಯ ಸಖಿ' ಚಿತ್ರ ಸೂಪರ್ ಹಿಟ್ ಆಗುವ ಮೂಲಕ ಮತ್ತೆ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಾರೆ ನಟ ಗಣೇಶ್. ಸದ್ಯ ನಟ ಗಣೇಶ್ ಅವರು ಹಲವು ಸಿನಿಮಾಗಳಿಗೆ ಸಹಿ ಮಾಡಿದ್ದು, ಕೆಲವು ಸಿನಿಮಾಗಳು ಶೂಟಿಂಗ್ ಹಂತದಲ್ಲಿ ಇದ್ದರೆ ಇನ್ನೂ ಕೆಲವು ಸಿನಿಮಾಗಳು ಪ್ರೊಡಕ್ಷನ್ ಹಾಗೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿವೆ. ಸದ್ಯಕ್ಕೆ 'ಪಿನಾಕ' ಸಿನಿಮಾ ಸೌಂಡ್ ಮಾಡುತ್ತಿದೆ. ಜೊತೆಗೆ, ಗಣೇಶ್ ಮಗಳು ಚರಿತ್ರಿಯಾ ಸಹ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ಸುದ್ದಿ ಬಂದಿದೆ. ಆದರೆ ಈ ಸಂಗತಿ ಇನ್ನೂ ಅಧಿಕೃತವಾಗಿಲ್ಲ.
ಹೌದು, ಇಂದು ನಟ ಗಣೇಶ್ ಹುಟ್ಟುಹಬ್ಬ. ಪಿನಾಕ ಸಿನಿಮಾ ಮೂಲಕ ಸದ್ಯಕ್ಕೆ ಸುದ್ದಿಯಾಗುತ್ತಿರುವ ನಟ ಗಣೇಶ್ ಕೈನಲ್ಲಿ- ಯುವರ್ಸ್ ಸಿನ್ಸಿಯರ್ಲಿ ರಾಮ್, ಡಿಜಂಗೋ ಕೃಷ್ಣಮೂರ್ತಿ, ಬೃಂದಾವಿಹಾರಿ, ತಮ್ಮ ಸುಖಾಗಮನ ಬಯಸುವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಅವರು ನಿರ್ಮಾಪಕಿ ಹಾಗೂ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಅಂದಹಾಗೆ, ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ 'ಹ್ಯಾಪಿ ಬರ್ತ್ ಡೇ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.