ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬರಲು ಪತ್ನಿ ನಿರ್ಧಾರವೇ ಕಾರಣ ಎಂದು ಸ್ಪಷ್ಟನೆ ಕೊಟ್ಟ ಗೋಲ್ಡ್ ಸುರೇಶ್.....
ಬಿಗ್ ಬಾಸ್ ಸೀಸನ್ 11ರಲ್ಲಿ ಟಫ್ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಗೋಲ್ಡ್ ಸುರೇಶ್ ಇದ್ದಕ್ಕಿದ್ದಂತೆ ಹೊರ ಬಂದಿರುವುದು ವೀಕ್ಷಕರಿಗೆ ದೊಡ್ಡ ಶಾಕ್ ತಂದಿದೆ. ಯಾಕೆ ಸುರೇಶ್ ಹೊರ ಬಂದರು ಎಂದು ವೀಕ್ಷಕರು ಗೆಸ್ ಮಾಡುವಷ್ಟರಲ್ಲಿ ತಂದೆ ನಿಧನ, ಫ್ಯಾಮಿಲಿ ಸಮಸ್ಯೆ, ತಾಯಿ ಆರೋಗ್ಯ ಸಮಸ್ಯೆ ಹೀಗೆ ನೂರಾರು ಊಹಾಪೋಹಗಳು ಹರಿದಾಡುತ್ತಿತ್ತು. ಈ ನಡುವೆ ಗೋಲ್ಡ್ ಸುರೇಶ್ ಅಭಿಮಾನಿಯೊಬ್ಬರು ಸುರೇಶ್ ತಂದೆ ಜೊತೆ ವಿಡಿಯೋ ಮಾಡಿ ಅವರು ಬದುಕಿದ್ದಾರೆ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಹಾಗಿದ್ರೆ ಸುರೇಶ್ ಯಾಕೆ ಹೊರ ಬಂದರು? ಅವರೇ ಕೊಟ್ಟ ಕ್ಲಾರಿಟಿ ಇಲ್ಲಿದೆ.....
'ನಾನೊಬ್ಬ ಬ್ಯುಸಿನೆಸ್ ಮ್ಯಾನ್...ನನ್ನದೇ ಸುಮಾರು ಬ್ಯುಸಿನೆಸ್‌ಗಳು ಇದೆ ಅದನ್ನು ನಂಬಿಕೊಂಡು ಸುಮಾರು ಫ್ಯಾಮಿಲಿಗಳು ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ಆಫರ್ ಬಂದಾಗ ಬಿಗ್ ಬಾಸ್ ಮನೆಗೆ ಹೋಗುವ ಸಮಯದಲ್ಲಿ ನನ್ನಲ್ಲಿ ಒಂದು ಕೊರಗು ಇತ್ತು ನಾನು ಇಲ್ಲ ಅಂದ್ರೆ ಬ್ಯುಸಿನೆಸ್‌ನ ಯಾರು ನೋಡಿಕೊಳ್ಳುತ್ತಾರೆ ಎಂದು ಆ ಸಮಯದಲ್ಲಿ ಧರ್ಮ ಪತ್ನಿಗೆ ವಹಿಸಿ ಕೊಟ್ಟಿದ್ದೆ. ನೀನು ನೋಡಿಕೊಳ್ಳಮ್ಮ ಎಂದು ನನ್ನ ಹೆಂಡತಿಗೆ ಹೇಳಿದ್ದೆ. ಇಷ್ಟು ವರ್ಷಗಳಿಂದ ನನ್ನ ಪತ್ನಿಯನ್ನು ನಾನು ಯಾವುದೇ ಬ್ಯುಸಿನೆಸ್ ಕಾರ್ಯಕ್ರಮಕ್ಕೆ ಎಳೆದಿರಲಿಲ್ಲ ಮೊದಲ ಸಲ ಆಕೆ ಬ್ಯುಸಿನೆಸ್ ಎದುರಿಸುತ್ತಿರುವ frastruate ಆಗಿದ್ದಾಳೆ. ಯಾಕೆ ಅಂದ್ರೆ ಆಕೆಗೆ ಮ್ಯಾನೇಜ್ ಮಾಡಲು ಆಗುತ್ತಿರಲಿಲ್ಲ ಏಕೆಂದರೆ ನಾನು ಕುದ್ದಾಗಿ ನಿರ್ಧಾರಗಳನ್ನು ತೆಗೆದುಕೊಂಡು ಕೆಲಸ ಮಾಡಿಸುತ್ತಿದ್ದೆ ಆದರೆ ಆಕೆ ನಿರ್ಧಾರ ತೆಗೆದುಕೊಳ್ಳುವುದೇ ಬೇರೆ. ನಾನು ತೆಗೆದುಕೊಳ್ಳುವ ಖಡಕ್ ನಿರ್ಧಾರಗಳನ್ನು ಆಕೆ ತೆಗೆದುಕೊಳ್ಳಲು ಆಗಲ್ಲ ಆ ತರ ಗೊಂದಲ ಎದುರಾದಾಗ ತುಂಬಾ ಕುಗ್ಗಿಬಿಟ್ಟಳು ಆಗ ನಾನು ಬರಬೇಕಾಗಿತ್ತು. ಅದಕ್ಕೆ ನಾನು ಹೊರ ಬಂದಿದ್ದೀನಿ ಅದು ಬಿಟ್ಟರೆ ಬೇರೆ ಏನೂ ಕಾರಣ ಇಲ್ಲ' ಎಂದು ಸುರೇಶ್ ಖಾಸಗಿ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
undefined
'ಜೊತೆ ಜೊತೆಯಲಿ' ಮೇಘಾ ಶೆಟ್ಟಿ ವರ್ಕೌಟ್ ವಿಡಿಯೋ ವೈರಲ್; ಇದಕ್ಕೂ ಅಭಿಮಾನಿ ಬಳಗವೇ ಇದೆ
'ಸುರೇಶ್ ನೀವು ಹೊರ ಬಂದಿದ್ದು ತುಂಬಾ ಬೇಜಾರ್ ಆಗಿದೆ. ಸುರೇಶ್ ನೀವು ಚೆನ್ನಾಗಿ ಆಟವಾಡಬೇಕಿತ್ತು' ಎಂದು ಕೆಲವರು ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 'ಬಿಗ್ ಬಾಸ್‌ಗೆ ಹಣ ಕೊಟ್ಟು ಗೋಲ್ಡ್ ಸುರೇಶ್ ಹೊರ ಬಂದಿರುವುದು...ಅವರೊಟ್ಟಿಗೆ ಇರುವ ಬ್ಯುಸಿನೆಸ್ ಕಾಂಟ್ರಾಕ್ಟ್ ಮುಗಿದಿದೆ ಹೀಗಾಗಿ ಮನೆ ಎಂಬ ನೆಪ ಕೊಟ್ಟು ಕರೆದಿರುವುದು' ಎಂದು ಕಾಮೆಂಟ್ ಮಾಡಿದ್ದಾರೆ.
ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಅರ್ಯನ್ ; ಮಾಲಾಶ್ರೀ ಮಗ ಹೇಗಿದ್ದಾನೆ ನೋಡಿ