ಚಿತ್ರರಂಗದಲ್ಲಿ ಗ್ಲಾಮರ್ ಅಂದ್ರೆ ಮೈ ತೋರಿಸೋದು, ಸೆಕ್ಸ್ ವರ್ಕರ್ ಪಾತ್ರ ಅರ್ಥ ಆಗುತ್ತೆ: ಶ್ರದ್ಧಾ ಶ್ರೀನಾಥ್

Published : Apr 25, 2023, 12:14 PM IST
ಚಿತ್ರರಂಗದಲ್ಲಿ ಗ್ಲಾಮರ್ ಅಂದ್ರೆ ಮೈ ತೋರಿಸೋದು, ಸೆಕ್ಸ್ ವರ್ಕರ್ ಪಾತ್ರ ಅರ್ಥ ಆಗುತ್ತೆ: ಶ್ರದ್ಧಾ ಶ್ರೀನಾಥ್

ಸಾರಾಂಶ

 D-ಗ್ಲಾಮ್ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಶ್ರದ್ಧಾ ಶ್ರೀನಾಥ್. ಚಿತ್ರರಂಗಕ್ಕೆ ಗ್ಲಾಮರ್ ಅರ್ಥ ತಿಳಿಸಿದ ನಟಿ....

U- ಟರ್ನ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ನಟಿ ಶ್ರದ್ಧಾ ಶ್ರೀನಾಥ್‌ ಡೀ-ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಮನೋಜ್ಞ ಫಸ್ಟ್‌ ಲುಕ್‌ ರಿಲೀಸ್ ಆಗಿದೆ. ಚಿತ್ರರಂಗದವರು ನಾಯಕಿಯರ ಗ್ಲಾಮರ್ ನೋಡುವ ರೀತಿ ಬೇರೆನೇ ಇದೆ ಎಂದು ಶ್ರದ್ಧಾ ಹೇಳಿದ್ದಾರೆ.

'ಅನೇಕ ನಿರ್ದೇಶಕರು ವಿಕ್ರಮ್ ವೇದಾ ಸಿನಿಮಾದ ನನ್ನ ಲುಕ್‌ನ ನೋಡಿ ಸಂಪರ್ಕ ಮಾಡುತ್ತಾರೆ. ಅದರಲ್ಲಿ ಕಾಟನ್ ಕಲ್ಮಕಾರಿ ಸೀರೆ ಮತ್ತು ಮೂಗುತ್ತಿ, ಕಣ್ಣಿಗೆ ಕಾಜಲ್ ಮತ್ತು ಜಡೆ ಲುಕ್‌ನಲ್ಲಿ ಕಾಣಿಸಿಕೊಂಡಿರುವೆ. ನಮ್ಮ ಸಿನಿಮಾದಲ್ಲಿ ನೀವು ಇದೇ ರೀತಿ ಕಾಣಿಸಿಕೊಳ್ಳಬೇಕು ಎಂದು ನನ್ನನ್ನು ಕೇಳುತ್ತಾರೆ. ನಾನು ರಿಯಲ್ ಆಗಿ, ಸೊಸೈಟಿಯಲ್ಲಿ ಪ್ರಭಾವ ಬೀರುವಂತ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವೆ. ಖುಷಿ ಖುಷಿಯಾಗಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪಾತ್ರದಲ್ಲಿ ವಿಭಿನ್ನತೆ ಇದ್ರೆ ಮಾತ್ರ ನಾನು ಅಯ್ಕೆ ಮಾಡಿಕೊಳ್ಳುವುದು. ಪಕ್ಕಾ ಮನೆ ಮಗಳು ಪಾತ್ರಕ್ಕೆ ನಾನು ಬೇಕು ಅಂದ್ರೆ ವಿಕ್ರಮ್ ವೇದಾ ಲುಕ್‌ ಶೇರ್ ಮಾಡುತ್ತಾರೆ' ಎಂದು ಶ್ರದ್ಧಾ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನಲ್ಲಿ ಮಾತನಾಡಿದ್ದಾರೆ. 

ನನ್ನನ್ನು ಹೊರಗಿನವಳಂತೆ ನೋಡುತ್ತಾರೆ; ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಸ್ಟೋರಿ ರಿವೀಲ್ ಮಾಡಿದ ಶ್ರದ್ಧಾ ಕಪೂರ್

ಮನೋಜ್ಞ ಸಿನಿಮಾ ಫಸ್ಟ್‌ ಲುಕ್‌ನಲ್ಲಿ ನಾನು ಟಿಫನ್ ಡಬ್ಬ ಹಿಡಿದುಕೊಂಡು ಬರುತ್ತಿರುವೆ, ನೋಡಿದ ತಕ್ಷಣ ಆಕೆ ವರ್ಕಿಂಗ್ ಕ್ಲಾಸ್ ಹುಡುಗಿ ರೀತಿ ಕಾಣಿಸುವೆ. ಆಕೆಯ ಬ್ಯಾಕ್‌ಗ್ರೌಂಡ್‌ ಹೊರತು ಪಡಿಸಿ ನೋಡಿದರೆ ಆಕೆಯ ತೆಗೆದುಕೊಳ್ಳುವ ನಿರ್ಧಾರಗಳನ್ನು ನೋಡಿ ಆಶ್ಚರ್ಯ ಪಡುತ್ತೀರಿ. ನಿರ್ದೇಶಕ ಸೈಲೇಶ್ ಅವರ ಜೊತೆ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ ಏಕೆಂದರೆ ಮಹಿಳೆಯರ ಪಾತ್ರವನ್ನು ಅಷ್ಟು ವಿಭಿನ್ನವಾಗಿ ಪ್ರಭಾವ ಬೀರುವಂತೆ ತೋರಿಸುತ್ತಾರೆ. ಸೈಲೇಶ್ ಅವರ ಹಿಂದಿನ ಸಿನಿಮಾ ನೋಡಿರುವೆ ಲೇಡಿಂಗ್ ಲೇಡಿ ಮಿಡಲ್ ಕ್ಲಾಸ್ ಹುಡುಗಿ ಆಗಿದ್ದಳು ಆದರೂ ತನ್ನ ಪಾರ್ಟನರ್‌ಗೆ ಏನೂ ಕಡಿಮೆ ಇಲ್ಲ ಅನ್ನೋ ರೀತಿ ಬದುಕುತ್ತಿದ್ದಳು. ನಾಯಕಿಯರನ್ನು ಹೇಗೆ ತೋರಿಸಬೇಕು ಎಂದು ಸೈಲೇಶ್ ಸಿನಿಮಾ ನೋಡಿದರೆ ಸಾಕು' ಎಂದು ಶ್ರದ್ಧಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್; ಡಿಯರ್ ವಿಕ್ರಮ್ ಯಾರು?

ಶ್ರದ್ಧಾ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡುವುದಕ್ಕೆ ರೆಡಿನಾ ಎಂದು ಮಾಧ್ಯಮದಲ್ಲಿ ಕೇಳಿದ್ದರಂತೆ. 'ಚಿತ್ರರಂಗದಲ್ಲಿ ಗ್ಲಾಮರ್ ಆಂದ್ರೆ ಮೈ ತೋರಿಸುವುದು. ನನ್ನ ಪ್ರಕಾರ ಗ್ಲಾಮರ್ ಅಂದ್ರೆ ಅದಲ್ಲ. ಗ್ಲಾಮರ್ ಅಂದ್ರೆ ಡೀವಾ ಆಗಿರುವುದು. ಇಲ್ಲಿ ಗ್ಲಾಮರ್‌ ಅರ್ಥ ತಪ್ಪಾಗಿ ತಿಳಿದುಕೊಂಡಿದ್ದಾರೆ. ಗ್ಲಾಮರ್ ಏನೆಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಸೆಕ್ಸ್‌ ವರ್ಕರ್ ಪಾತ್ರ ಇದ್ರೆ ನನಗೆ ಅರ್ಥವಾಗುತ್ತದೆ ಆದರೆ ನಿರ್ದೇಶಕರು ಸೂಕ್ಷ್ಮತೆಯನ್ನು ಗಮನಿಸಿ ನೋಡಿಕೊಳ್ಳಬೇಕು. ಸದ್ಯಕ್ಕೆ ವಿವಿಭ ಪಾತ್ರಗಳನ್ನು ಮಾಡಿಕೊಂಡು ಎಂಜಾಯ್ ಮಾಡುತ್ತಿರುವೆ' ಎಂದಿದ್ದಾರೆ ಶ್ರದ್ಧಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!