
ಪೊರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಣೀತಾ ಸುಭಾಷ್ ಅಕ್ಷಯ ತೃತೀಯ ಪ್ರಾಮುಖ್ಯತೆ ಹಾಗೂ ಹೆಣ್ಣು ಮಕ್ಕಳು ಎಷ್ಟು ಇಂಡಿಪೆಂಡೆಂಟ್ ಆಗಿರಬೇಕು ಎಂದು ತಿಳಿಸಿಕೊಟ್ಟಿದ್ದಾರೆ.
ಪ್ರಣೀತಾ ಶುಭಾಷ್ ಪ್ರತಿ ವರ್ಷವೂ ಅಕ್ಷಯ ತೃತೀಯ ದಿನದಂದು ತಪ್ಪದೆ ಚಿನ್ನ ಖರೀದಿ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. 'ಅಕ್ಷಯ ತೃತೀಯ ಹಬ್ಬದಂದು ಯಾಕೆ ಚಿನ್ನ ಖರೀದಿ ಮಾಡುತ್ತಾರೆ ಅನ್ನೋದಕ್ಕೆ ಒಂದು ಕಾರಣವಿದೆ ..ಆ ದಿನ ಏನಾದರೂ ಒಂದು ಸಣ್ಣ ಗೋಲ್ಡ್ ತೆಗೆದುಕೊಂಡರೂ ಇಡೀ ವರ್ಷ ಖರೀದಿ ಮಾಡುತ್ತಿರುತ್ತೀವಿ' ಎಂದು ಪ್ರಣಿತಾ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ. 'ಈ ವರ್ಷ ಅಕ್ಷಯ ತೃತೀಯ ದಿನ ನಾನು ಮಗಳಿಗೆ ಏನಾದರೂ ಸಿಂಪ್ ಮತ್ತು ಡಿಫರೆಂಟ್ ಆಗಿರುವ ಚಿನ್ನ ಖರೀದಿ ಮಾಡುತ್ತೀನಿ' ಎಂದಿದ್ದಾರೆ. ವರ್ಷಕ್ಕೆ ಒಮ್ಮೆ ಆದರೂ ಇನ್ವೆಸ್ಟ್ ಮಾಡಬೇಕು ಅನ್ನೋದು ಎಲ್ಲರ ಲಾಜಿಕ್ ಅದರಲ್ಲೂ ಮಹಿಳೆಯರು ಇಂಡಿಪೆಂಡೆಂಟ್ ಆಗಿರಲೇ ಬೇಕು ಎನ್ನುತ್ತಾರೆ ಪೊರ್ಕಿ ಚಿತ್ರದ ನಟಿ.
ಪ್ರಣೀತಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಬಗ್ಗೆ ಇಲ್ಲಿದೆ ಮಾಹಿತಿ!
'Financial Independence ಒಂದು ರೀತಿ ವಿಭಿನ್ನ ಭಾವನೆ ಕೊಡುತ್ತದೆ ಅದರಲ್ಲೂ ಮಹಿಳೆಯರಿಗೆ ಅದೇ ಶಕ್ತಿ. ತುಂಬಾ ಸ್ಪೆಷಲ್ ರೀತಿಯಲ್ಲಿ ನಮಗೆ ಧೈರ್ಯ ಮತ್ತು ಚೈತನ್ಯ ತುಂಬುತ್ತದೆ. ನನ್ನ ತಾಯಿ ಸ್ತ್ರೀರೋಗತಜ್ಞ, ಆಕೆ ಎಲ್ಲಾದಕ್ಕಿಂತ ತಮ್ಮ ವೃತ್ತಿ ಬದುಕನ್ನು ಮುಂದಿಟ್ಟರು. ಹಣ ಉಳಿತಾಯ ಮಾಡುವುದರಲ್ಲಿ ಎಲ್ಲಿ ಎಲ್ಲಿ ಹೂಡಿಕೆಗಳು ಮಾಡಬೇಕು ಅನ್ನೋ ವಿಚಾರ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಮ್ಮ ಮನೆಯಲ್ಲಿರುವ ಗಂಡಸರಿಗೆ ಸಮವಾಗಿ ನಿಲ್ಲುತ್ತಾರೆ. I believe that financially secure women can help shatter patriarchy' ಎನ್ನುತ್ತಾರೆ ಪ್ರಣೀತಾ.
'ನಾನು ಅನೇಕ ಹೋಟೆಲ್‌ಗಳ ಮೇಲೆ ಹೂಡಿಕೆಗಳನ್ನು ಮಾಡಿರುವೆ. ಹಲವು ವರ್ಷಗಳಿಂದ ರೆಸ್ಟ್ರೋ ಬಾರ್‌ಗಳ ಜೊತೆ ಕೆಲಸ ಮಾಡುತ್ತಿರುವೆ. 23 ವರ್ಷ ಹುಡುಗಿ ಇದ್ದಾಗಲೇ ನಾನು ಈ ರೀತಿ ಹೂಡಿಕೆಗಳನ್ನು ಮಾಡಲು ಆರಂಭಿಸಿದೆ ಇಷ್ಟು ವರ್ಷ ಆಗಿದೆ ಅಂದ್ರೆ ತುಂಬಾ ತಿಳಿದುಕೊಂಡಿರುವೆ ಗ್ರೇಟ್ ನಿರ್ಧಾರಗಳನ್ನು ಮಾಡುತ್ತಿರುವೆ. ಯಾವುದು ಸರಿ ಯಾವುದು ತಪ್ಪು ಅನ್ನೋದನ್ನು ನಾನೇ ಕಲಿತುಕೊಂಡಿರುವೆ' ಎಂದು ಪ್ರಣೀತಾ ಹೇಳಿದ್ದಾರೆ. ಜೀವನವನ್ನು ಕಟ್ಟಿಕೊಳ್ಳುವ ಪ್ರಯಾಣದಲ್ಲಿ ಪ್ರಣೀತಾ ಸರಿ ತಪ್ಪುಗಳನ್ನು ತಿಳಿದುಕೊಂಡಿದ್ದಾರಂತೆ.
ಸೀಮಂತದಲ್ಲಿ ನಾನು ಹೆಚ್ಚಿಗೆ ಚಾಕೊಲೇಟ್ ತಿಂದಿರುವೆ: ತಾಯಿತನದ ಬಗ್ಗೆ ಪ್ರಣೀತಾ ಮಾತು
'ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟರೆ ಅದರ ಬೆಲೆ ಕಡಿಮ ಆಗುತ್ತದೆ ಹೊರ ಅದರಿಂದ ಲಾಭ ಇಲ್ಲ. ಕೆಲವು ವರ್ಷಗಳ ನಂತರ ಇಟ್ಟ ಹಣಕ್ಕೆ ಬೆಲೆ ಇಲ್ಲದೆ ನಷ್ಟ ಎದುರಿಸಬೇಕಾಗುತ್ತದೆ. ನನ್ನ ಅಭಿಪ್ರಾಯ ಕೇಳುವುದಾದರೆ ಸಣ್ಣ ಪುಟ್ಟ ಹೂಡಿಕೆಗಳಿಗಿಂತ ದೊಡ್ಡ ದೊಡ್ಡ ಹೂಡಿಕೆಗಳನ್ನು ಮಾಡುವುದು ಬೆಸ್ಟ್. ಹೀಗೆ ಮಾಡುವುದರಿಂದ ದೊಡ್ಡ %ನಲ್ಲಿ ಲಾಭ ಸಿಗುತ್ತದೆ. ಸಣ್ಣ ವಯಸ್ಸಿನಲ್ಲಿ ತಂದೆ ತಾಯಿ ನಮಗೆಂದು ಮಾಡುವ ಕೆಲಸಗಳನ್ನು ಲಘುವಾಗಿ ಪರಿಗಣಿಸುತ್ತೀವಿ ಆದರೆ ಒಂದು ದಿನ ನಾವೇ ತಂದೆ ತಾಯಿ ಆದ ಮೇಲೆ ಅದರ ಬೆಲೆ ತಿಳಿಯುತ್ತದೆ. ನಮ್ಮ ಬಗ್ಗೆ ನಾವು ಯೋಚನೆ ಮಾಡುವುದಿಲ್ಲಿ ಮಕ್ಕಳು ಮುಖ್ಯವಾಗುತ್ತರೆ' ಎಂದರು.
'ನಮ್ಮ ಮಗಳಿಗೆ ಏನೆಲ್ಲಾ ಮಾಡಬಹುದು ಎಂದು ಪತಿ ಜೊತೆ ಆಗಾಗ ಚರ್ಚೆ ಮಾಡುತ್ತಿರುವೆ. ಅದರ ಬಗ್ಗೆ ಯೋಚನೆ ಮಾಡಲು ಶುರು ಮಾಡಿದರೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಮಕ್ಕಳು ಹುಟ್ಟುವ ಮುನ್ನ ಸಣ್ಣ ಜಾಲಿ ಟ್ರಿಪ್ ಮಾಡಬಹುದು ಶಾಪಿಂಗ್ ಮಾಡಬೇಕು ಎಂದು ಎಷ್ಟು ಹಣ ಬೇಕಿದ್ದರೂ ಖರ್ಚು ಮಾಡಬಹುದಿತ್ತು ಆದರೆ ಈಗ ನಮ್ಮ ಮಗಳು ನಮಗೆ ಮುಖ್ಯ. ಎಲ್ಲಿ ಸೇವ್ ಮಾಡಿದರೆ ಎಲ್ಲಿ ಹೂಡಿಕೆ ಹಾಕಿದರೆ ಆಕೆಗೆ ಉಪಯೋಗವಾಗುತ್ತದೆ ಅನ್ನೋದು ನಮ್ಮ ಯೋಚನೆ ಆಗಿದೆ'
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.