
ಗಿರಿಜಾ ಲೋಕೇಶ್ ಮನೆ ವಿಡಿಯೋ ವೈರಲ್!
ಇದೊಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ. ಗಿರಿಜಾ ಲೋಕೇಶ್ (Girija Lokesh) ಅವರು ತಮ್ಮ ಸೊಸೆ ಗ್ರೀಷ್ಮಾ (ಸೃಜನ್ ಲೋಕೇಶ್ ಪತ್ನಿ) ಬಗ್ಗೆ ಹೇಳಿರೋ ಈ ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಟ್ರೋಲ್ ಆಗುತ್ತ ತುಂಬಾ ವೈರಲ್ ಆಗುತ್ತಿದೆ. ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದ ಈ ಮಾತು ಇದೀಗ ಸಿಕ್ಕಾಪಟ್ಟೆ ಟಾಕ್ ಆಫ್ ದ ನೆಟ್' ಆಗುತ್ತಿದೆ. ಹಾಗಿದ್ದರೆ ಯಾಕೆ ಗಿರಿಜಾ ಲೋಕೇಶ್ ಅವರು ಹಾಗೆ ಹೇಳಿದ್ದು? ಅದೂ ಕೂಡ ತಮ್ಮ ಮುದ್ದಿನ ಸೊಸೆ ಬಗ್ಗೆ?
ಹೌದು, ಈ ವೈರಲ್ ವಿಡಿಯೋ ಸಖತ್ ತಮಾಷೆಯಾಗಿದೆ. ಹಿರಿಯ ನಟಿ ಗಿರಿಜಾ ಲೋಕೇಶ್ ಮನೆಗೆ ಹೋಗಿ ಸಂದರ್ಶನ ತೆಗೆದುಕೊಳ್ಳುತ್ತಿರುವ ನಿರೂಪಕಿ 'ಈ ಮನೆಯಲ್ಲಿ ಟ್ರಾನ್ಸ್‌ಪೋರ್ಟ್ ಮಿನಿಸ್ಟರ್ ಯಾರು? ಅಂದ್ರೆ ಟೂರಿಸಂ ಡಿಪಾರ್ಟ್‌ಮೆಂಟ್ ಎನ್ನುತ್ತಲೇ, ಗಿರಿಜಾ ಲೋಕೇಶ್ ಮಗಳು ಪೂಜಾ ಲೋಕೇಶ್, ಮಗ ಸೃಜನ್, ಸೊಸೆ ಗ್ರೀಷ್ಮಾ ಸೇರಿದಂತೆ ಎಲ್ಲರೂ ಗಿರಿಜಾ ಲೋಕೇಶ್ ಅವರೇ ಅದು ಎನ್ನುತ್ತಾರೆ. 'ಅವರೇ ಹೆಚ್ಚಾಗಿ ಅಲ್ಲಿ ಇಲ್ಲಿ ಅಂತ ಟೂರ್-ಟ್ರಿಪ್‌ಗೆ ಹೋಗ್ತಾ ಇರ್ತಾರೆ ಎನ್ನುವ ಉತ್ತರ ಬರುತ್ತದೆ.
ಬಳಿಕ, ಈ ಮನೆನಲ್ಲಿ 'ಹೆಲ್ತ್ ಮಿನಿಸ್ಟರ್ ಯಾರು? ಯಾರು ಈ ಮನೆಯ ಊಟ-ತಿಂಡಿ ಜವಾಬ್ದಾರಿ ತಗೋತಾರೆ ಎಂಬ ಪ್ರಶ್ನೆಗೆ, ಪೂಜಾ, ಗಿರಿಜಾ, ಸೃಜನ್ ಎಲ್ಲರೂ ಅದು ಸೊಸೆ ಗ್ರೀಷ್ಮಾ ಎನ್ನುತ್ತಾರೆ. ಕಷಾಯ, ಊಟ-ತಿಂಡಿ ಎಲ್ಲಾನೂ ಅವಳೇ ಹೆಚ್ಚಾಗಿ ನೋಡಿಕೊಳ್ಳೊದು ಎನ್ನುವ ಮನೆಮಂದಿಗೆ ಭಾರೀ ಅಚ್ಚರಿ ಶಾಕ್ ಎಂಬಂತೆ ಗಿರಿಜಾ ಲೋಕೇಶ್ ಅವರು ಸಡನ್ನಾಗಿ ಆ ಮಾತು ಹೇಳುತ್ತಾರೆ- 'ನಮ್ಮನೆಲ್ಲಿ ನಾನು, ನನ್ ಮಗಳು ಎಲ್ಲಾ ಮೊದಲು ರಾತ್ರಿ ಮಿಕ್ಕಿರೋ ಅನ್ನನಾ ಮದುದಿನ ಬೆಳಿಗ್ಗೆ ಮೊಸರನ್ನ ಮಾಡಿಕೊಂಡು ತಿಂತಾ ಇದ್ವಿ. ಮದ್ವೆಯಾಗಿ ಇವ್ಳು (ಸೊಸೆ) ಮನೆಗೆ ಬಂದ್ಮೇಲೆ ನಮಗೆ ಅನ್ನವೇ ಇಲ್ಲ' ಎನ್ನುತ್ತಾರೆ.
ಗಿರಿಜಾ ಲೋಕೇಶ್ ಹೇಳಿದ್ದು ಅನ್ನ ಅಂದರೆ 'ತಂಗಳನ್ನ' ಎಂದು ಮಾತಿನ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡ ನಿರೂಪಕಿ ಅದನ್ನು ಬಹಿರಂಗವಾಗಿ ಹೇಳುತ್ತಾರೆ. ಸೊಸೆ ಗ್ರೀಷ್ಮಾ ಸೇರಿದಂತೆ, ಎಲ್ಲರೂ ನಗತೊಡಗುತ್ತಾರೆ. ಸೊಸೆ ಅನ್ನ ಮಿಕ್ಕದಂತೆ, ವೇಸ್ಟ್ ಆಗದಂತೆ ಅಷ್ಟು ಕರೆಕ್ಟ್ ಆಗಿ, ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ಅತ್ತೆ ಗಿರಿಜಾ ಲೋಕೇಶ್ ಅವರು ಪರೋಕ್ಷವಾಗಿ ಹೇಳಿದ್ದಾರೆ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುವ ಮೂಲಕ ಈ ಅತ್ತೆ-ಸೊಸೆ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ.
ಅತ್ತೆ-ಸೊಸೆ ಚೆನ್ನಾಗಿಯೇ ಇದ್ದಾರೆ ಎಂಬುದು ವಿಡಿಯೋ ನೋಡಿದರೇ ಅರ್ಥವಾಗುವಂತಿದೆ!
ಬಳಿಕ, ಈ ಮನೆಯಲ್ಲಿ 'ಅಬಕಾರಿ' ಇಲಾಖೆ ಯಾರದ್ದು? ಫೈನಾನ್ಸ್ ಮಿನಿಷ್ಟರ್ ಯಾರು ಎಂಬ ಎರಡು ಪ್ರಶ್ನೆಗೆ 'ಸೃಜನ್ ಲೋಕೇಶ್' ಎಂಬ ಉತ್ತರ ಬರುತ್ತದೆ. ಅದಕ್ಕೆ ಸಮಜಾಯಿಶಿ ನೀಡುವ ನಟ ಸೃಜನ್ (Srujan Lokesh), ಅಂದರೆ ಮನೆಯ ವ್ಯವಹಾರಗಳನ್ನು ನಾನು ನೋಡಿಕೊಳ್ತೇನೆ ಎನ್ನುತ್ತಾರೆ. ಜೊತೆಗೆ, ಅಬಕಾರಿ ಇಲಾಖೆ ಪ್ರಶ್ನೆಗೆ ಉತ್ತರಿಸುತ್ತ, 'ನಮ್ಮನೆಯಲ್ಲಿ ನಮ್ಮಮ್ಮ ಒಂದು ರೂಲ್ಸ್ ಮಾಡಿದ್ದಾರೆ. ಅದೇನೇ ಪಾರ್ಟಿ ಇದ್ರೂ ಮನೆನಲ್ಲೇ ಮಾಡ್ಬೇಕು, ಹೊರಗಡೆ ಹೋಗಿ ಸುದ್ದಿಯಾಗೋದು ಬೇಡ' ಅಂತಾರೆ ಎಂದಿದ್ದಾರೆ.
ಇನ್ನು, ಗ್ರೀಷ್ಮಾ ಅವರು ಈ ವೇಳೆ ತಮ್ಮಿಬ್ಬರ (ಸೃಜನ್-ಗ್ರೀಷ್ಮಾ) ಮದುವೆ ಫೋಟೋಗಳು ಇಲ್ಲ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಆಗೆಲ್ಲಾ ಪ್ರೀವೆಡ್ಡಿಂಗ್ ಫೋಟೋ ಶೂಟ್ ಟ್ರೆಂಡ್ಸ್ ಇರ್ಲಿಲ್ಲ. ನಮ್ಮ ಮದುವೆ ಫೋಟೋ ಆಲ್ಬಂ ಕೂಡ ಇಲ್ಲ. ಆದ್ರೆ ನಮ್ಮ ಮದುವೆ ಫಸ್ಟ್ ಆನಿವರ್ಸರಿನಲ್ಲಿ ನಮ್ಮ ಅತ್ತೆ ನಮ್ಮ ರಿಸೆಪ್ಶನ್ ಫೋಟೋದ ಆಲ್ಬಂ ಮಾಡ್ಸಿ ಗಿಫ್ಟ್ ಮಾಡಿದ್ದಾರೆ ಎಂಬ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಇವಿಷ್ಟು ಸದ್ಯ ಸುತ್ತುತ್ತಿರುವ ಗಿರಿಜಾ ಲೋಕೇಶ್ ಕುಟುಂಬದ ವೈರಲ್ ವಿಡಿಯೋ ಸಂಗತಿಗಳು. ಒಂಥರಾ ಮಜವಾಗಿದೆ, ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.